ಆಫ್ರಿಕಾದ ಬ್ರಿಟಿಷ್‌ ಕಮಾಂಡೋಗಳು ಜಗತ್ತಿನ ಅತಿ ದೊಡ್ಡ ಅನಕೊಂಡವನ್ನು ಕೊಂದಿದ್ದಾರೆ ಎಂದು ಊಹಿಸಲೂ ಅಸಾಧ್ಯವಾದ ಹಾವಿನ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಆಫ್ರಿಕಾದ ಬ್ರಿಟಿಷ್‌ ಕಮಾಂಡೋಗಳು ಜಗತ್ತಿನ ಅತಿ ದೊಡ್ಡ ಅನಕೊಂಡವನ್ನು ಕೊಂದಿದ್ದಾರೆ ಎಂದು ಊಹಿಸಲೂ ಅಸಾಧ್ಯವಾದ ಹಾವಿನ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ.

ರಮಾಕಾಂತ್‌ ಕಜಾರಿಯಾ ಎಂಬ ಫೇಸ್ಬುಕ್‌ ಖಾತೆಯು ಈ ಪೋಟೋವನ್ನು ಪೋಸ್ಟ್‌ ಮಾಡಿ, ‘ಅಮೆಜಾನ್‌ ನದಿಯಲ್ಲಿ ಜಗತ್ತಿನ ಅತಿ ದೊಡ್ಡ ಹಾವು ಪತ್ತೆಯಾಗಿದೆ. 134 ಅಡಿ ಉದ್ದ ಮತ್ತು 2067 ಕೆ.ಜಿ ತೂಕವಿರುವ ಈ ಹಾವು 257 ಜನರನ್ನು ಮತ್ತು 2325 ಪ್ರಾಣಿಗಳನ್ನು ಕೊಂದಿತ್ತು. ಹಾಗಾಗಿ ಆಫ್ರಿಕಾದ ರಾಯಲ್‌ ಬ್ರಿಟಿಷ್‌ ಕಮಾಂಡೋಗಳು ಸತತ 37 ದಿನ ಕಾರಾರ‍ಯಚರಣೆ ನಡೆಸಿ ಕೊನೆಗೂ ಅಜಾನುಬಾಹು ಹಾವನ್ನು ಕೊಲ್ಲುವಲ್ಲಿ ಸಫಲರಾಗಿದ್ದಾರೆ’ ಎಂದು ಬರೆಯಲಾಗಿದೆ.

Fact check | ಭೂಗತ ಪಾತಕಿ ಚೋಟಾ ರಾಜನ್ ನೊಂದಿಗೆ ನರೇಂದ್ರ ಮೋದಿ!

ಆದರೆ ನಿಜಕ್ಕೂ ಇಷ್ಟುದೊಡ್ಡ ಹಾವು ಅಮೆಜಾನ್‌ನಲ್ಲಿ ಪತ್ತೆಯಾಗಿದೆಯೇ ಎಂದು ಇಂಡಿಯಾ ಟುಡೇ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಅಲ್ಲದೆ ವೈರಲ್‌ ಆಗಿರುವ ಚಿತ್ರ ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿರುವುದು ಎಂದೂ ಸ್ಪಷ್ಟವಾಗಿದೆ. ಕಳೆದ ಕೆಲ ವರ್ಷಗಳಿಂದಲೂ ಸೋಷಿಯಲ್‌ ಮೀಡಿಯಾದಲ್ಲಿ ಈ ಫೋಟೋ ಓಡಾಡುತ್ತಿದೆ.

ಅಲ್ಲದೆ ಇದು ಸುಳ್ಳು ಎಂಬುದಕ್ಕೆ ಹಲವಾರು ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಏಕೆಂದರೆ ವೈರಲ್‌ ಸಂದೇಶದಲ್ಲಿ ಅಮೆಜಾನ್‌ ಆಫ್ರಿಕಾದಲ್ಲಿದೆ ಎನ್ನಲಾಗಿದೆ. ವಾಸ್ತವವಾಗಿ ಅಮೆಜಾನ್‌ ಇರುವುದು ದಕ್ಷಿಣ ಅಮೆರಿಕದಲ್ಲಿ. ಅಲ್ಲದೆ ಆಫ್ರಿಕಾದಲ್ಲಿ ರಾಯಲ್‌ ಬ್ರಿಟಿಷ್‌ ಎನ್ನುವ ಸಂಸ್ಥೆಯೇ ಇಲ್ಲ. ಜೊತೆಗೆ ಈ ಬಗ್ಗೆ ಮುಖ್ಯವಾಹಿನಿಯ ಮಾಧ್ಯಮಗಳು ಎಲ್ಲೂ ವರದಿ ಮಾಡಿಲ್ಲ. ನ್ಯಾಷನಲ್‌ ಜಿಯೋಗ್ರಫಿ ಪ್ರಕಾರ 34 ಅಡಿ ಉದ್ದದ ಹಾವೇ ಜಗತ್ತಿನ ಅತಿ ಉದ್ದದ ಹಾವು. ಆದರೆ ಇಲ್ಲಿ 134 ಅಡಿ ಎನ್ನಲಾಗಿದೆ. ಹಾಗಾಗಿ ಈ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

- ವೈರಲ್ ಚೆಕ್