ತಾಯಿಯಿಂದ ಪಡೆದ 2000 ರೂ. ನಿಂದ ವ್ಯಾಪಾರ ಪ್ರಾರಂಭ: ಹೇರ್‌ ಆಯಿಲ್‌ ಮಾರಾಟ ಮಾಡಿ 1651 ಕೋಟಿ ಗಳಿಸಿದ ಯಶಸ್ವಿ ಉದ್ಯಮಿ!

2008 ರಲ್ಲಿ, ಅವರು ತಮಗೆ ಸಹಾಯ ಮಾಡಲೆಂದು ಕೂದಲು ರಕ್ಷಣೆಯ ಸೂತ್ರವನ್ನು ಮಾಡಿದರು. ಅದು ಕೆಲಸ ಮಾಡಿದ ನಂತರ, ಅವರು ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

meet sanjeev juneja who earned rs 1651 crore selling hair oil started business with rs 2000 borrowed from mother ash

ನವದೆಹಲಿ (ಅಕ್ಟೋಬರ್ 1, 2023): 46 ವರ್ಷದ ವ್ಯಕ್ತಿಯೊಬ್ಬರು ತನ್ನ ತಾಯಿಯಿಂದ 2000 ರೂಪಾಯಿ ಸಾಲ ಪಡೆದು ಕಂಪನಿಯೊಂದನ್ನು ಆರಂಭಿಸಿದ್ದರು. ಇಂದು, ಕಂಪನಿಯು ವಿಶ್ವದ ಅತಿದೊಡ್ಡ ಆಯುರ್ವೇದ ಸಂಸ್ಥೆಗಳಲ್ಲಿ ಒಂದಾಗಿದೆ. ಇದರ ವಹಿವಾಟು ನೂರಾರು ಕೋಟಿ. ಅವರು ಹಲವಾರು ಸೂಪರ್‌ಹಿಟ್‌ ಬ್ರ್ಯಾಂಡ್‌ಗಳನ್ನು ನಿರ್ಮಿಸಿದ್ದಾರೆ. ಸಂಜೀವ್ ಜುನೇಜಾ ವರ್ಷಗಳಲ್ಲಿ ಅನೇಕ ಆಯುರ್ವೇದ ಬ್ರ್ಯಾಂಡ್‌ಗಳನ್ನು ನಿರ್ಮಿಸಿದ್ದಾರೆ. 

ಸಂಜೀವ್ ಜುನೇಜಾ ಅವರ ತಂದೆ ಅಂಬಾಲಾದಲ್ಲಿ ಆಯುರ್ವೇದ ವೈದ್ಯರಾಗಿದ್ದರು. ಅವರಿಗೊಂದು ಚಿಕ್ಕ ಕ್ಲಿನಿಕ್ ಇತ್ತು. ಸಂಜೀವ್ ಜುನೇಜಾ ತಮ್ಮ ತಂದೆಯಿಂದ ಆಯುರ್ವೇದದ ಸೂಕ್ಷ್ಮತೆಗಳನ್ನು ಕಲಿತರು. 1999 ರಲ್ಲಿ, ಅವರ ತಂದೆಯ ಮರಣದ ನಂತರ, ಅವರು ತಮ್ಮ ತಂದೆಯ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲು ನಿರ್ಧರಿಸಿದರು.

ಇದನ್ನು ಓದಿ: ಸ್ಯಾಮ್ಸಂಗ್ ಪ್ರಿಯರಿಗೆ ಗುಡ್‌ ನ್ಯೂಸ್‌: ಅಕ್ಟೋಬರ್ 4 ರಂದು ನೂತನ ಪ್ರೀಮಿಯಂ ಫೋನ್‌ ಬಿಡುಗಡೆ; ವೈಶಿಷ್ಟ್ಯಗಳು ಹೀಗಿದೆ..

ನಂತರ 2003 ರಲ್ಲಿ ರಾಯಲ್ ಕ್ಯಾಪ್ಸೂಲ್ಸ್‌ನೊಂದಿಗೆ ತಮ್ಮ ಕಂಪನಿಯನ್ನು ಪ್ರಾರಂಭಿಸಿದರು. ತನ್ನ ವ್ಯವಹಾರಕ್ಕೆ ಹಣವನ್ನು ಮರುಹೂಡಿಕೆ ಮಾಡಿದರು. 2008 ರಲ್ಲಿ, ಅವರು ತಮಗೆ ಸಹಾಯ ಮಾಡಲೆಂದು ಕೂದಲು ರಕ್ಷಣೆಯ ಸೂತ್ರವನ್ನು ಮಾಡಿದರು. ಅದು ಕೆಲಸ ಮಾಡಿದ ನಂತರ, ಅವರು ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಇದು ಬೃಹತ್ ಬ್ರ್ಯಾಂಡ್ ಆಗಿದ್ದು, ಈ ಉತ್ಪನ್ನದ ಹೆಸರು ಕೇಶ್ ಕಿಂಗ್. ಅವರು ತಮ್ಮ ಉತ್ಪನ್ನಗಳನ್ನು  ಮನೆ-ಮನೆಗೆ ಮಾರಾಟವನ್ನೂ ಮಾಡಿದರು.

ಅವರು ಪತ್ರಿಕೆಗಳಂತೆ ಸ್ಥಳೀಯ ಚಾನೆಲ್‌ಗಳಲ್ಲಿ ಉತ್ಪನ್ನವನ್ನು ಮಾರಾಟ ಮಾಡಿದರು. ಜೂಹಿ ಚಾವ್ಲಾ ಕಂಪನಿಯ ಬ್ರ್ಯಾಂಡ್‌ ಅಂಬಾಸಿಡರ್ ಆದರು. ಸಂಸ್ಥೆಯು 300 ಕೋಟಿ ರೂಪಾಯಿಗಳ ಮಾರಾಟವನ್ನು ನೋಂದಾಯಿಸಿದಾಗ, ಇಮಾಮಿ ಸಂಸ್ಥೆ ಸಂಜೀವ್ ಜುನೇಜಾ ಅವರ ಕಂಪನಿಯನ್ನು 2015 ರಲ್ಲಿ 1651 ಕೋಟಿ ರೂಪಾಯಿಗೆ ಖರೀದಿಸಿತು.

ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ಪ್ರಾರಂಭ: ಅತ್ಯುತ್ತಮ ಕೊಡುಗೆಗಳ ವಿವರ ಹೀಗಿದೆ..

ನಂತರ ಅವರು ಪೇಟ್ ಸಫಾ ಎಂಬ ಮತ್ತೊಂದು ಉತ್ಪನ್ನವನ್ನು ತಯಾರಿಸಿದರು. ರಾಜು ಶ್ರೀವಾಸ್ತವ ಇದರ ಬ್ರ್ಯಾಂಡ್‌ ಅಂಬಾಸಿಡರ್ ಆಗಿದ್ದರು. ಅಲ್ಲದೆ, ಡಾಕ್ಟರ್‌ ಆರ್ಥೋ ಎಂಬ ಬ್ರ್ಯಾಂಡ್‌ಗೆ ಜಾವೇದ್ ಅಖ್ತರ್ ಅವರನ್ನು ಬ್ರ್ಯಾಂಡ್‌ ಅಂಬಾಸಿಡರ್ ಮಾಡಿದರು. ಹಾಗೂ, ರೂಪ್ ಮಂತ್ರ ಬ್ರ್ಯಾಂಡ್‌ ಅನ್ನೂ ಆರಂಭಿಸಿದರು. ಈ ಎಲ್ಲ ಬ್ರ್ಯಾಂಡ್‌ಗಳು ಸಿಕ್ಕಾಪಟ್ಟೆ ಹಿಟ್ ಆಗಿವೆ.

ಉದ್ಯಮಿ ಸಂಜೀವ್ ಜುನೇಜಾ ಚಂಡೀಗಢದ ಮೂಲದವರು, ಅವರು ಒಂದು ಕೋಣೆಯ ಕಚೇರಿಯೊಂದಿಗೆ ಉದ್ಯಮ ಪ್ರಾರಂಭಿಸಿದ್ದು,. ಕೇಶ್ ಕಿಂಗ್ ಹೇರ್ ಆಯಿಲ್ ಅವರ ಪ್ರಮುಖ  ಉತ್ಪನ್ನವಾಗಿತ್ತು. ಅವರು ಪ್ರೇರಕ ಭಾಷಣಕಾರರೂ ಅಗಿದ್ದಾರೆ.

ಇದನ್ನೂ ಓದಿ: ಗೂಗಲ್ ಸರ್ಚ್ ಜಾಸ್ತಿ ಬಳಕೆ ಮಾಡೋರೇ ಇಲ್ನೋಡಿ: ಇದು ಸಿಗರೇಟ್ ಅಥವಾ ಡ್ರಗ್ಸ್‌ಗೆ ಸಮ!

Latest Videos
Follow Us:
Download App:
  • android
  • ios