Asianet Suvarna News Asianet Suvarna News

ಇಸ್ರೇಲ್ ಬಳಿಕ ಹೆಚ್ಚು ಯಹೂದಿಗಳಿರುವ ಫ್ರಾನ್ಸ್ ಮೇಲೆ ಬಾಂಬ್ ದಾಳಿ ಬೆದರಿಕೆ, 6 ವಿಮಾನ ನಿಲ್ದಾಣ ಟಾರ್ಗೆಟ್!

ಶಂಕಿತ ಇಸ್ಲಾಮಿಸ್ಟ್ ದಾಳಿಯಿಂದ ಶಿಕ್ಷಕಿ ಹತ್ಯೆಯಾದ ಬೆನ್ನಲ್ಲೇ ಫ್ರಾನ್ಸ್‌ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯಿಂದ ಇದೀಗ ಇಸ್ರೇಲ್ ಮೇಲೆ ಪದೆ ಪದೇ ದಾಳಿ ಬೆದರಿಕೆ ಬರುತ್ತಿದೆ. ಇದೀಗ ಫ್ರಾನ್ಸ್‌ನ 6 ವಿಮಾನ ನಿಲ್ದಾಣವನ್ನು ಬಾಂಬ್ ದಾಳಿ ಮೂಲಕ ಸ್ಫೋಟಿಸುವಾದಿಗ ಬೆದರಿಕೆ ಬಂದಿದೆ.

France 6 airport evacuated after bomb attack threat security tightened ckm
Author
First Published Oct 18, 2023, 4:56 PM IST

ಪ್ಯಾರಿಸ್(ಅ.18) ಇಸ್ರೇಲ್ ಪ್ಯಾಲೆಸ್ತಿನ್ ಆತಂಕ ಹೆಚ್ಚಾಗುತ್ತಿದ್ದಂತೆ ಇತ್ತ ಫ್ರಾನ್ಸ್‌ನಲ್ಲೂ ದಾಳಿ ಆತಂಕ ಹೆಚ್ಚಾಗಿದೆ. ಪ್ಯಾರಿಸ್‌ನಲ್ಲಿ ಶಂಕಿತ ಇಸ್ಲಾಮಿಸ್ಟ್ ಶಿಕ್ಷಕಿಯನ್ನು ಹತ್ಯೆ ಮಾಡಿದ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಕುರಿತು ತನಿಖೆ ನಡೆಸುತ್ತಿರುವ ಫ್ರಾನ್ಸ್ ಸರ್ಕಾರ ಹಲವು ಶಂಕಿತರನ್ನು ಬಂಧಿಸಿದೆ. ಇದು ಉಗ್ರರನ್ನು ಕೆರಳಿಸಿದೆ. ಇದೀಗ ಉಗ್ರರು ಫ್ರಾನ್ಸ್‌ನ 6 ವಿಮಾನ ನಿಲ್ದಾಣ ಸ್ಫೋಟಿಸುವಾದಾಗಿ ಇಮೇಲ್ ಬೆದರಿಕೆ ಹಾಕಲಾಗಿದೆ. ಬೆದರಿಕೆ ಇಮೇಲ್ ಬೆನ್ನಲ್ಲೇ ಪೊಲೀಸರು 6 ವಿಮಾನ ನಿಲ್ದಾಣ ತೆರವು ಮಾಡಿದ್ದಾರೆ. ಇದೀಗ ಭದ್ರತೆ ಹೆಚ್ಚಿಸಲಾಗಿದೆ.

ಲಿಲ್ಲೆ, ಲಿಯಾನ್, ನ್ಯಾಂಟೆಸ್, ನೈಸ್, ಟೌಲೌಸ್ ಹಾಗೂ ಬ್ಯೂವೈಸ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ ಬೆದರಿಕೆ ಇಮೇಲ್  ಫ್ರಾನ್ಸ್ ಪೊಲೀಸರಿಗೆ ಬಂದಿದೆ. ಇದರ ಪರಿಣಾಮ ತಕ್ಷಣವೇ ಭದ್ರತೆ ಹೆಚ್ಚಿಸಿ, 6 ವಿಮಾನ ನಿಲ್ದಾಣವನ್ನು ಸಂಪೂರ್ಣ ಖಾಲಿ ಮಾಡಲಾಗಿದೆ. ಈ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಆಗಬೇಕಿದ್ದ ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ.

 

ಜೀವ ಉಳಿಸಿಕೊಳ್ಳಲು ಓಡಿ ಹೋಗುತ್ತಿರುವ ತನ್ನ ನಾಗರಿಕರನ್ನೇ ತಡೆಯುತ್ತಿರುವ ಹಮಾಸ್‌

ಅಕ್ಟೋಬರ್ 7 ರಂದು ಶಂಕಿತ ಇಸ್ಲಾಮಿಸ್ಟ್ ದಾಳಿಗೆ ಪ್ಯಾರಿಸ್ ಶಿಕ್ಷಕಿ ಬಲಿಯಾಗಿದ್ದರು. ಇದು ಫ್ರಾನ್ಸ್‌ನಲ್ಲಿ ಬಾರಿ ಆಕ್ರೋಶಕ್ಕೆ ಕಾರಣವಾಗಿದೆ.ಇದರ ಬೆನ್ನಲ್ಲೇ ಅಂದರೆ ಅಕ್ಟೋಬರ್ 7 ರಂದು ಹಮಾಸ್ ಉಗ್ರರು ನೇರವಾಗಿ ಇಸ್ರೇಲ್ ಮೇಲೆ ದಾಳಿ ಮಾಡಿದ್ದರು. ಹಮಾಸ್ ಉಗ್ರರ ನರಮೇಧದ ಬಳಿಕ ಫ್ರಾನ್ಸ್‌ನಲ್ಲಿ ಬೆದರಿಕೆ ಇಮೇಲ್‌ಗಳು ಹೆಚ್ಚಾಗುತ್ತಿದೆ.

ಅಕ್ಟೋಬರ್ 14 ರಂದು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಲೌವ್ರೆ ಮ್ಯೂಸಿಯಂ ಮತ್ತು ವರ್ಸೈಲ್ಸ್‌ ಅರಮನೆಗೆ ಬಾಂಬ್‌ ಹಾಕುವುದಾಗಿ ಬೆದರಿಕೆ ಬಂದಿತ್ತು.. ಹೀಗಾಗಿ ಈ ಎರಡೂ ಸ್ಥಳಗಳಲ್ಲಿನ ಜನರನ್ನು ತೆರವು ಮಾಡಲಾಗಿತ್ತು. ಲಿಖಿತ ಬೆದರಿಕೆ ಬಂದ ಬೆನ್ನಲ್ಲೇ ಎರಡೂ ಸ್ಥಳಗಳಲ್ಲಿ ಶೋಧ ಕಾಯರ್ಣಚರಣೆ ನಡೆಸಲಾಗಿತ್ತು. ಅಲ್ಲಿನ ಸಿಬ್ಬಂದಿ ಮ,ತ್ತು ಪ್ರವಾಸಿಗರನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗೆ ಫ್ರಾನ್ಸ್ ಭದ್ರತಾ ಪಡೆಗಳು ಅವಕಾಶ ನೀಡಿರಲಿಲ್ಲ. 

ಅಕ್ಟೋಬರ್ 6 ರಂದು ಶಾಲೆಯೊಂದಕ್ಕೆ ನುಗ್ಗಿ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ ದುಷ್ಕರ್ಮಿಯೊಬ್ಬ ಶಾಲೆಯಲ್ಲಿದ್ದ ಓರ್ವ ಶಿಕ್ಷಕಿಯನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಫ್ರಾನ್ಸ್‌ನ ಅರಾಸ್‌ ನಗರದಲ್ಲಿ ನಡೆದಿತ್ತು. ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ದಾಳಿ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಇದೊಂದು ಸಂಭಾವ್ಯ ಭಯೋತ್ಪಾದಕ ಕೃತ್ಯ ಎನ್ನಲಾಗಿದೆ.

ಕಣ್ಣಿಗೆ ಬಿದ್ದ ಮಕ್ಕಳು, ಶಿಶು, ಮಹಿಳೆಯರ ಕೊಂದೆವು: ಹಮಾಸ್‌ ಉಗ್ರ ಸ್ಫೋಟಕ ಹೇಳಿಕೆ Video

ಇನ್ನು ದಾಳಿಕೋರ ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಎನ್ನಲಾಗಿದೆ. ಇನ್ನೊಂದೆಡೆ ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ಗಳ ನಡುವೆ ಭಾರೀ ಯುದ್ಧ ನಡೆಯುತ್ತಿದ್ದು ಹಲವೆಡೆ ಯಹೂದಿಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು ಇಸ್ರೇಲ್‌ ಅಮೆರಿಕ ಬಳಿಕ ಫ್ರಾನ್ಸ್‌ ಅತಿ ಹೆಚ್ಚು ಯಹೂದಿಗಳಿರುವ ರಾಷ್ಟ್ರವಾಗಿದೆ. ಈ ಹಿನ್ನೆಲೆ ಈ ಕೃತ್ಯವು ಇದೇ ಯುದ್ಧದ ಪ್ರೇರಿತ ದಾಳಿ ಎನ್ನಲಾಗುತ್ತಿದೆಯಾದರೂ ಖಚಿತ ಮಾಹಿತಿ ಇಲ್ಲ.

Follow Us:
Download App:
  • android
  • ios