ಪ್ರತಿ ದಿನ ಆಹಾರ ನೀಡಿ ಆರೈಕೆ ಮಾಡುತ್ತಿದ್ದ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಹೆಬ್ಬಾವು!

ಹಾವು ಕೇಂದ್ರದಲ್ಲಿ ಸಾಕಲಾಗಿರುವ ಪ್ರಮುಖ ಪ್ರಬೇಧಗಳ ಹಾವುಗಳಿಗೆ ಪ್ರತಿ ದಿನ ಆಹಾರ ನೀಡಿ ಆರೈಕೆ ಮಾಡುತ್ತಿದ್ದ ಸಿಬ್ಬಂದಿ ಮೇಲೆ ದೈತ್ಯ ಹೆಬ್ಬಾವು ದಾಳಿ ಮಾಡಿದೆ. ಮುಂದೇನಾಯ್ತು? 

Giant python try to attack caretaker florida reptile expert video goes viral ckm

ಗಾಯಗೊಂಡ ಹಾವುಗಳಿಗೆ ಆರೈಕೆ, ಅಳಿಯುತ್ತಿರುವ ಹಾವುಗಳ ಸಂತತಿ ಹೆಚ್ಚಿಸುವ ಹಲವು ಕೇಂದ್ರಗಳಲ್ಲಿ ಭಾರಿ ವಿಷಕಾರಿಕ ಹಾವುಗಳನ್ನು ಸಾಕಲಾಗುತ್ತದೆ. ಹೀಗೆ ಹಾವು ಕೇಂದ್ರದಲ್ಲಿ ಪ್ರತಿ ದಿನ ಹಾವುಗಳಿಗೆ ಆಹಾರ ನೀಡಿ ಆರೈಕೆ ಮಾಡುತ್ತಿದ್ದ ಸಿಬ್ಬಂದಿ ಮೇಲೆ ದೈತ್ಯ ಹೆಬ್ಬಾವು ದಾಳಿ ಮಾಡಿದ ಘಟನೆ ನಡೆದಿದೆ. ಮೊಟ್ಟೆ ಮೇಲೆ ಕುಳಿತಿದ್ದ ಹೆಬ್ಬಾವಿನ ಕುರಿತು ವಿವರಣೆ ನೀಡುತ್ತಿರುವಾಗಲೇ ಹೆಬ್ಬಾವು ದಾಳಿ ಮಾಡಿದೆ. ಮೈ ಜುಮ್ಮೆನಿಸುವ ವಿಡಿಯೋ ಇದೀಗ ಸದ್ದು ಮಾಡುತ್ತಿದೆ.

ಜೇ ಬ್ರೆವರ್ ಅನ್ನೋ ಉರಗತಜ್ಞನ ಮೇಲೆ ದೈತ್ಯ ಹೆಬ್ಬಾವು ದಾಳಿ ಮಾಡಿದೆ.  ಜೇ ಬ್ರೆವರ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಪ್ರತಿ ದಿನ ಜೇ ಬ್ರೆವರ್ ಹಲವು ಹಾವುಗಳ ಆರೈಕೆ ಮಾಡುತ್ತಾರೆ. ಈ ಸರಿಸೃಪಗಳಿಗೆ ಆಹಾರ ನೀಡುತ್ತಾರೆ. ಹೀಗೆ ದೆಬ್ಬಾವಿಗೆ ಆಹಾರ ನೀಡಲು ಆಗಮಿಸಿದ್ದಾರೆ. ದೈತ್ಯ ಹೆಬ್ಬಾವು ಮರಿಗಳಿಗೆ ಜನ್ಮ ನೀಡಲು ಮೊಟ್ಟೆ ಮೇಲೆ ಕುಳಿತಿತ್ತು. ಆಹಾರ ನೀಡಲು ಬಂದ ಜೇ ಬ್ರೆವರ್, ವಿಡಿಯೋ ಕ್ಯಾಮೆರಾ ನೋಡಿ ವಿವರಣೆ ನೀಡುತ್ತಿದ್ದರು.

.ಮಗುವಿಗೆ ಔಷಧಿ ತರಲು ಹೋದ ತಾಯಿಯ ನುಂಗಿದ ಹೆಬ್ಬಾವು, ಒಂದೇ ತಿಂಗಳಲ್ಲಿ 2ನೇ ಘಟನೆ!

ಈ ವೇಳೆ ಮಲಗಿದ್ದ ಹಾವು ಏಕಾಏಕಿ ಹಾವು ದಾಳಿ ಮಾಡಿದೆ. ಆದರೆ ಉರಗ ತಜ್ಞ ಧೃತಿಗೆಡದೆ ಹಿಂದೆಕ್ಕೆ ಸರಿದು ಹಾವಿನ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಕೆಲವೇ ಕ್ಷಣಗಳ ಅಂತರದಲ್ಲಿ ಹಾವಿನ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಹೆಬ್ಬಾವು ಜೇ ಬ್ರೆವರ್ ಮುಖದ ಮೇಲೆ ದಾಳಿಗೆ ಮುಂದಾಗಿದೆ. ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.

ಈ ವಿಡಿಯೋ ಹಂಚಿಕೊಂಡಿರುವ ಜೇ ಬ್ರೆವರ್, ಹಾವುಗಳು ಸ್ಮಾರ್ಟ್ ಎಂದಿದ್ದಾರೆ. ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಹಾವುಗಳಿಗೆ ಆಹಾರ ನೀಡಿ ಆರೈಕೆ ಮಾಡಿದರೂ ದಾಳಿ ಮಾಡುತ್ತದೆ. ಹೀಗಾಗಿ ಹಾವುಗಳ ಜೊತೆ ಅದೆಷ್ಟೇ ವರ್ಷ ಕಳೆದರೂ, ಸರಿಸೃಪಗಳಿಗೆ ಭಯ, ಆತಂಕ ಎದುರಾದರೆ ದಾಳಿ ಮಾಡುತ್ತದೆ ಎಂದಿದ್ದಾರೆ. ಭಯಾನಕ ವಿಡಿಯೋ, ಮುಖಕ್ಕೆ ದಾಳಿ ಮಾಡಿದ ಹಾವು ಒಂದೇ ದಾಳಿಯಲ್ಲಿ ಸಿಬ್ಬಂದಿ ಕತೆ ಮುಗಿಸುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

 

 

ಹಾವುಗಳನ್ನು ಈ ರೀತಿ ಸಾಕುವುದು ಯಾಕೆ? ಇದಕ್ಕಿಂತ ಕಾಡಿನಲ್ಲಿ ಬಿಟ್ಟು ಬಿಡುವುದು ಒಳಿತು ಎಂದು ಕೆಲವರು ಸಲಹೆ ನೀಡಿದ್ದಾರೆ. ಹೆಬ್ಬಾವು ಸಂತತಿ ಹೆಚ್ಚಿಸುವ ಪ್ರಯತ್ನ ಯಾಕೆ? ಇದು ಅಸಮತೋಲನ ಸೃಷ್ಟಿಸಲಿದೆ. ಸಂತತಿ ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಆಗಬೇಕು. ಈ ಪ್ರಕ್ರಿಯಿಂದ ಅಸಮತೋಲನ ಸೃಷ್ಟಿಯಾಗಲಿದೆ ಎಂದಿದ್ದಾರೆ.

ನಾಪತ್ತೆಯಾದ 4 ಮಕ್ಕಳ ತಾಯಿ ಮೂರು ದಿನ ಬಳಿಕ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ!
 

Latest Videos
Follow Us:
Download App:
  • android
  • ios