Asianet Suvarna News Asianet Suvarna News

ಅಮೆಜಾನ್ ದಟ್ಟಾರಣ್ಯದಲ್ಲಿ ವಿಮಾನ ಪತನ, ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು 40 ದಿನ ಬಳಿಕ ಜೀವಂತ ಪತ್ತೆ!

ಅಮೆಜಾನ್ ದಟ್ಟ ಅರಣ್ಯದಲ್ಲಿ 40 ದಿನಗಳ ಹಿಂದೆ ವಿಮಾನ ಪತನಗೊಂಡಿತ್ತು. ಈ ಅಪಘಾತದ ಬಳಿಕ ತೀವ್ರ ಶೋಧ ನಡೆಸಲಾಗಿತ್ತು. ಪೈಲೆಟ್ ಮೃತದೇಹ ಪತ್ತೆಯಾಗಿತ್ತು. ಆದರೆ ಈ ವಿಮಾನದಲ್ಲಿದ್ದ 1 ವರ್ಷದ ಮಗು ಸೇರಿದಂತೆ 4 ಮಕ್ಕಳು ನಾಪತ್ತೆಯಾಗಿದ್ದರು. ಸತತ ಹುಡುಕಾಟದ ಬಳಿಕ ಪವಾಡ ಸದೃಶ್ಯ ರೀತಿ ಇದೀಗ ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ. ಬರೋಬ್ಬರಿ 40 ದಿನ ಅಮೆಜಾನ್ ಕಾಡಿನಲ್ಲಿ ಮಕ್ಕಳು ದಿನ ದೂಡಿದ್ದಾರೆ.

Four childrens missing after plane crash in Colombian Amazon rainforest found alive after 40 days ckm
Author
First Published Jun 10, 2023, 10:29 AM IST

ಬೊಗೊಟಾ(ಜೂ.10): ತಾಯಿ ಹಾಗೂ ನಾಲ್ವರು ಮಕ್ಕಳು ಸಣ್ಣ ವಿಮಾನ ಪ್ರಯಾಣ ಮಾಡಿದ್ದರು. ಆದರೆ ಅಮೆಜಾನ್ ಕಾಡಿನಲ್ಲಿ ವಿಮಾನ ಪತನಗೊಂಡಿತ್ತು. ಬಳಿಕ ಸತತ ಕಾರ್ಯಾಚರಣೆ ನಡೆಸಿ ಮಹಿಳಾ ಪೈಲೆಟ್ ಮೃತದೇಹ ಪತ್ತೆಯಾಗಿತ್ತು. ಆದರೆ ವಿಮಾನದಲ್ಲಿದ್ದ ನಾಲ್ವರು ಮಕ್ಕಳ ಪತ್ತೆ ಇರಲಿಲ್ಲ. ಆದರೆ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಇದೀಗ ಬರೋಬ್ಬರಿ 40 ದಿನಗಳ ಬಳಿಕ 11 ತಿಂಗಳ ಹಸುುಗೂಸು ಸೇರಿದಂತೆ ನಾಲ್ವರು ಮಕ್ಕಳು ಜೀವಂತವಾಗಿ ಅಮೆಜಾನ್ ದಟ್ಟ ಅರಣ್ಯದಲ್ಲಿ ಪತ್ತೆಯಾಗಿದ್ದಾರೆ. ಕೊಲಂಬಿಯನ್ ರಕ್ಷಣಾ ತಂಡ ಮಕ್ಕಳನ್ನು ಪತ್ತೆ ಹಚ್ಚಿದೆ. ಈ ಕುರಿತು ಕೊಲಂಬಿಯನ್ ಅಧ್ಯಕ್ಷ ಗಸ್ಟಾವೋ ಪೆಟ್ರೋ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಟ್ವಿಟರ್ ಮೂಲಕ ಫೋಟೋ ಹಂಚಿಕೊಂಡಿರುವ ಗಸ್ಟಾವೋ ಪೆಟ್ರೋ, ಇದು ಇಡೀ ದೇಶವೇ ಸಂಭ್ರಮ ಪಡುವ ಕ್ಷಣವಾಗಿದೆ.40 ದಿನಗಳ ಹಿಂದೆ ನಾಲ್ವರು ಮಕ್ಕಳು ಕೊಲಂಬಿಯನ್ ಅಮೆಜಾನ್ ದಟ್ಟ ಅರಣ್ಯದಲ್ಲಿ ಕಳೆದು ಹೋಗಿದ್ದರು. ವಿಮಾನ ಅಪಘಾತದಿಂದ ಮಕ್ಕಳು ಅರಣ್ಯದಲ್ಲಿ ನಾಪತ್ತೆಯಾಗಿದ್ದರು. ಇದು ಪುಟಾಣಿ ಮಕ್ಕಳು ದಟ್ಟ ಅರಣ್ಯದಲ್ಲಿ ಬದುಕುಳಿದು ಮಾದರಿಯಾಗಿದ್ದಾರೆ. ಈ ಮಕ್ಕಳ ಸಾಹಸಗಾಥೆ ಇತಿಹಾಸ ಪುಟದಲ್ಲಿ ಉಳಿಯಲಿದೆ ಎಂದು ಗಸ್ಟಾವೋ ಪೆಟ್ರೋ ಹೇಳಿದ್ದಾರೆ. 

ಅಮೆಜಾನ್‌ ದಟ್ಟಾರಣ್ಯದಲ್ಲ 26 ದಿನ ಕಣ್ಮರೆಯಾಗಿ ಪವಾಡವಶಾತ್ ಬದುಕಿ ಬಂದ ಇಬ್ಬರು ಚಿಣ್ಣರು!

ವಿಮಾನ ಪತನದಲ್ಲಿ ಮೃತಪಟ್ಟ ಮಹಿಳಾ ಪೈಲೆಟ್ ಈ ಮಕ್ಕಳ ತಾಯಿಯಾಗಿದ್ದಾರೆ. ಸಣ್ಣ ವಿಮಾನದ ಮೂಲಕ ಪ್ರಯಾಣಿಸುತ್ತಿದ್ದ ವೇಳೆ ವಿಮಾನ ಅಪಘಾತಕ್ಕೀಡಾಗಿದೆ. ಕೊಲಂಬಿಯನ್ ಅಮೆಜಾನ್ ದಟ್ಟ ಅರಣ್ಯದಲ್ಲಿ ಈ ವಿಮಾನ ಪತನಗೊಂಡಿತ್ತು. ಈ ಮಾಹಿತಿ ತಿಳಿದ ಕೊಲಂಬಿಯನ್ ಸರ್ಕಾರ, ತಕ್ಷಣವೇ ಕಾರ್ಯಾಚರಣೆ ಕೈಗೊಂಡಿತ್ತು. ಸತತ ಕಾರ್ಯಾಚರಣೆ ಬಳಿಕ ಮಹಿಳಾ ಪೈಲೆಟ್ ಮಗ್ದಾಲೆನಾ ಮಾಕ್ಯುಟಿ ಹಾಗೂ ಮತ್ತೊರ್ವ ಪ್ರಯಾಣಿಕನ ಮೃತದೇಹ ಪತ್ತೆಯಾಗಿತ್ತು. ಆದರೆ ಈ ವಿಮಾನದಲ್ಲಿದ್ದ ನಾಲ್ವರು ಮಕ್ಕಳ ಸುಳಿವು ಪತ್ತೆಯಾಗಿರಲಿಲ್ಲ. ಮೃತದೇಹ ಪತ್ತೆಯಾದ ಸುತ್ತ ಮುತ್ತ ಪ್ರದೇಶದಲ್ಲಿ ತೀವ್ರ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಯಾವುದೇ ಸುಳಿವು ಇರಲಿಲ್ಲ.

 

 

ಈ ವಿಮಾನ ಪತನದಲ್ಲಿ ನಾಪತ್ತೆಯಾಗಿದ್ದ 13 ವರ್ಷದ ಲೆಸ್ಲಿ ಜಾಕೊಂಬೈರ್ ಮಾಕ್ಯುಟಿ, 9 ವರ್ಷದ ಸೊಲೆನಿ ಜಾಕೊಂಬೈರ್ ಮಾಕ್ಯುಟಿ, ನಾಲ್ಕು ವರ್ಷದ ಟೈನ್ ನೊರೈಲ್ ರೊನಕ್ಯೂ ಮಾಕ್ಯುಟಿ ಹಾಗೂ 11 ತಿಂಗಳ ಕ್ರಿಸ್ಟಿಯನ್ ನೆರಿಮಾನ್ ರೊಂಕ್ಯೂ ಮಾಕ್ಯುಟಿ ಇದೀಗ ಜೀವಂತವಾಗಿ ಪತ್ತೆಯಾಗಿದ್ದಾರೆ. ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೊಲಂಬಿಯನ್ ರಕ್ಷಣಾ ತಂಡ ತೀವ್ರ ಹುಡುಕಾಟ ನಡೆಸಿ ಮಕ್ಕಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. 

Fact Check: ಅಮೆಜಾನ್‌ ಕಾಡಲ್ಲಿ 134 ಅಡಿ ಉದ್ದದ ಹಾವು ಪತ್ತೆ?

ಮಗ್ದಾಲೆನಾ ಮಾಕ್ಯುಟಿ ತನ್ನ ನಾಲ್ವರು ಮಕ್ಕಳೊಂದಿಗೆ ಬಾಗೋಟಗೆ ತೆರಳುತ್ತಿದ್ದ ವೇಳೆ ವಿಮಾನ ಅಪಘಾತಕ್ಕೀಡಾಗಿದೆ. ಪತಿ ಮಾನ್ಯುಯೆಲ್ ರೊಂಕ್ಯೂ ಜೊತೆ ಸುಂದರ ಬದುಕು ಸವಿಯಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿತ್ತು. ಕೊಲಂಬಿಯನ್ ವಾಯುಸೇನೆ ಕಾರ್ಯಾಚರಣೆ ವೇಳೆ ವಿಮಾನದ ಅವಶೇಷಗಳು ಪತ್ತೆಯಾಗಿತ್ತು. ಬಳಿಕ ಮಗ್ದಾಲೆನಾ ಮಾಕ್ಯುಟಿ ಹಾಗೂ ಮತ್ತೊರ್ವ ಪ್ರಯಾಣಿಕನ ಮೃತದೇಹ ಪತ್ತೆಯಾಗಿತ್ತು. ಇದೀಗ ನಾಲ್ವರು ಮಕ್ಕಳು ಸುರಕ್ಷಿತವಾಗಿದ್ದಾರೆ. ಕೊಲಂಬಿಯನ್ ಸರ್ಕಾರ ಇದೀಗ ಮಕ್ಕಳನ್ನು ಆಸ್ಪತ್ರೆ ದಾಖಲಿಸಲು ಹೆಲಿಕಾಪ್ಟರ್ ರವಾನಿಸಿದೆ. 

Follow Us:
Download App:
  • android
  • ios