ಭಾರತದಲ್ಲಿ ಮಳೆ ಸುರಿದು ಸಂಕಷ್ಟ ಎದುರಾಗಿದ್ದರೆ ಅತ್ತ ಸ್ಪೇನ್‌ನಲ್ಲಿ ಭಯಾನಕ ಕಾಡ್ಗಿಚ್ಚಿಗೆ ಲಕ್ಷಾಂತರ ಹೆಕ್ಟೇರ್‌ ಮೌಲ್ಯದ ಕಾಡು ಸಂಪತ್ತು ಬೆಂಕಿಗೆ ಆಹುತಿಯಾಗಿದೆ.

ಮ್ಯಾಡ್ರಿಡ್: ಭಾರತದಲ್ಲಿ ಮಳೆ ಸುರಿದು ಸಂಕಷ್ಟ ಎದುರಾಗಿದ್ದರೆ ಅತ್ತ ಸ್ಪೇನ್‌ನಲ್ಲಿ ಭಯಾನಕ ಕಾಡ್ಗಿಚ್ಚಿಗೆ ಲಕ್ಷಾಂತರ ಹೆಕ್ಟೇರ್‌ ಮೌಲ್ಯದ ಕಾಡು ಸಂಪತ್ತು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆಯ ಭಯಾನಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಹೌದು ಇತ್ತ ಭಾರತದಲ್ಲಿ ಸಾಕು ಸಾಕು ಎನ್ನುವಷ್ಟು ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ದೇಶದ ಬಹುತೇಕ ನದಿಗಳೆಲ್ಲಾ ತುಂಬಿ ಹರಿಯುತ್ತಿವೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನಿಂತ ನೆಲವೇ ಇದ್ದಕ್ಕಿದಂತೆ ಕುಸಿದು ಹೋಗಿವೆ. ಅನೇಕರು ಭೂ ಕುಸಿತದಿಂದ ಮನೆ ಹಾಗೂ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಉಳಿದುಕೊಳ್ಳಲು ಸೂರಿಲ್ಲದೇ ಬೀದಿಗೆ ಬಂದಿದ್ದಾರೆ. ಇದು ಭಾರತದ ಕತೆಯಾದರೆ ಅತ್ತ ದೂರದ ಸ್ಪೇನ್‌ನಲ್ಲಿ ಬೆಂಕಿಯ ಕೆನ್ನಾಲಿಗೆಗೆ ಇಡೀ ಅರಣ್ಯವೇ ನಾಶವಾಗುತ್ತಿದೆ. ಪ್ರಾಣಿ ಪಕ್ಷಿಗಳು ಜೀವ ಕಳೆದುಕೊಳ್ಳುತ್ತಿವೆ.

ಸ್ಪೇನ್‌ನ ವೇಲೆನ್ಸಿಯಾ ಪ್ರದೇಶದಲ್ಲಿ ಭೀಕರ ಕಾಡ್ಗಿಚ್ಚು ಉಂಟಾಗಿದ್ದು, ದೊಡ್ಡ ಪ್ರಮಾಣದ ಅರಣ್ಯ ಸಂಪತ್ತು ಸುಟ್ಟು ಭಸ್ಮವಾಗಿದೆ. ಕಳೆದ ವಾರವೇ ಪೂರ್ವ ವೇಲೆನ್ಸಿಯಾ ಪ್ರದೇಶಕ್ಕೆ ವ್ಯಾಪಿಸಿದ್ದ ಕಾಡ್ಗಿಚ್ಚಿಗೆ ವೇಗವಾಗಿ ಬೀಸುತ್ತಿರುವ ಗಾಳಿ ಸಾಥ್‌ ನೀಡಿದ್ದು, ಇದರಿಂದ ಬೆಂಕಿಗೆ ತುಪ್ಪ ಸುರಿದಂತಹ ಸ್ಥಿತಿಯಾಗಿದೆ. ಪರಿಣಾಮ ಬೆಂಕಿ ವೇಗ ವೇಗವಾಗಿ ಹಬ್ಬುತ್ತಿದ್ದು, ಇದೀಗ ಉತ್ತರ ವೇಲೆನ್ಸಿಯಾದ ಬೆಜಿಸ್ ಪುರಸಭೆಯತ್ತಲೂ ಬೆಂಕಿ ವ್ಯಾಪಿಸುತ್ತಿದೆ. ಸ್ಪ್ಯಾನಿಷ್ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

Scroll to load tweet…

ಬೆಜಿಸ್ ಪುರಸಭೆ ವ್ಯಾಪ್ತಿಯಲ್ಲಿ ಬೆಂಕಿಯ ಜ್ವಾಲೆಯಿಂದ ಮೂವರು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ. ಈಗಾಗಲೇ ಈ ಪ್ರದೇಶದ ಹಲವಾರು ಗ್ರಾಮಗಳನ್ನು ಸ್ಥಳಾಂತರ ಮಾಡಲಾಗಿದೆ. ಬಲವಾದ ಗಾಳಿ ಮತ್ತು ಬೇಸಿಗೆಯ ಬಿಸಿ ಹವಾಮಾನದಿಂದಾಗಿ ಬೆಂಕಿ ಬಹುಬೇಗ ವ್ಯಾಪಕವಾಗಿ ಹರಡಿಕೊಳ್ಳುತ್ತಿದೆ ಎಂದು ಸ್ಥಳೀಯ ತುರ್ತು ಸೇವೆಗಳು ಟ್ವಿಟರ್‌ನಲ್ಲಿ ವಿಚಾರ ತಿಳಿಸಿದೆ. ಹಾಗೆಯೇ ಸಮೀಪದ ಪೋರ್ಚುಗಲ್‌ಗೂ ಸಹ ಕಾಡ್ಗಿಚ್ಚು ವ್ಯಾಪಿಸಿಕೊಂಡಿದೆ.

Sariska Fire ಸಾರಿಸ್ಕಾ ಕಾಡ್ಗಿಚ್ಚು ಬಹುತೇಕ ನಿಯಂತ್ರಣಕ್ಕೆ, ಬೆಂಕಿಯಿಂದ ಹುಲಿಗೆ ತೊಂದರೆಯಾಗಿಲ್ಲ!

1,200 ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಒಂಬತ್ತು ವಾಟರ್‌ಬಾಂಬಿಂಗ್ ವಿಮಾನಗಳು ನೀರು ಸುರಿಯುವ ಮೂಲಕ ಕಾಡ್ಗಿಚ್ಚು ನಂದಿಸಲು ಪ್ರಯತ್ನಿಸುತ್ತಿವೆ. ಆಗಸ್ಟ್ 6 ರಿಂದ ಈವರೆಗೆ 17,000 ಹೆಕ್ಟೇರ್‌ಗಳಿಗಿಂತ ಹೆಚ್ಚು ಅರಣ್ಯ ಪ್ರದೇಶ ಸುಟ್ಟುಹೋಗಿವೆ. ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಈ ವರ್ಷದಲ್ಲಿ ಇಲ್ಲಿಯವರೆಗೆ ಸ್ಪೇನ್‌ನಲ್ಲಿ 2,75,000 ಹೆಕ್ಟೇರ್‌ಗಳಿಗಿಂತ ಹೆಚ್ಚು ಮತ್ತು ಪೋರ್ಚುಗಲ್‌ನಲ್ಲಿ 87,000 ಹೆಕ್ಟೇರ್‌ಗಿಂತಲೂ ಹೆಚ್ಚು ಅರಣ್ಯ ಪ್ರದೇಶ ಸುಟ್ಟುಹೋಗಿವೆ ಎಂದು ತಿಳಿದು ಬಂದಿದೆ. 

ಸಾರಿಸ್ಕಾ ಹುಲಿ ಧಾಮದಲ್ಲಿ ಕಾಡ್ಗಿಚ್ಚು, 10 ಚದರ ಕಿ.ಮೀ ಅರಣ್ಯ ವ್ಯಾಪಿಸಿದ ಬೆಂಕಿ!