Asianet Suvarna News Asianet Suvarna News

ಬರಿಗೈಲಿ 48 ಮಹಡಿಯ ಗಗನಚುಂಬಿ ಕಟ್ಟಡ ಏರಿದ 60 ವರ್ಷದ ಪ್ಯಾರಿಸ್‌ನ SpiderMan

60 ವರ್ಷದ ವ್ಯಕ್ತಿಯೋರ್ವ 48 ಮಹಡಿಯ ಕಟ್ಟಡವನ್ನು ಯಾವುದೇ ಉಪಕರಣಗಳ ಸಹಾಯವಿಲ್ಲದೇ ವೇಗವಾಗಿ ಏರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

French man climbing 48 Storey highrise Building without using any tool akb
Author
First Published Sep 20, 2022, 10:29 AM IST

ಫ್ರಾನ್ಸ್‌: ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂಬುದನ್ನು ನಮ್ಮ ಅನೇಕ ಹಿರಿಯರು ಸಾಬೀತುಪಡಿಸಿದ್ದಾರೆ. ನಿನ್ನೆಯಷ್ಟೇ 82 ವರ್ಷದ ವೃದ್ಧರೊಬ್ಬರು 18 ರ ನವ ತರುಣನಂತೆ ಬಿಂದಾಸ್ ಆಗಿ ಕುಣಿದು ಕುಪ್ಪಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದೇ ರೀತಿ ಈಗ 60 ವರ್ಷದ ವ್ಯಕ್ತಿಯೋರ್ವ 48 ಮಹಡಿಯ ಕಟ್ಟಡವನ್ನು ಯಾವುದೇ ಉಪಕರಣಗಳ ಸಹಾಯವಿಲ್ಲದೇ ವೇಗವಾಗಿ ಏರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಫ್ರಾನ್ಸ್‌ನ ಅಲೈನ್ ರಾಬರ್ಟ್ (Alain Robert) ಎಂಬುವವರೇ ಹೀಗೆ ಆಕಾಶದೆತ್ತರದ ಕಟ್ಟಡವನ್ನು ಸರ ಸರನೇ ಏರಿ ಈಗ ಜಗತ್ತಿನ ಗಮನವನ್ನು ತಮತ್ತ ಸೆಳೆದವರು. ಈಗಾಗಲೇ ವಿಶ್ವದ ಹಲವು ಕಟ್ಟಡಗಳನ್ನು ಏರಿರುವ ಅಲೈನ್ ರಾಬರ್ಟ್ ಈಗಾಗಲೇ ವಿಶ್ವದ ಹಲವು ಎತ್ತರದ ಕಟ್ಟಡಗಳನ್ನು ಏರಿದ್ದಾರೆ. ಹೀಗಾಗಿ ಕಳೆದ ತಿಂಗಳು ಇವರು ತಮ್ಮ 60ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ 60ನೇ ವರ್ಷದ ಹುಟ್ಟುಹಬ್ಬದಂದು ಹೊಸ ಸಾಧನೆ ಮಾಡುವ ನಿರ್ಧಾರ ಮಾಡಿದ್ದರು. ಅದರಂತೆ ಕಳೆದ ಶನಿವಾರ ಈ ಸ್ಪೈಡರ್ ಮ್ಯಾನ್  ಏಕಾಂಗಿಯಾಗಿ ಯಾರದೇ ಸಹಾಯವಿಲ್ಲದೇ 48 ಮಹಡಿಯ ಕಟ್ಟಡವನ್ನು ಏರಿ ಹೊಸ ಸಾಧನೆ ಮಾಡಿದ್ದಾರೆ. ಈ ಮೂಲಕ ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.

ಕೆಂಪು ಬಟ್ಟೆಯನ್ನು ಧರಿಸಿ ರಾಬರ್ಟ್ ಅವರು ಪ್ಯಾರಿಸ್‌ನ 613 ಅಡಿಗಳಷ್ಟು ಎತ್ತರದ ಟೂರ್ ಟೋಟಲ್ ಕಟ್ಟಡವನ್ನು (Tour Total building) ಏರಿದರು. ಅವರು ಮೇಲಕ್ಕೆ ಏರಿ ಗುರಿ ತಲುಪುತ್ತಿದ್ದಂತೆ ತಮ್ಮ ತೋಳುಗಳನ್ನು ಎತ್ತಿದರು. ಡಿಫೆನ್ಸ್ 92 ರ ಪ್ರಕಾರ, ಅವರು ಕೇವಲ 60 ನಿಮಿಷಗಳಲ್ಲಿ ತನ್ನ ಗುರಿ ಮುಟ್ಟಿದ್ದಾರೆ. 

ಈ ಸಾಧನೆ ಬಳಿಕ ಮಾತನಾಡಿದ ಅವರು, 60 ವರ್ಷ ಪ್ರಾಯ ದೊಡ್ಡ ವಿಚಾರವಲ್ಲ. ಅದರ ನಂತರವೂ ನೀವು ಕ್ರೀಡಾಳುವಾಗಬಹುದು. ಯಾವಾಗಲೂ ಕ್ರೀಯಾಶೀಲರಾಗಿರಿ, ಅದ್ಭುತವೆನಿಸಿದ ಕೆಲಸಗಳನ್ನು ಮಾಡಿ ಎಂದು ಅವರು ಜನರಿಗೆ ಕರೆ ನೀಡಿದ್ದಾರೆ. ಹಲವು ವರ್ಷಗಳ ಹಿಂದೆ ನಾನು ನನಗೇ ಭರವಸೆ ನೀಡಿದೆ. ನಾನು 60 ವರ್ಷ ದಾಟಿದಾಗ ನಾನು ಈ  ಟೂರ್ ಟವರ್ ಅನ್ನು ಮತ್ತೆ ಏರುವೆ ಎಂದು ಭರವಸೆ ನೀಡಿಕೊಂಡೆ ಏಕೆಂದರೆ ಫ್ರಾನ್ಸ್‌ನಲ್ಲಿ(France) 60 ವರ್ಷ ವಿಶ್ರಾಂತ ಜೀವನವನ್ನು ಸಂಕೇತಿಸುವುದು. ಹೀಗಾಗಿ ಇದೊಂದು ಒಳ್ಳೆಯ ವಿಚಾರ ಎಂದು ಅವರು ಹೇಳಿದರು.

ಈ ಜನರೇಷನ್‌ನಲ್ಲಿ ಹುಟ್ಟಿದ್ರೆ ಈ ತಾತನ ಹಿಡಿಯಕ್ಕಾಗ್ತಿರ್ಲಿಲ್ಲ ಬಿಡಿ: ಹೆಂಗೆ ಕುಣಿತಾರೆ ನೋಡಿ

ಹಾಗಂತ 613 ಅಡಿ ಎತ್ತರದ ಟೋಟಲ್ ಎನರ್ಜಿ ಟವರ್ ಅನ್ನು ರಾಬರ್ಟ್ ಏರಿರುವುದು ಇದೇ ಮೊದಲೇನಲ್ಲ. ಹಲವಾರು ಭಾರಿ ಅವರು ಈ ಟವರ್ ಏರಿ, ಹವಾಮಾನ ಬದಲಾವಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ರಾಬರ್ಟ್ (Robert) ಅವರು ಜಗತ್ತಿನಾದ್ಯಂತ ಇರುವ ಎತ್ತರದ ಕಟ್ಟಡವನ್ನು ಏರುವುದರಲ್ಲಿ ಜನಪ್ರಿಯರಾಗಿದ್ದು, ಅವರ ಸಾಧನೆಗಳ ಸಾಲಿನಲ್ಲಿ ದುಬೈನ ಬುರ್ಜಿ ಖಲೀಫಾ (Burj Khalifa) ಕಟ್ಟಡವೂ ಸೇರಿದೆ. ಅದು ಜಗತ್ತಿನಲ್ಲಿ ಅತ್ಯಂತ ಎತ್ತರದ ಕಟ್ಟಡವಾಗಿದ್ದು, 828 ಮೀಟರ್ ಎತ್ತರವಿದೆ. ಆದರೆ ಹೀಗೆ ಕಟ್ಟಡಗಳನ್ನು ಹತ್ತುವ ಮುನ್ನ ಯಾವುದೇ ಅಗತ್ಯ ಅನುಮತಿಗಳನ್ನು ಪಡೆಯದೇ ಕಟ್ಟಡವೇರಿರುವುದರಿಂದ  ಹಲವು ಭಾರಿ ಇವರು ಹಲವು ದೇಶಗಳಲ್ಲಿ ಬಂಧನಕ್ಕೊಳಗಾಗಿದ್ದಾರೆ. ಬ್ರಿಟನ್, ಜರ್ಮನಿಯಲ್ಲೂ (Germany) ಇವರನ್ನು ಹಲವು ಭಾರಿ ಬಂಧಿಸಲಾಗಿದೆ. 

ಟೈಗರ್ ಜಿಂದಾ ಹೈ... ರಥವೇರಿ ಬಂದ 102 ವರ್ಷದ ಅಜ್ಜ, ಕಾರಣ ಕೇಳಿದ್ರೆ ಗಾಬರಿಯಾಗ್ತೀರಾ

ಅಲ್ಲದೇ ರಾಬರ್ಟ್ ಏಕಾಂಗಿಯಾಗಿ ಈ ಸಾಹಸ ಮಾಡುತ್ತಾರೆ. ಜೊತೆಗೆ ಯಾವುದೇ ಅಗತ್ಯ ಸಲಕರಣೆಗಳ ಸಹಾಯವನ್ನು ಕೂಡ ಇವರು ಪಡೆಯುವುದಿಲ್ಲ. ಕೇವಲ ತನ್ನ ಕೈಗಳು ಹಾಗೂ ಶೂಗಳನ್ನು ಬಳಸಿ ಗಗನಚುಂಬಿ ಕಟ್ಟಡಗಳನ್ನು ಏರುತ್ತಾರೆ. ಎತ್ತರಕ್ಕೆ ಎತ್ತರಕ್ಕೆ ಏರುವಾಗ ಬೆವರುವ ಕೈಗಳನ್ನು ಒಣಗಿದಂತೆ ಇರಿಸಲು ಅವರು ಒಂದು ಬ್ಯಾಗ್ ಚಾಕ್ ಪೌಡರ್‌ಗಳನ್ನು ತಮ್ಮ ಜೊತೆ ಇರಿಸಿಕೊಂಡಿರುತ್ತಾರೆ. ವಿಶ್ವದಾದ್ಯಂತ ಇವರು ಇದುವರೆಗೆ 100 ಅತ್ಯಂತ ಎತ್ತರದ ಕಟ್ಟಡಗಳನ್ನು ಬರಿಗೈಲಿ ಏಕಾಂಗಿಯಾಗಿ ಏರಿದ್ದಾರೆ. ಪ್ಯಾರಿಸ್‌ ನ ಖ್ಯಾತ ಐಫೆಲ್ ಟವರ್‌, (Eiffel Tower) ಮಲೇಷಿಯಾದ ಖ್ಯಾತ ಪೆಟ್ರೋನಸ್ ಟ್ವಿನ್ ಟವರ್ (Petronas Twin Towers)  ಹಾಗೂ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇರುವ ಸಿಡ್ನಿ ಒಪೆರಾ(Sydney Opera) ಕಟ್ಟಡ ಕೂಡ ಇವರು ಏರಿದ ಕಟ್ಟಡಗಳಲ್ಲಿ ಸೇರಿದೆ.
 

Follow Us:
Download App:
  • android
  • ios