ಗಾಜಾ ಶಿಬಿರ: 50 ಸಾವಿರ ನಿರಾಶ್ರಿತರಿಗೆ ಬರೀ 4 ಟಾಯ್ಲೆಟ್‌, 4 ತಾಸಷ್ಟೇ ನೀರು!

ಇಸ್ರೇಲ್‌ ದಾಳಿಯಿಂದ ತತ್ತರಿಸಿ ಹೋಗಿರುವ ಗಾಜಾ ಪಟ್ಟಿಯ ಭೀಕರತೆಯನ್ನು ಅಮೆರಿಕದ ನರ್ಸ್‌ ಒಬ್ಬರು ತೆರೆದಿಟ್ಟಿದ್ದಾರೆ. 

Gaza Refugee camp only 4 toilets 4 hours of water for 50 thousand refugees in Gaza strip american nurse Emily Callahan revealed A dark reality of Israel Hamas war akb

ನರ್ಸ್ ಹೇಳಿದ್ದೇನು?

ಗಾಜಾ ಪಟ್ಟಿಯಲ್ಲಿನ ಆಸ್ಪತ್ರೆಗಳು ರೋಗಿಗಳು, ಗಾಯಾಳುಗಳಿಂದ ತುಂಬಿಹೋಗಿವೆ
ಗಾಯಗೊಂಡವರು ಬಂದರೆ ಚಿಕಿತ್ಸೆ ನೀಡಿ ತಕ್ಷಣವೇ ಡಿಸ್ಚಾರ್ಜ್‌ ಮಾಡಲಾಗುತ್ತಿದೆ
ಯುದ್ಧದಲ್ಲಿ ಅಂಗವಿಕಲರಾದವರು, ಗಾಯಗೊಂಡವರು ಆಸ್ಪತ್ರೆಗೆ ಬರುತ್ತಿದ್ದಾರೆ
ಅವರು ನಮ್ಮ ಸಹಾಯ ಕೇಳುತ್ತಾರೆ. ಆದರೆ ಏನೂ ಮಾಡಲು ಆಗುವುದಿಲ್ಲ
ಸಾಯುತ್ತೇವೆ ಎಂದು ಗೊತ್ತಿದ್ದರೂ ವೈದ್ಯರು, ನರ್ಸ್‌ಗಳು ಸೇವೆ ನೀಡುತ್ತಿದ್ದಾರೆ
ಯಾವ ಜಾಗವೂ ಸುರಕ್ಷಿತವಲ್ಲ, ನಮ್ಮನ್ನು 5 ಬಾರಿ ಸ್ಥಳಾಂತರ ಮಾಡಿದ್ದರು

ಗಾಜಾ ಪಟ್ಟಿ: ಇಸ್ರೇಲ್‌ ದಾಳಿಯಿಂದ ತತ್ತರಿಸಿ ಹೋಗಿರುವ ಗಾಜಾ ಪಟ್ಟಿಯ ಭೀಕರತೆಯನ್ನು ಅಮೆರಿಕದ ನರ್ಸ್‌ ಒಬ್ಬರು ತೆರೆದಿಟ್ಟಿದ್ದಾರೆ. ನಾನು ಸೇವೆಯಲ್ಲಿದ್ದ ಪರಿಹಾರ ಶಿಬಿರದಲ್ಲಿ 50 ಸಾವಿರ ಜನರಿದ್ದರು. ಅವರಿಗೆಲ್ಲ ಅಲ್ಲಿರುವುದು ಬರೀ 4 ಶೌಚಾಲಯಗಳು ಹಾಗೂ ಅಲ್ಲಿ ಕೇವಲ 4 ತಾಸು ಮಾತ್ರ ನೀರು ಸರಬರಾಜು ಮಾಡಲಾಗುತ್ತಿತ್ತು ಎಂದು ಅವರು ಹೇಳಿದ್ದು, ಯುದ್ಧಪೀಡಿತ ದೇಶದಲ್ಲಿನ ಪರಿಸ್ಥಿತಿಯ ಕೈಗನ್ನಡಿಯಂತಿದೆ.

ಕಳೆದ ಬುಧವಾರ ಗಾಜಾದಿಂದ ಸ್ವದೇಶಕ್ಕೆ ಸ್ಥಳಾಂತರಿಸಲ್ಪಟ್ಟ ಅಮೆರಿಕ ಮೂಲದ ನರ್ಸ್ ಎಮಿಲಿ ಕ್ಯಾಲಹನ್ (Emily Callahan)ಅವರು ಸಂದರ್ಶನವೊಂದರಲ್ಲಿ ಮಾತನಾಡಿ, ‘ಇಸ್ರೇಲ್‌ನ ವೈಮಾನಿಕ ದಾಳಿಯಿಂದ ನಿರಾಶ್ರಿತರಾದವರಿಗೆ ಆಶ್ರಯ ನೀಡಲು ನಿರ್ಮಿಸಿದ್ದ ನಾನಿದ್ದ ಪರಿಹಾರ ಶಿಬಿರದಲ್ಲಿ 50,000ಕ್ಕೂ ಹೆಚ್ಚು ಜನರು ಇದ್ದರು. ಅಲ್ಲಿ ಬರೀ 4 ಶೌಚಾಲಯಗಳಿದ್ದವು (toilets) ಮತ್ತು ದಿನಕ್ಕೆ ನಾಲ್ಕು ಗಂಟೆ ಮಾತ್ರ ನೀರು ಸರಬರಾಜು (Water Supply) ಮಾಡಲಾಗುತ್ತಿತ್ತು. ಅಲ್ಲಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಗಾಯಾಳುಗಳು ಮತ್ತು ಯುದ್ಧದಲ್ಲಿ ಅಂಗವಿಕಲರಾದವರು ಇದ್ದರು. ತಮ್ಮ ಮಕ್ಕಳನ್ನು ನಮ್ಮ ಬಳಿ ಕರೆತರುತ್ತಿದ್ದ ಪೋಷಕರು ಸಹಾಯ ಕೇಳುತ್ತಿದ್ದರು. ಆದರೆ ಯಾವುದೇ ಸಹಾಯ ಮಾಡಲು ನಮಗೆ ಸಾಧ್ಯವಿರಲಿಲ್ಲ. ಅಷ್ಟೊಂದು ಅಸಹಾಯಕರಾಗಿದ್ದೆವು’ ಎಂದಿದ್ದಾರೆ.

ಬ್ಲಗರಿ ಮಂಗಳಸೂತ್ರ, ಲೂಯಿ ವಿಟಾನ್‌ 'ರಾಣಿ ಪಿಂಕ್‌' ಸ್ಯಾಂಡಲ್ಸ್‌.. ಭಾರತೀಯವಾಗುತ್ತಿದೆ ಜಾಗತಿಕ ಐಷಾರಾಮಿ ಬ್ರ್ಯಾಂಡ್‌ಗಳು!

ಅಲ್ಲದೇ ‘ಗಾಜಾ ಪಟ್ಟಿಯಲ್ಲಿರುವ (Gaza Strip) ದಾದಿಯರು ಮತ್ತು ವೈದ್ಯರು ತಾವು ಸಾಯುತ್ತೇವೆ ಎಂದು ತಿಳಿದಿದ್ದರೂ ಅದ್ಹೇಗೋ ಬದುಕು ನಡೆಸಿದ್ದಾರೆ. ಗಾಜಾದಲ್ಲಿ ಯಾವುದೇ ಸುರಕ್ಷಿತ ಸ್ಥಳವಿಲ್ಲ. 26 ದಿನದಲ್ಲಿ ನಾವು 5 ಬಾರಿ ಸ್ಥಳಾಂತರಗೊಂಡಿದ್ದೇವೆ’ ಎಂದಿದ್ದಾರೆ. ಆಸ್ಪತ್ರೆಯ ಪರಿಸ್ಥಿತಿ ವಿವರಿಸಿದ ಅವರು, ‘ಜನರ ಮುಖ, ಕುತ್ತಿಗೆ, ಕೈ ಕಾಲು ಸೇರಿ ದೇಹದಲ್ಲಿ ದೊಡ್ಡ ಪ್ರಮಾಣದ ಗಾಯಗಳಾಗಿದ್ದವು, ಆಸ್ಪತ್ರೆ ತುಂಬಿ ಹೋಗಿರುವ ಕಾರಣ ಚಿಕಿತ್ಸೆ ನೀಡಿದ ತಕ್ಷಣವೇ ಜನರನ್ನು ಡಿಸ್ಚಾರ್ಜ್ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

ಆದರೆ ಈಗ ನನ್ನ ಕುಟುಂಬದೊಂದಿಗೆ ತವರು ಸೇರಿಕೊಂಡಿದ್ದೇನೆ. 26 ದಿನಗಳಲ್ಲಿ ಮೊದಲ ಬಾರಿಗೆ ಸುರಕ್ಷಿತವಾಗಿರುದ್ದೇನೆ ಎಂಬ ಸಮಾಧಾನದ ಭಾವನೆ ನನಗಿದೆ. ಆದರೆ ಎಲ್ಲರನ್ನೂ ಬಿಟ್ಟು ನಾನೊಬ್ಬಳೇ ಸುರಕ್ಷಿತವಾಗಿರುವುದರ ಬಗ್ಗೆ ಬೇಸರವಿದೆ ಎಂದೂ ವ್ಯಥೆ ಪಟ್ಟಿದ್ದಾರೆ.

ಭಗವದ್ಗೀತೆ ಅಶ್ಲೀಲ, ಅಸಹ್ಯಕರ ಗ್ರಂಥ, ಸ್ಲೋವೆನಿಯಾದ ತತ್ವಜ್ಞಾನಿಯ ವಿವಾದಾತ್ಮಕ ಮಾತು!

ಯಾರು ಈ ಎಮಿಲಿ?

ಸ್ವಿಜರ್ಲೆಂಡ್‌ನಲ್ಲಿ 'ಡಾಕ್ಟರ್ಸ್‌ ವಿತೌಟ್‌ ಬಾರ್ಡರ್ಸ್‌' ಎಂಬ ಸಂಸ್ಥೆ ಇದೆ. ಯುದ್ಧಪೀಡಿತ ಸ್ಥಳಗಳ ಜನರಿಗೆ ಮಾನವೀಯ ನೆಲೆಯಲ್ಲಿ ಈ ಸಂಸ್ಥೆ ಚಿಕಿತ್ಸೆ ನೀಡುತ್ತದೆ. ಆ ಸಂಸ್ಥೆಯ ಮೂಲಕ ಎಮಿಲಿ ಕ್ಯಾಲಹನ್‌ ಗಾಜಾದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಯುದ್ಧ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ತನ್ನ ಪ್ರಜೆಯಾಗಿರುವ ಎಮಿಲಿ ಅವರನ್ನು ಅಮೆರಿಕ ತನ್ನ ದೇಶಕ್ಕೆ ವಾಪಸ್‌ ಕರೆಸಿಕೊಂಡಿದೆ.

Latest Videos
Follow Us:
Download App:
  • android
  • ios