ಬ್ಲಗರಿ ಮಂಗಳಸೂತ್ರ, ಲೂಯಿ ವಿಟಾನ್ 'ರಾಣಿ ಪಿಂಕ್' ಸ್ಯಾಂಡಲ್ಸ್.. ಭಾರತೀಯವಾಗುತ್ತಿದೆ ಜಾಗತಿಕ ಐಷಾರಾಮಿ ಬ್ರ್ಯಾಂಡ್‌ಗಳು!
ಜಾಗತಿಕ ಐಷಾರಾಮಿ ಬ್ರ್ಯಾಂಡ್‌ಗಳು ಕಳೆದ ವರ್ಷದಿಂದ ಭಾರತೀಕರಣದತ್ತ ಹೆಚ್ಚಾಗಿ ವಾಲುತ್ತಿದೆ. ಈ ವರ್ ಕೂಡ ಹಲವು ಬ್ರ್ಯಾಂಡ್‌ಗಳು ಭಾರತೀಯರ ಟೇಸ್ಟ್‌ಗೆ ತಕ್ಕಂತೆ ತನ್ನ ಉತ್ಪನ್ನಗಳನ್ನು ಸಿದ್ದ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ನವದೆಹಲಿ (ನ.9): ಜಾಗತಿಕ ಐಷಾರಾಮಿ ಬ್ರ್ಯಾಂಡ್‌ಗಳು ಭಾರತೀಕರಣದತ್ತ ಒಲವು ತೋರುತ್ತಿರುವ ಟ್ರೆಂಡ್ ಈ ವರ್ಷವೂ ಮುಂದುವರಿದಿದೆ. ಕಳೆದ ವರ್ಷ ಜಗತ್ತಿನ ಕೆಲವು ಐಷಾರಾಮಿ ಬ್ರ್ಯಾಂಡ್‌ಗಳು ಭಾರತೀಕರಣದ ಭಾಗವಾಗಿ ದೇಶದ ಜನರ ಟೇಸ್ಟ್‌ಗೆ ತಕ್ಕಂತೆ ತನ್ನ ಉತ್ಪನ್ನಗಳನ್ನು ಸಿದ್ಧ ಮಾಡಿದ್ದವು. ಈ ಬಾರಿ ಇನ್ನೂ ಕೆಲವು ಐಷಾರಾಮಿ ಬ್ರ್ಯಾಂಡ್‌ಗಳು ಈ ಪಟ್ಟಿಗೆ ಸೇರಿವೆ. ಇಟಲಿಯ ಲಕ್ಸುರಿ ಬ್ರ್ಯಾಂಡ್ ಆಗಿರುವ ಬ್ಲಗರಿ, ಇಂಡಿಯನ್ ಓನ್ಲಿ ಜ್ಯುವೆಲ್ಲರಿ 'ಮಂಗಳಸೂತ್ರ'ವನ್ನು ಬಿಡುಗಡೆ ಮಾಡಿದ್ದರೆ, ಫ್ರೆಂಚ್‌ನ ಪ್ರಖ್ಯಾತ ಫ್ಯಾಶನ್ ಹೌಸ್ ಲೂಯಿಸ್ ವಿಟಾನ್ ಹಬ್ಬದ ಋತುವಿಗೆ 'ರಾಣಿ ಪಿಂಕ್' ಫೆಸ್ಟಿವ್ ಫೂಟ್‌ವೇರ್ ಕಲೆಕ್ಷನ್‌ಅನ್ನು ಬಿಡುಗಡೆ ಮಾಡಿದೆ. ಈ ಬ್ರ್ಯಾಂಡ್‌ಗಳು ಭಾರತದಲ್ಲಿ ತನ್ನ ಛಾಪು ಮೂಡಿಸುವ ನಿಟ್ಟಿನಲ್ಲಿ ತನ್ನ ಪ್ರಯತ್ನವನ್ನು ಆರಂಭಿಸಿದೆ. ಭಾರತದ ಐಷಾರಾಮಿ ಗ್ರಾಹಕ ವಸ್ತುಗಳ ಮಾರುಕಟ್ಟೆಯು ಹಬ್ಬದ ಮತ್ತು ಮದುವೆಯ ಋತುವಿನ ನಡುವೆ ದೊಡ್ಡ ಮಟ್ಟದ ಮಾರಾಟವನ್ನು ಕಾಣುತ್ತದೆ. ಭಾರತದಲ್ಲಿ ತನ್ನ ಅಸ್ತಿತ್ವವನ್ನು ಹೊಂದಿರುವ ಐಷಾರಾಮಿ ರಿಟೇಲ್ ವ್ಯಾಪಾರಿಗಳ ಈ ತ್ರೈಮಾಸಿಕದಲ್ಲಿ ಶೇ. 30 ರಿಂದ 40ರಷ್ಟು ವ್ಯಾಪಾರ ಹೆಚ್ಚಳ ನಿರೀಕ್ಷೆ ಮಾಡಿದ್ದಾರೆ. ಪ್ರಸ್ತುತ ವಿಶ್ವದ ಎಲ್ಲಾ ಐಷಾರಾಮಿ ಬ್ರ್ಯಾಂಡ್‌ಗಳಿಗೆ ಭಾರತ ದೊಡ್ಡ ಮಾರುಕಟ್ಟೆಯಾಗಿ ಕಂಡಿದೆ.
ಐಕಾನಿಕ್ ಫ್ಯಾಶನ್ ಹೌಸ್‌ಗಳು ಮಾತ್ರವಲ್ಲ, ಐಷಾರಾಮಿ ಆಟೋಮೋಟಿವ್ ದೈತ್ಯ ಕಂಪನಿಗಳು ಕೂಡ ಭಾರತದ ಬಗ್ಗೆ ಉತ್ಸುಕವಾಗಿದೆ. ಭಾರತದ ಜನರಲ್ಲಿ ಪ್ರೀಮಿಯಂ ವಸ್ತುಗಳನ್ನು ಬಳಸುವ ಅಭಿಲಾಷೆ ಏರಿಕೆಯಾಗಿದ್ದನ್ನೂ ಅವರು ಗಮನಿಸಿದ್ದಾರೆ. ಈ ಬ್ರ್ಯಾಂಡ್‌ಗಳು ಕೇವಲ ತಮ್ಮ ಮಳಿಗೆಗಳನ್ನು ಮಾತ್ರವಲ್ಲ, ಆಧುನಿಕತೆ ಸ್ಪರ್ಶವಿರುವ ಭಾರತೀಯತೆಗೆ ತಕ್ಕಂತ ಉತ್ಪನ್ನಗಳನ್ನು ವಿನ್ಯಾಸ ಮಾಡುತ್ತಿವೆ.
ಬ್ಲಗರಿ, ಲೂಯಿ ವಿಟಾನ್ ಮಾತ್ರವಲ್ಲ, ಇಂಗ್ಲೆಂಡ್‌ನ ಫ್ಯಾಶನ್ ದೈತ್ಯ ಜಿಮ್ಮಿ ಚೂ ಇತ್ತೀಚೆಗೆ ದೀಪಾವಳಿ ಕ್ಯಾಪ್ಸುಲ್ ಕಲೆಕ್ಷನ್ ಬಿಡುಗಡೆ ಮಾಡಿದೆ. ಇನ್ನೊಂದೆಡೆ, ಐಷಾರಾಮಿ ಬ್ಯಾಗ್ ಬ್ರ್ಯಾಂಡ್ ಆಗಿರುವ ಕೋಚ್, ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಭಾರತೀಯರಿಗೆ ತಕ್ಕಂದ ವೇರ್ ಯುವರ್ ಶೈನ್ ಕಲೆಕ್ಷನ್ ಬ್ಯಾಗ್ ರಿಲೀಸ್ ಮಾಡಿದೆ.
ಕೇವಲ ಹೊಸ ಕಲೆಕ್ಷನ್‌ಗಳು ಮಾತ್ರವಲ್ಲ, ಬ್ರ್ಯಾಂಡ್‌ಗಳು ಭಾರತದಲ್ಲಿ ಹೆಚ್ಚಿನ ಮಳಿಗೆಗಳು ಮತ್ತು ದೊಡ್ಡ ಸ್ಥಳಗಳೊಂದಿಗೆ ತಮ್ಮ ಅಸ್ತಿತ್ವವನ್ನು ಹೆಚ್ಚಿಸುತ್ತಿವೆ. ಐಷಾರಾಮಿ ಬ್ರಾಂಡ್‌ಗಳಾದ ಗುಚ್ಚಿ, ಕಾರ್ಟಿಯರ್ ಮತ್ತು ಲೂಯಿ ವಿಟಾನ್, ಮುಂಬೈನಲ್ಲಿ ಹೊಸದಾಗಿ ಪ್ರಾರಂಭಿಸಲಾದ ಜಿಯೋ ವರ್ಲ್ಡ್ ಪ್ಲಾಜಾ ಮಾಲ್‌ನಲ್ಲಿ ಮಳಿಗೆಗಳನ್ನು ತೆರೆದಿವೆ. ಸ್ಪ್ಯಾನಿಷ್ ಕೌಚರ್ ಬ್ರಾಂಡ್, ಬಾಲೆನ್ಸಿಯಾಗ, ಮುಂಬೈನ ಅದೇ ಮಾಲ್‌ನಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆದಿದೆ. ದೆಹಲಿಯ ಡಿಎಲ್‌ಎಫ್ ಎಂಪೋರಿಯೊದಲ್ಲಿ ಅನೇಕ ಐಷಾರಾಮಿ ಬ್ರಾಂಡ್‌ಗಳು ತನ್ನ ಮಳಿಗೆ ತೆರೆದಿವೆ ಎಂದು ಡಿಎಲ್‌ಎಫ್‌ನ ಮಾರ್ಕೆಟಿಂಗ್ ಮತ್ತು ರಿಟೇಲ್ ಮುಖ್ಯಸ್ಥ ಪುಷ್ಪಾ ಬೆಕ್ಟರ್ ಹೇಳಿದ್ದಾರೆ.
ಅಂಬಾನಿಯ ಐಷಾರಾಮಿ ಜಿಯೋ ಮಾಲ್‌ನಲ್ಲಿ ಮಳಿಗೆ ತೆರೆಯಲಿರೋ ವಿಶ್ವದ ನಂ. 1 ಶ್ರೀಮಂತ ವ್ಯಕ್ತಿ: ತಿಂಗಳ ಬಾಡಿಗೆ ಎಷ್ಟು ನೋಡಿ..
Bain & Co ವರದಿಯ ಪ್ರಕಾರ, 2030 ರ ವೇಳೆಗೆ, ಭಾರತದಲ್ಲಿ ಐಷಾರಾಮಿ ಮಾರುಕಟ್ಟೆಯು $ 200 ಶತಕೋಟಿಯನ್ನು ತಲುಪಬಹುದು. ಯುರೋಮಾನಿಟರ್ ಇಂಟರ್‌ನ್ಯಾಶನಲ್‌ನ ಮತ್ತೊಂದು ವರದಿಯು ಭಾರತದ ಐಷಾರಾಮಿ ಮಾರುಕಟ್ಟೆಯು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದೆ ಎಂದು ಹೇಳುತ್ತದೆ, 2023 ರಲ್ಲಿ $ 8.5 ಶತಕೋಟಿ ಯೋಜಿತ ಮೌಲ್ಯದೊಂದಿಗೆ. ಭಾರತದ ಆರ್ಥಿಕ ಬೆಳವಣಿಗೆ ಮತ್ತು ವಿಸ್ತರಿಸುತ್ತಿರುವ ಮಧ್ಯಮ ಮತ್ತು ಮೇಲ್ವರ್ಗವು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. 2022 ರಲ್ಲಿ 12,069 ರಿಂದ 2027 ರಲ್ಲಿ 19,119 ವ್ಯಕ್ತಿಗಳಿಗೆ 2027 ರಲ್ಲಿ 19,119 ವ್ಯಕ್ತಿಗಳಿಗೆ ಐಷಾರಾಮಿ ಉತ್ಪನ್ನಗಳ ಬಳಕೆ ಏರಿಕೆಯಾಗಿದೆ. ಮುಂದಿನ ಐದು ವರ್ಷಗಳಲ್ಲಿ $ 30 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿರುವ ಭಾರತದ ಅಲ್ಟ್ರಾ-ಹೈ-ನೆಟ್ ವರ್ತ್ ವ್ಯಕ್ತಿಗಳು (UHNWI) 58.4% ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ಕಲ್ಲುಪ್ಪಿಗಿಂತ ಚಿಕ್ಕದಾದ ಲೂಯಿಸ್ ವಿಟಾನ್ ಬ್ಯಾಗ್ ಹರಾಜಿನಲ್ಲಿ 51 ಲಕ್ಷಕ್ಕೆ ಸೇಲ್!