* ಅಮೆಜಾನ್‌ ಕಾಡಲ್ಲಿ 26 ದಿನ ಕಳೆದುಹೋದ ಇಬ್ಬರು ಬಾಲಕ ರಕ್ಷಣೆ* ಅಮೆಜಾನ್‌ ಕಾಡಿನಲ್ಲಿ ಮರ ಕಡಿಯಲು ಬಂದ ಸ್ಥಳೀಯನೊಬ್ಬನಿಂದ ರಕ್ಷಣೆ

ಮನೌಸ್‌(ಮಾ.20): ಅಮೆಜಾನ್‌ ಕಾಡಿನಲ್ಲಿ ಕಳೆದುಹೋಗಿದ್ದ ಇಬ್ಬರು ಸಹೋದರರನ್ನು ಸುಮಾರು 26 ದಿನಗಳ ತೀವ್ರ ಹುಡುಕಾಟದ ನಂತರ ಪತ್ತೆ ಹಚ್ಚಿ ರಕ್ಷಿಸಲಾಗಿದೆ. ಅಮೆಜಾನ್‌ ಕಾಡಿನಲ್ಲಿ ಮರ ಕಡಿಯಲು ಬಂದ ಸ್ಥಳೀಯನೊಬ್ಬ ಈ ಮಕ್ಕಳನ್ನು ರಕ್ಷಿಸಿದ್ದಾನೆ.

ಬ್ರೆಜಿಲ್‌ ಮೂಲದ 7 ವರ್ಷದ ಗ್ಲೈಕಾನ್‌ ಹಾಗೂ 9 ವರ್ಷದ ಗ್ಲಾಕೋ ಫೆರೆರಾ ಫೆ. 18 ರಂದು ಅಮೆಜಾನ್‌ ಕಾಡಿನಲ್ಲಿ ಕಳೆದು ಹೋಗಿದ್ದರು. ಇವರನ್ನು ಪತ್ತೆ ಹಚ್ಚಲು ಮಿಲಿಟರಿ, ಪೊಲೀಸರು ಸೇರಿದಂತೆ 260 ಜನರು ತೀವ್ರ ಹುಡುಕಾಟ ನಡೆಸಿದ್ದರು. ಮಾಚ್‌ರ್‍ 15 ರಂದು ಸ್ಥಳೀಯ ವ್ಯಕ್ತಿಗೆ ಮರ ಕಡಿಯುವಾಗ ಆತನಿಗೆ ಮಕ್ಕಳ ಧ್ವನಿ ಕೇಳಿಸಿತ್ತು. ಆತನೇ ಮಕ್ಕಳನ್ನು ಪತ್ತೆ ಹಚ್ಚಿದ್ದಾನೆ.

ಮಕ್ಕಳು ಆಹಾರ ನೀರಲ್ಲದೇ ತೀವ್ರ ಅಪೌಷ್ಟಿಕತೆ, ನಿರ್ಜಲೀಕರಣ, ಚರ್ಮದ ಸವೆತಕ್ಕೆ ಗುರಿಯಾಗಿದ್ದು, ಇವರನ್ನು ತುರ್ತು ಚಿಕಿತ್ಸೆಗಾಗಿ ವಿಮಾನದಲ್ಲಿ ಅಮೆಜಾನಾಸ್‌ ರಾಜಧಾನಿ ಮನೌಸ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.