ವಾಷಿಂಗ್ ಟನ್ (ಜೂ. 02)  ಕೊರೋನಾ ಲಸಿಕೆ ಪಡೆಯುವವರಿಗೆ ಅಮೆರಿಕದ ಅಧ್ಯಕ್ಷರು ಆಫರ್ ಕೊಟ್ಟಿದ್ದಾರೆ.ಲಸಿಕೆ ಪಡೆಯುವವರಿಗೆ ಉಚಿತ ಬಿಯರ್ ನೀಡುವುದಾಗಿ ಅಧ್ಯಕ್ಷ ಬೈಡನ್ ಘೋಷಣೆ ಮಾಡಿದ್ದಾರೆ.

ಮಂತ್ ಆಫ್ ಆಕ್ಷನ್ ಘೋಷಣೆ ಮಾಡಿರುವ ಶ್ವೇತ ಭವನ, ಜುಲೈ  4 ರಜೆಗೂ ಮುನ್ನ ಹೆಚ್ಚು ಲಸಿಕೆ ನೀಡಬೇಕಿದೆ ಅದನ್ನು ಉತ್ತೇಜಿಸಲು ಬೀಯರ್ ಆಫರ್ ನೀಡಿದೆ.

ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಶೇ.70 ರಷ್ಟು ವಯಸ್ಕ ಜನಸಂಖ್ಯೆಗೆ ಲಸಿಕೆ ನೀಡುವ ಹಾಗೂ ಬೇಸಿಗೆ ವೇಳೆಗೆ ಸಹಜ ಸ್ಥಿತಿಗೆ ಅಮೆರಿಕವನ್ನು ತರುವ ಗುರಿ ಹೊಂದಲಾಗಿದೆ ಎಂದು ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.

ಲಸಿಕೆ ತೆಗೆದುಕೊಂಡವರು ಮದ್ಯ ಸೇವನೆ ಮಾಡಬಹುದಾ? 

ಇದಲ್ಲದೆ ನಗದು ಬಹುಮಾನ, ಕ್ರೀಡೆಗೆ ಸಂಬಂಧಪಟ್ಟ ಟಿಕೆಟ್ ಜತೆಗೆ  ವೇತನ ಸಹಿತ ರಜೆ ಘೋಷಣೆ ಮಾಡಿದೆ.  ಮಂತ್ ಆಫ್ ಆಕ್ಷನ್  ಸರ್ಕಾರಿ-ಖಾಸಗಿ ಕ್ಷೇತ್ರದ ಪಾಲುದಾರಿಕೆಯಲ್ಲಿ ನಡೆಯುತ್ತಿದ್ದು, ಹೆಚ್ಚಿನ ಜನರು ಲಸಿಕೆ ಪಡೆಯುವುದಕ್ಕೆ ಉತ್ತೇಜಿಸುವುದು ಮುಖ್ಯ ಗುರಿ. ಸೆಲೆಬ್ರಿಟಿಗಳನ್ನು ಬಳಸಿಕೊಂಡು ಪ್ರಚಾರ ಮಾಡಲಾಗುತ್ತಿದೆ.

ಅಮೆರಿಕದ ವಯಸ್ಕ ಜನಸಂಖ್ಯೆಯ ಶೇ.62.8 ರಷ್ಟು ಮಂದಿ ಒಂದು ಡೋಸ್ ಲಸಿಕೆ ಪಡೆದಿದ್ದಾರೆ.  133.6 ಮಿಲಿಯನ್  ಜನರು ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೊಸದಾಗಿ ಲಸಿಕೆ ಹಾಕಿಸಿಕೊಳ್ಳುತ್ತಿರುವವರ ಸಂಖ್ಯೆ ಕುಸಿಯುತ್ತಿದ್ದು, ದಿನವೊಂದಕ್ಕೆ ಸರಾಸರಿ 6 ಲಕ್ಷ ಮಂದಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುತ್ತಿರುವರ ಸಂಖ್ಯೆ ಕುಸಿತ ಕಂಡಿದ್ದಕ್ಕೆ ಆಫರ್ ನೀಡಲಾಗಿದೆ.

ಬೈಡನ್ ಶೇ.70 ರಷ್ಟು ಮಂದಿಗೆ ಲಸಿಕೆ ನೀಡುವ ಗುರಿ ದಾಟಿದರೆ, 21 ವಯಸ್ಸು ಮೀರಿದ ಅಮೆರಿಕನ್ನರಿಗೆ ಉಚಿತವಾಗಿ ಬೀಯರ್ ನೀಡುವುದಾಗಿ  ಅನ್ಹ್ಯೂಸರ್-ಬುಷ್ (ಮದ್ಯದ ಕಂಪನಿ) ಘೋಷಿಸಿತ್ತು.  ಮೊದಲ 200,000 ಅದೃಷ್ಟಶಾಲಿಗಳಿಗೆ 5  ಡಾಲರ್ ಕ್ರೆಡಿಟ್ ನೀಡುವುದಾಗಿಯೂ ಘೋಷಿಸಿತ್ತು. 

ಭಾರತದಲ್ಲಿಯೂ ಅತಿದೊಡ್ಡ ಲಸಿಕಾ ಅಭಿಯಾನ ಮುಂದುವರಿದಿದೆ.  ಲಸಿಕೆ ಕೊರತೆ ಮಾತುಗಳು ಕೇಳಿಬಂದಿದ್ದು ಸರ್ಕಾರಗಳು ಪರಿಹಾರ ಕಲ್ಪಿಸುತ್ತಿವೆ. ಲಸಿಕೆ ಹಾಕಿಸಿಕೊಂಡವರು ಮದ್ಯ ಸೇವನೆ ಮಾಡಬಹುದಾ? ಎನ್ನುವ ಪ್ರಶ್ನೆ ಸಹ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.