Asianet Suvarna News Asianet Suvarna News

ಚೀನಾದ ನ್ಯೂಕ್ಲಿಯರ್ ಪವರ್‌ ಪ್ಲಾಂಟ್‌ನಲ್ಲಿ ಸೋರಿಕೆ: ಎಚ್ಚರಿಸಿದ್ದ ಫ್ರಾನ್ಸ್ ಕಂಪನಿ!

* ಕೊರೋನಾ ಹಬ್ಬಿಸಿರುವ ಆರೋಪದ ಬೆನ್ನಲ್ಲೇ ಮತ್ತೊಂದು ವಿವಾದದಲ್ಲಿ ಚೀನಾ

* ಚೀನಾದ ನ್ಯೂಕ್ಲಿಯರ್ ಪವರ್‌ ಪ್ಲಾಂಟ್‌ನಲ್ಲಿ ಸೋರಿಕೆ

* ಚೀನಾಗೆ ಈ ಮೊದಲೇ ಎಚ್ಚರಿಕೆ ನೀಡಿದ್ದ ಫ್ರಾನ್ಸ್ ಕಂಪನಿ

French Nuclear Firm Seeks To Resolve Performance Issue At China Plant pod
Author
Bangalore, First Published Jun 15, 2021, 12:16 PM IST

ಬೀಜಿಂಗ್(ಜೂ.15): ವಿಶ್ವಾದ್ಯಂತ ಕೊರೋನಾ ಸೋಂಕು ಹರಡಿಸಿರುವ ಆರೋಪ ಹೊತ್ತುಕೊಂಡಿರುವ ಚೀನಾ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದೆ. ಚೀನಾದ ನ್ಯೂಕ್ಲಿಯರ್ ಪವವರ್ ಪ್ಲಾಂಟ್‌ನಲ್ಲಿ ಸೋರಿಕೆಯಾಗುತ್ತಿರುವ ಪ್ರಕರಣ ಬೆನ್ನಲ್ಲೇ ಹೊಸ ವಿಚಾರವೊಂದು ಬಯಲಾಗಿದೆ. ಈ ಪರಮಾಣು ಸ್ಥಾವರ ನಿರ್ಮಾಣದಲ್ಲಿ ಚೀನಾದ ಕಂಪನಿ ಜನರಲ್ ನ್ಯೂಕ್ಲಿಯರ್ ಪವರ್ ಗ್ರೂಪ್ (ಸಿಜಿಎನ್) ನ ಭಾಗವಾಗಿರುವ ಫ್ರೆಂಚ್ ವಿದ್ಯುತ್ ಕಂಪನಿ ಇಡಿಎಫ್ ಸೋಮವಾರದಂದು ತನಗೆ ಈ ಪ್ಲಾಂಟ್‌ನಲ್ಲಿ Inert gas ಬಗೆಗಿನ ಮಾಃಇತಿ ಸಿಕ್ಕಿತ್ತು ಎಂದು ಬಹಿರಂಗಪಡಿಸಿದೆ.

ಜಗತ್ತಿನಾದ್ಯಂತ ಭೌಗೋಳಿಕ, ರಾಜಕೀಯ ಬದಲಾವಣೆಗೆ ಸಾಕ್ಷಿಯಾದ ಲಡಾಖ್ ಸಂಘರ್ಷ!

ಎಚ್ಚರಿಕೆ ಕೊಟ್ಟಿದ್ದ ಫ್ರಾನ್ಸ್ ಕಂಪನಿ

ಈ ಅಣು ಸ್ಥಾವರ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ತೈಶಾನ್‌ನಲ್ಲಿದೆ. ಸೋರಿಕೆ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಉಭಯ ಕಂಪನಿಗಳ ಪರಿಶೀಲನಾ ಸಭೆಯ ನಂತರ, ಫ್ರೆಂಚ್ ವಿದ್ಯುತ್ ಕಂಪನಿ ಇಡಿಎಫ್ ಸೋರಿಕೆಯಿಂದ ಉಂಟಾಗುವ ರೇಡಿಯಾಲಜಿಕಲ್ ಅಪಾಯದ ಬಗ್ಗೆ ಎಚ್ಚರಿಕೆ ನೀಡಿತ್ತು. ಈ ಕುರಿತಾಗಿ ಮಾಧ್ಯಮ ಸಮೂಹ CNN ವಿಶೇಷ ವರದಿಯನ್ನೂ ಪ್ರಕಟಿಸಿದೆ.

ತನ್ನದೇನೂ ತಪ್ಪಿಲ್ಲ ಎಂದ ಚೀನಾ ಕಂಪನಿ

ಸೋರಿಕೆಯುಂಟಾಗಿದ್ದರೂ, ಚೀನಾದ ಕಂಪನಿ ಸಿಜಿಎನ್ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. ಪರಮಾಣು ವಿದ್ಯುತ್ ಸ್ಥಾವರಗಳ ಮೇಲಿನ ಎಲ್ಲಾ ಸುರಕ್ಷತಾ ನಿಯಮಗಳನ್ನು ತಾನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ ಎಂದು ಅದು ಹೇಳಿಕೊಂಡಿದೆ. 2009ರಲ್ಲಿ ಆರಂಭವಾದ ಈ ಕಂಪನಿ, 2018 ಮತ್ತು 2019 ವಿದ್ಯುತ್ ಉತ್ಪಾದನೆ ಆರಂಭಿಸಿತು.

ಚೀನಾ ಬಾವಲಿಗಳಲ್ಲಿ 24 ಹೊಸ ಮಾದರಿ ಕೊರೋನಾ ವೈರಸ್‌ ಪತ್ತೆ!

ಅಮೆರಿಕಾದ ತನಿಖೆ ಈ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಫ್ರೆಂಚ್ ಕಂಪನಿಯು ಶೇ. 30 ರಷ್ಟು ಪಾಲುದಾರಿಕೆ ಹೊಂದಿದೆ. 2020ರಲ್ಲಿ ಮೊದಲ ಬಾರಿ ಇಲ್ಲಿ ಸೋರಿಕೆಯುಂಟಾಗಬಹುದೆಂಬ ಅನುಮಾನ ವ್ಯಕ್ತವಾಗಿತ್ತೆಂದು ಫ್ರಾನ್ಸ್ ಕಂಪನಿಯ ವಕ್ತಾರರು ಹೇಳಿದ್ದಾರೆ. ಆದರೆ ಈ ಸೋರಿಕೆಯನ್ನು ನೋಡಿ, ಇಡೀ ಸ್ಥಾವರ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳುವುದು ತಪ್ಪಾಗಬಹುದು. ಉಭಯ ಕಂಪನಿಗಳ ವಾದ ವಿಭಿನ್ನವಾಗಿದೆ ಹೀಗಾಗಿ ಅಮೆರಿಕಾ ಈ ವಿಚಾರವನ್ನು ಗಂಭೀರವಾಘಿ ಪರಿಗಣಿಸಿದೆ. ಈ ಹಿಂದೆಯೂ ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ಈ ವಿಷಯದ ಬಗ್ಗೆ ಸಭೆ ನಡೆಸುತ್ತಿತ್ತು. ವಾಸ್ತವವಾಗಿ, ಚೀನಾ ಪರಮಾಣು ಶಕ್ತಿಯ ಬಳಕೆಯನ್ನು ಉತ್ತೇಜಿಸಿದ್ದು, ಇಲ್ಲಿ ಶೇಕಡಾ 5 ರಷ್ಟು ವಿದ್ಯುತ್ ಪರಮಾಣು ವಿದ್ಯುತ್ ಸ್ಥಾವರಗಳಿಂದ ಉತ್ಪಾದಿಸಲಾಗುತ್ತಿದೆ.
 

Follow Us:
Download App:
  • android
  • ios