ಓಡಾಡಿಕೊಂಡಿದ್ದ ಸಿಂಹಗಳಿಗೂ ಕೊರೋನಾ.. ಪ್ರಾಣಿಗಳನ್ನು ಬಿಡಲ್ಲ!
ಮನುಷ್ಯರಿಗೆ ಮಾತ್ರ ಅಲ್ಲ ಪ್ರಾಣಿಗಳಿಗೂ ಕಾಡಬಹುದು ಕೊರೋನಾ/ ಬಾರ್ಸಿಲೋನಾದ ನಾಲ್ಕು ಸಿಂಹಗಳಿಗೆ ಕೊರೋನಾ/ ಜೂದ ಇಬ್ಬರು ಸಿಬ್ಬಂದಿಗೂ ಕೊರೋನಾ ಪಾಸಿಟಿವ್/ ಸಿಂಹಗಳ ಆರೋಗ್ಯದ ಮೇಲೆ ನಿಗಾ
ಬಾರ್ಸಿಲೋನಾ(ಡಿ. 08) ಇಲ್ಲಿಯವರೆಗೆ ಕೊರೋನಾ ವೈರಸ್ ಮಾನವರಿಗೆ ಮಾತ್ರ ತಗಲುತ್ತದೆ ಎಂದು ಭಾವಿಸಲಾಗಿತ್ತು. ಶ್ವಾನಗಳಿಗೆ ತಗುಲಿದೆ ಎಂದು ವರದಿಯಾಗಿದ್ದರೂ ಅದಕ್ಕೆ ದಾಖಲೆಗಳು ಇರಲಿಲ್ಲ. ಆದರೆ ಈಗ ಸಿಂಹಗಳಿಗೆ ಕೊರೋನಾ ಪಾಸಿಟಿವ್ ಆಗಿರುವುದು ಒಂದಷ್ಟು ಹೊಸ ಪ್ರಶ್ನೆಗಳನ್ನು ಹುಟ್ಟಿಸಿದೆ.
ಬಾರ್ಸಿಲೋನಾದ ಜೂವೊಂದರ ನಾಲ್ಕು ಸಿಂಹಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ಪಶು ವೈದ್ಯಾಧಿಕಾರಿಗಳು ಇದನ್ನು ದೃಢಪಡಿಸಿದ್ದಾರೆ.
ಮೂರು ಹೆಣ್ಣು ಸಿಂಹಗಳಾದ ಜಲಾ, ನೀಮಾ ಮತ್ತು ರನ್ ರನ್ ಹಾಗೂ ಗಂಡು ಸಿಂಹ ಕಿಂಬ್ಲೆಗೆ ಕೊರೋನಾ ಸೋಂಕು ತಗುಲಿದೆ. ಕರೋನಾ ಲಕ್ಷಣಗಳಿಂದ ಬಳಲುತ್ತಿದ್ದ ಅವನ್ನು ಪರೀಕ್ಷೆಗೆ ಒಳಡಿಸಿದಾಗ ವೈರಸ್ ದೃಢವಾಗಿದೆ.
ಜೂನ ಇಬ್ಬರು ಸಿಬ್ಬಂದಿಗೂ ಕೊರೋನಾ ತಗುಲಿದೆ. ಸಿಂಹಗಳಿಗೆ ಅದು ಹೇಗೆ ಕೊರೋನಾ ತಗುಲಿತು ಎಂಬುದನ್ನು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಮಾನವರ ರೀತಿಯೇ ಸಿಂಹಗಳ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದಾಗ ವರದಿ ಬಂದಿದೆ.
ನಾಳ್ಕು ವರ್ಷದ ಗಂಡು ಸಿಂಹ ಮತ್ತು ಹದಿನಾರು ವರ್ಷದ ಹೆಣ್ಣು ಸಿಂಹಗಳ ಮೇಲೆ ನಿಗಾ ವಹಿಸಿದ್ದು ಅವುಗಳ ಆರೋಗ್ಯವನ್ನು ಆಗಾಗ ಮಾನಿಟರ್ ಮಾಡಲಾಗುತ್ತಿದೆ.