ನಾಲ್ಕು ಹೆಬ್ಬಾವುಗಳೊಂದಿಗೆ ಸರಸವಾಡಲು ಹೋದ ವ್ಯಕ್ತಿ; ಯಾವ ಹಾವಿಗೆ ಆಹಾರವಾದ ಗೊತ್ತಾ?
ರಿಯಲ್ ತಾರ್‌ಜಾನ್ ಎಂದು ಹೇಳಿಕೊಂಡ ವ್ಯಕ್ತಿ ನಾಲ್ಕು ಹೆಬ್ಬಾವುಗಳೊಂದಿಗೆ ಸರಸವಾಡಲು ಹೋಗಿ ಪೇಚಿಗೆ ಸಿಲುಕಿದ್ದಾನೆ. ಹಾವುಗಳ ಹಿಡಿತದಿಂದ ತಪ್ಪಿಸಿಕೊಳ್ಳಲು ಒದ್ದಾಡಿದ ಆತ ಕೊನೆಗೆ ಹಾವುಗಳಿಗೆ ಆಹಾರ ಆಗುತ್ತಿದ್ದ ಘಟನೆ ನಡೆದಿದೆ.
ವೈರಲ್ ವಿಡಿಯೋ: ಇಲ್ಲೊಬ್ಬ ವ್ಯಕ್ತಿ ತಾನೇ ರಿಯಲ್ ತಾರ್‌ಜಾನ್ (ನಿಜವಾದ ಕಾಡು ಮನುಷ್ಯ) ಎಂದು ಹೇಳಿಕೊಂಡು ಕಾಡಿನಲ್ಲಿ ನಾಲ್ಕು ಹೆಬ್ಬಾವುಗಳೊಂದಿಗೆ ಸರಸವಾಡಲು ಮುಂದಾಗಿ ಪೇಚಿಗೆ ಸಿಲುಕಿ ಅವುಗಳಿಗೆ ಆಹಾರ ಆಗುವಂತಹ ಪ್ರಸಂಗಕ್ಕೆ ಸಿಲುಕಿದ್ದಾನೆ.
ಹೌದು, ಹಾವು ಎಂದರೆ ಅದೊಂದು ವಿಷಜಂತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ, ಎಲ್ಲರೂ ಹಾವು ನೊಡದಾಕ್ಷಣ ಮೈಲು ತುಸು ದೂರದಿಂದಲೇ ಹೋಗಿ ಬಿಡುತ್ತಾರೆ. ಇನ್ನು ಕೆಲವರು ಜನವಸತಿ ಪ್ರದೇಶಗಳನ್ನು ಹಾವು ಕಾಣಿಸಿಕೊಂಡರೆ ಅದನ್ನು ಕೊಂದೇ ಬಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಹಾವಿನ ಸಂರಕ್ಷಣೆ ಬಗ್ಗೆ ಜಾಗೃತಿ ಹೆಚ್ಚಾಗಿದ್ದು, ಹಾವುಗಳನ್ನು ಕಂಡರೆ ಕೂಡಲೇ ಉರಗ ಸಂರಕ್ಷಕರಿಗೆ ಕರೆ ಮಾಡಿ ಅವುಗಳನ್ನು ಹಿಡಿಸಿ ಕಾಡಿಗೆ ಬಿಡುವಂತೆ ಮನವಿ ಮಾಡುತ್ತಾರೆ. ಬೆಂಗಳೂರು, ಮೈಸೂರು, ಸೇರಿದಂತೆ ಎಲ್ಲ ನಗರ ಪ್ರದೇಶಗಳಲ್ಲಿ ಜಾಗೃತಿ ಮೂಡಿದೆ. ಇನ್ನು ಮಲೆನಾಡು ಭಾಗಗಳಲ್ಲಿ ಹಾವು ಸಾಮಾನ್ಯವಾಗಿದ್ದು, ಅವುಗಳ ಗೋಜಿಗೆ ಜನರು ತಮ್ಮ ಪಾಡಿಗೆ ತಾವು ಹೋಗಿಬಿಡುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಇಡೀ ವಿಶ್ವದ ಯಾವುದೇ ವ್ಯಕ್ತಿಯನ್ನು ನಾವು ಸುಲಭವಾಗಿ ನೋಡಬಹುದು. ಅವರು ಸಾರ್ವಜನಿಕರಿಗೆ ಮುಕ್ತವಾಗಿ ತಮ್ಮ ಖಾತೆಯ ವಿವರಗಳನ್ನು ತಿಳಿಸಲು ಒಪ್ಪಿಕೊಂಡಿದ್ದರೆ ಅವರ ಎಲ್ಲ ಪೋಸ್ಟ್‌ಗಳನ್ನು ನಾವು ಕುಳಿತಲ್ಲಿಯೇ ನೋಡಬಹುದು. ಇಲ್ಲೊಬ್ಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ತಾನು ರಿಯಲ್ ತಾರ್‌ಜಾನ್ ಎಂದು ಹೇಳಿಕೊಂಡು ಹಾವು, ಮೊಸಳೆ, ಸಿಂಹ, ಹಂದಿ, ಸರೀಸೃಪಗಳು ಸೇರಿದಂತೆ ಹಲವು ಪ್ರಾಣಿಗಳನ್ನು ಸಾಕಿದ್ದಾನೆ. ಇನ್ನು ಈತನಿರುವ ಸ್ಥಳದಲ್ಲಿ ಸ್ಥಳೀಯರಿಗೆ ಎಲ್ಲಿಯೇ ಹಾವು ಕಂಡರೂ ಈತನಿಗೆ ಕರೆ ಮಾಡಿ ಹಾವು ಹಿಡಿದುಕೊಂಡು ಹೋಗಿ ಎಂದು ಹೇಳುತ್ತಾರೆ. ಹೀಗೆ ಹಿಡಿದ ಹಾವುಗಳೆಲ್ಲವನ್ನೂ ಒಂದು ಸ್ಥಳದಲ್ಲಿ ಕೂಡಿ ಹಾಕಿ ಅವುಗಳಿಗೆ ಆಹಾರ ಕೊಡುತ್ತಿದ್ದನು. ಒಟ್ಟಿಗೆ ಹಾವುಗಳ ಸಂಖ್ಯೆ ಒಂದು ಸಾವಿರಕ್ಕಿಂತ ಅಧಿಕವಾದ ನಂತರ ಅವುಗಳನ್ನು ಹೋಗಿ ಕಾಡಿಗೆ ಬಿಟ್ಟು ಬರುತ್ತಾನೆ.
ಇದನ್ನೂ ಓದಿ: ಕಾಫಿನಾಡಿನ ಉರಗ ತಜ್ಞ ಸ್ನೇಕ್ ನರೇಶ್ ಹಾವು ಕಚ್ಚಿ ಸಾವು: ರಕ್ಷಣೆ ಮಾಡಿದ ಹಾವೇ ಕಚ್ಚಿಬಿಡ್ತು!
ಮತ್ತೊಂದೆಡೆ ಈ ತಾರ್‌ಜಾನ್ ಜನರು ಕರೆ ಮಾಡಿದ ಸ್ಥಳದಲ್ಲಿ ಮಾತ್ರ ಹಾವುಗಳನ್ನು ಸಂರಕ್ಷಣೆ ಮಾಡದೇ, ಹಾವುಗಳು ವಾಸವಿರುವ ಕಾಡಿಗೆ ಹೋಗಿ ವಿಶೇಷವಾಗಿ ಕಾಣುವ ವಿಷಕಾರಿ, ದೊಡ್ಡ ಗಾತ್ರದ ಹಾವುಗಳನ್ನು ಹಿಡಿದು ಅದರೊಂದಿಗೆ ಆಟವಾಡುವುದು ಈತನ ಅಭ್ಯಾಸವಾಗಿದೆ. ಅದೇ ಇನ್ನು ತಾನು ಮನೆಯಲ್ಲಿ ಇಟ್ಟುಕೊಂಡಿದ್ದ ಸುಮಾರು 10 ಅಡಿ ಉದ್ದದ ಅಪಾಯಕಾರಿ ನಾಲ್ಕು ಹೆಬ್ಬಾವುಗಳನ್ನು ಕಾಡಿಗೆ ಬಿಡಲು ಹೋಗಿದ್ದಾನೆ. ಈ ವೇಳೆ ಒಂದೊಂದೇ ಹಾವುಗಳನ್ನು ಬಿಡುವುದನ್ನು ಬಿಟ್ಟು ಎಲ್ಲ ಹಾವುಗಳ ತಲೆಯನ್ನು ಒಟ್ಟಿಗೆ ಹಿಡಿದುಕೊಂಡು ಎಲ್ಲ ನನ್ನ ಶಕ್ತಿ ನಾಲ್ಕು ಹೆಬ್ಬಾವುಗಳಿಗೆ ಸಮವಿದೆ ಎಂದು ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾನೆ. ಆದರೆ, ಮುಂದಾಗಿದ್ದೇ ಬೇರೆ.
ಇದನ್ನೂ ಓದಿ: ಕೇರಳದ 25 ಕೋಟಿ ರೂ. ಓಣಂ ಲಾಟರಿ ಗೆದ್ದ ಮಂಡ್ಯದ ಮೆಕ್ಯಾನಿಕ್ ಅಲ್ತಾಫ್; ಕೈಗೆ ಸಿಗೋ ಹಣವೆಷ್ಟು?
ಹೆಬ್ಬಾವು ಮನುಷ್ಯನ ಯಾವುದೇ ಭಾಗಕ್ಕೆ ಸುತ್ತಿಕೊಂಡರೆ ಅದನ್ನು ಬಿಡಿಸಿಕೊಳ್ಳಲು ಬಲಭೀಮನಂತಹ ಶಕ್ತಿಯನ್ನೇ ಹೊಂದಿರಬೇಕು. ಇಲ್ಲವೆಂದರೆ ಹೆಬ್ಬಾವಿನ ಹಿಡಿತಕ್ಕೆ ನಲುಗಿ ಹೋರಾಡಲಾಗದೇ ಅದಕ್ಕೆ ಆಹಾರ ಆಗಬೇಕು.. ಆದರೆ, ಈ ತಾರ್‌ಜಾನ್ ಹಿಡಿದುಕೊಂಡ ನಾಲ್ಕು ಹೆಬ್ಬಾವುಗಳು ಒಂದೊಂದಾಗಿ ಆತನ ಕಾಲು ಹಾಗೂ ಕೈಗಳಿಗೆ ಸುತ್ತಿಕೊಂಡಿವೆ. ಜಾಣ್ಮೆಯಿಂದ ಕಾಲಿಗೆ ಸುತ್ತಿಕೊಳ್ಳುತ್ತಿದ್ದ ಹೆಬ್ಬಾವುಗಳ ಹಿಡಿತವನ್ನು ತಪ್ಪಿಸಿಕೊಂಡಿದ್ದಾನೆ. ಕಾಲಿನಿಂದ ಹಿಡಿತ ಬಿಡಿಸಿದಾಕ್ಷಣ ಆತನ ಕೈಗಳನ್ನು ಹಾವುಗಳು ಸುತ್ತಿಕೊಂಡಿವೆ. ಆತನ ಎರಡೂ ಕೈಗಳ ಭುಜದವರೆಗೆ ಹಾವುಗಳು ಸುತ್ತಿಕೊಂಡಿದ್ದು, ಈ ವೇಳೆ ಹೆಬ್ಬಾವುಗಳ ಬಾಯಿಯ ಹಿಡಿತವನ್ನು ಬಿಟ್ಟರೆ ಆತನನ್ನು ಸುಲಭವಾಗಿ ಆಹಾರವಾಗಿ ಮಾಡಿಕೊಂಡು ಬಿಡುತ್ತಿದ್ದವು. ಆದರೆ, ಆತ ಕಷ್ಟಪಟ್ಟು ಹಾವಿನ ಹಿಡಿತದಿಂದ ಬಿಡಿಸಿಕೊಳ್ಳಲು ಒದ್ದಾಡಿದ್ದಾನೆ. ಕೊನೆಗೆ ನಾಲ್ಕು ಹೆಬ್ಬಾವುಗಳ ಪೈಕಿ ಎರಡು ಹೆಬ್ಬಾವು ಆತನ ಕೈಗಳಿಂದ ತಪ್ಪಿಸಿಕೊಂಡು ಆತನಿಗೆ ಕಚ್ಚಿವೆ. ನಂತರ ಈ ಹೆಬ್ಬಾವಿನ ಸಹವಾಸವೇ ಬೇಡವೆಂದು ಎಲ್ಲ ಹಾವುಗಳನ್ನು ಬಿಟ್ಟು ತನ್ನ ಕೈಗಳಿಗೆ ಆಗಿದ್ದ ಗಾಯಗಳನ್ನು ತೋರಿಸಿ ಬದುಕಿತು ಬಡಜೀವ ಎಂದು ಪೋಸ್ ಕೊಟ್ಟಿದ್ದಾನೆ.