ಜಗತ್ತಿನ ನಂ. 2 ಶ್ರೀಮಂತ ವ್ಯಕ್ತಿಗೆ ಶಾಕ್: ಪೊಲೀಸರ ತನಿಖೆ; ಕಾರಣ ಹೀಗಿದೆ..
ಫ್ರೆಂಚ್ ಬಿಲಿಯನೇರ್ ಬರ್ನಾರ್ಡ್ ಅರ್ನಾಲ್ಟ್ ಮತ್ತು ರಷ್ಯಾದ ಉದ್ಯಮಿ ನಡುವೆ ಸಂಭಾವ್ಯ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ನಡೆದಿರಬಹುದು ಎಂದು ತನಿಖೆ ನಡೆಯುತ್ತಿದೆ.
ಪ್ಯಾರಿಸ್ (ಅಕ್ಟೋಬರ್ 1, 2023): ಫ್ರಾನ್ಸ್ ಮೂಲದ ಬರ್ನಾರ್ಡ್ ಅರ್ನಾಲ್ಟ್ ಜಗತ್ತಿನ ನಂ. 2 ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕೆಲಕಾಲ ಅವರು ಎಲಾನ್ ಮಸ್ಕ್ ಅವರನ್ನೂ ಹಿಂದಿಕ್ಕಿ ನಂ. 1 ಶ್ರೀಮಂತ ವ್ಯಕ್ತಿಯೂ ಆಗಿದ್ದರು. ಈ ಬಿಲಿಯನೇರ್ ಉದ್ಯಮಿಗೆ ಶಾಕ್ ಎದುರಾಗಿದೆ. ಇದಕ್ಕೆ ಕಾರಣ ರಷ್ಯಾದ ಉದ್ಯಮಿಯೊಂದಿಗಿನ ವ್ಯವಹಾರ.
ರಷ್ಯಾದ ಉದ್ಯಮಿಯೊಂದಿಗೆ ಡೀಲ್ ಮಾಡಿಕೊಂಡಿರುವ ಬಗ್ಗೆ ಫ್ರಾನ್ಸ್ ಲೂಯಿಸ್ ವಿಟ್ಟನ್ (LVMH) ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಫ್ರೆಂಚ್ ಪ್ರಾಸಿಕ್ಯೂಟರ್‌ಗಳು ತನಿಖೆ ಮಾಡುತ್ತಿದ್ದಾರೆ. ಫ್ರೆಂಚ್ ಬಿಲಿಯನೇರ್ ಬರ್ನಾರ್ಡ್ ಅರ್ನಾಲ್ಟ್ ಮತ್ತು ರಷ್ಯಾದ ಉದ್ಯಮಿ ನಡುವೆ ಸಂಭಾವ್ಯ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ನಡೆದಿರಬಹುದು ಎಂದು ತನಿಖೆ ನಡೆಯುತ್ತಿದೆ.l
ಇದನ್ನು ಓದಿ: 40,000 ರೂ. ಗೂ ಕಡಿಮೆ ದರದಲ್ಲಿ ಐಫೋನ್ ಖರೀದಿಸ್ಬೇಕಾ? ಹಾಗಾದ್ರೆ ಇಲ್ಲಿದೆ ಸೂಪರ್ ಆಫರ್!
ಈ ಸಂಬಂಧ ಮಾಹಿತಿ ನೀಡಿದ ಪ್ಯಾರಿಸ್ ಪ್ರಾಸಿಕ್ಯೂಟರ್ ಕಚೇರಿ, ತನ್ನ ತನಿಖೆಯು ಫ್ರಾನ್ಸ್‌ನ ಮನಿ ಲಾಂಡರಿಂಗ್ ವಿರೋಧಿ ಘಟಕ Tracfinನಿಂದ ಎಚ್ಚರಿಕೆಯನ್ನು ಅನುಸರಿಸುತ್ತದೆ ಮತ್ತು 2022 ರಿಂದ ಪ್ರಾಥಮಿಕ ತನಿಖೆ ನಡೆಯುತ್ತಿದೆ ಎಂದೂ ಹೇಳಿದೆ. ಆದರೆ, ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ಬರ್ನಾರ್ಡ್ ಅರ್ನಾಲ್ಟ್ ಮುಖ್ಯ ಕಾರ್ಯನಿರ್ವಾಹಕ ಮತ್ತು ಐಷಾರಾಮಿ ಸಾಮ್ರಾಜ್ಯ LVMH ಮೊಯೆಟ್ ಹೆನ್ನೆಸ್ಸಿ ಲೂಯಿಸ್ ವಿಟಾನ್‌ನ ನಿಯಂತ್ರಕ ಷೇರುದಾರರಾಗಿದ್ದಾರೆ. ಮತ್ತು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಎಲಾನ್ ಮಸ್ಕ್ ನಂತರ ವಿಶ್ವದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇನ್ನು, ಅರ್ನಾಲ್ಟ್ ಪರ ವಕೀಲರು ಆರೋಪಗಳು ಅಸಂಬದ್ಧ ಮತ್ತು ಆಧಾರರಹಿತವಾಗಿವೆ ಎಂದು ಹೇಳಿದ್ದು, ಈ ವಿಷಯದ ಕುರಿತು ಯಾವುದೇ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ತನ್ನ ಕ್ಲೈಂಟ್ ಸಿದ್ಧರಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಐಫೋನ್‌ನಲ್ಲಿರೋ ಈ ಸೀಕ್ರೆಟ್ ಕೋಡ್‌ನಿಂದ ಕೋಟಿ ಕೋಟಿ ಹಣ ಉಳಿಸ್ತಿದೆ ಆ್ಯಪಲ್ ಕಂಪನಿ
ಬರ್ನಾರ್ಡ್ ಅರ್ನಾಲ್ಟ್ ಮತ್ತು ರಷ್ಯಾದ ಉದ್ಯಮಿ ನಿಕೋಲಾಯ್ ಸರ್ಕಿಸೊವ್ ನಡುವೆ ಅನುಮಾನಾಸ್ಪದ ಹಣ ವರ್ಗಾವಣೆ ನಡೆದಿದೆ ಫ್ರಾನ್ಸ್‌ನ ಹಣ ವರ್ಗಾವಣೆ - ವಿರೋಧಿ ಸಂಸ್ಥೆ ಪತ್ತೆ ಮಾಡಿದೆ ಎಂದು ಎಂದು ಫ್ರೆಂಚ್ ದಿನಪತ್ರಿಕೆ ಲೇ ಮೊಂಡೆ ಮಾಧ್ಯಮದಲ್ಲಿ ವರದಿಯಾದ ನಂತರ ಪ್ರಾಸಿಕ್ಯೂಟರ್‌ಗಳು ಹೇಳಿಕೆ ನೀಡಿದ್ದಾರೆ. 2018 ರಲ್ಲಿ ಫ್ರೆಂಚ್ ಆಲ್ಪ್ಸ್‌ನಲ್ಲಿರುವ ಕೋರ್ಚೆವೆಲ್‌ನಲ್ಲಿ ರಿಯಲ್ ಎಸ್ಟೇಟ್ ಅನ್ನು ಬರ್ನಾರ್ಡ್ ಅರ್ನಾಲ್ಟ್ ಸ್ವಾಧೀನಪಡಿಸಿಕೊಳ್ಳಲು ಸಂಬಂಧಿಸಿದ ವ್ಯವಹಾರಗಳು ಎಂದು ಹೇಳಲಾಗಿದೆ. ಆ ಒಪ್ಪಂದವು ಯಾವುದೇ ಸ್ಪಷ್ಟ ಸಮರ್ಥನೆಯಿಲ್ಲದೆ ಸುಮಾರು 2 ಮಿಲಿಯನ್ ಯುರೋಗಳಷ್ಟ ಅಂದರೆ ಸುಮಾರು 2.1 ಮಿಲಿಯನ್ ಡಾಲರ್ ಲಾಭವನ್ನು ರಷ್ಯಾ ಉದ್ಯಮಿಗೆ ಮಾಡಿಕೊಟ್ಟಿದೆ ಎಂದು ಫ್ರೆಂಚ್ ದಿನಪತ್ರಿಕೆ ಹೇಳಿದೆ. Tracfin ದಾಖಲೆಯನ್ನು ಉಲ್ಲೇಖಿಸಿ ವರದಿಯಾಗಿದೆ.
LVMH ಒಡೆತನದ Courchevel ನಲ್ಲಿ Cheval Blanc ಹೋಟೆಲ್ ಅನ್ನು ವಿಸ್ತರಿಸುವ ಗುರಿಯೊಂದಿಗೆ ತನ್ನ ಗ್ರಾಹಕರು ರಿಯಲ್ ಎಸ್ಟೇಟ್ ಅನ್ನು ಖರೀದಿಸಿದ್ದಾರೆ ಎಂದು ಅರ್ನಾಲ್ಟ್ ವಕೀಲರು ಹೇಳಿದ್ದಾರೆ. ಅಲ್ಲದೆ, ಕಾನೂನಿಗೆ ಅನುಸಾರವಾಗಿ ಮತ್ತು ಸಲಹೆಗಾರರ ಬೆಂಬಲದೊಂದಿಗೆ ಒಪ್ಪಂದವನ್ನು ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದರು. ಪ್ರಾಥಮಿಕ ತನಿಖೆಯ ನಂತರ, ಫ್ರೆಂಚ್ ಪ್ರಾಸಿಕ್ಯೂಟರ್‌ಗಳು ಔಪಚಾರಿಕ ತನಿಖೆಯನ್ನು ಪ್ರಾರಂಭಿಸಲು ಅಥವಾ ತನಿಖೆ ಕೈಬಿಡಲು ನಿರ್ಧರಿಸಬಹುದು.
ಇದನ್ನೂ ಓದಿ: ತಾಯಿಯಿಂದ ಪಡೆದ 2000 ರೂ. ನಿಂದ ವ್ಯಾಪಾರ ಪ್ರಾರಂಭ: ಹೇರ್ ಆಯಿಲ್ ಮಾರಾಟ ಮಾಡಿ 1651 ಕೋಟಿ ಗಳಿಸಿದ ಯಶಸ್ವಿ ಉದ್ಯಮಿ!