ಬಲೂನ್ ಮೂಲಕ ಹಾರಾಡುತ್ತಿರುವ ಪುಟ್ಟ ಕಂದಮ್ಮ ಎಲ್ಲರ ಗಮನಸೆಳೆದ ವೈರಲ್ ವಿಡಿಯೋ ಕಂದನ ರಕ್ಷಿಸಲು ಬಂದ ತಾಯಿಗೆ ಕಾದಿತ್ತು ಅಚ್ಚರಿ
ನವದೆಹಲಿ(ಆ.08): ಮುದ್ದು ಮದ್ದಾದ ಪುಟ್ಟ ಕಂದಮ್ಮನಿಗೆ ಬಲೂನ್‌ಗಳನ್ನು ಕಟ್ಟಲಾಗಿದೆ. ಬಲೂನ್ ಗಾಳಿಯಿಂದ ಕಂದ ದಿಢೀರ್ ಮೇಲಕ್ಕೆ ಹಾರಲು ಆರಂಭಿಸಿದೆ. ಇದನ್ನು ಗಮನಿಸಿದ ತಾಯಿ ಮಗುವನ್ನು ರಕ್ಷಿಸಲು ಓಡೋಡಿ ಬಂದಿದ್ದಾರೆ. ಇನ್ನೇನು ಮಗುವನ್ನು ಎತ್ತಿಕೊಳ್ಳಬೇಕು ಅನ್ನುವಷ್ಟರಲ್ಲಿ ತಾಯಿಗೆ ಅಚ್ಚರಿ ಕಾದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಲ್ಲರ ಮನಸ್ಸು ಗೆದ್ದ 99ರ ಅಜ್ಜಿ; ಸೌಂದರ್ಯ ವರ್ಧಕ ವಸ್ತುವಿಗೆ ಇವರೇ ಬ್ರ್ಯಾಂಡ್ ಮಾಡೆಲ್!
ಇದು ಪ್ರಾಂಕ್ ವಿಡಿಯೋ. ಪತಿ ತನ್ನ ಪತ್ನಿಗೆ ಮಾಡಿದ ಪ್ರಾಂಕ್. ಕೋಣೆಯೊಳಗಿದ್ದ ಪತಿ ಪುಟ್ಟ ಮಗುವನ್ನು ಹಿಡಿದು ಡೋರ್ ಬದಿಯಲ್ಲಿ ಹಿಡಿದು ಮೆಲ್ಲನೇ ಮೇಲಕ್ಕೆ ಎತ್ತಿದ್ದಾರೆ. ಹೊರಗಡೆಯಿಂದ ನೋಡಿದಾಗ ಮಗು ಬಲೂನ್‌ನಲ್ಲಿ ಗಾಳಿ ಶಕ್ತಿಯಿಂದ ಮೇಲೆಕ್ಕೆ ಹಾರುವಂತೆ ಭಾಸವಾಗುತ್ತಿದೆ.
ಮಗು ಹಾರುತ್ತಿರುವುದನ್ನು ಗಮನಿಸಿದ ತಾಯಿ ಓಡೋಡಿ ಬಂದಿದ್ದಾರೆ. ಎತ್ತಿಕೊಳ್ಳುವಷ್ಟರಲ್ಲಿ ಕೋಣೆಯೊಳಗಿದ್ದ ಪತಿ ಮಗುವನ್ನು ಹಿಡಿದು ಹೊರಬಂದಿದ್ದಾರೆ. ಈ ಪ್ರಾಂಕ್ ಹಾಗೂ ಕ್ರಿಯೇಟಿವಿಟಿಗೆ ಹಲವು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯರಾತ್ರಿ ಬಾಗಿಲು ತೆರೆಯಲು ಡೋರ್ ಬೆಲ್ ಮಾಡಿದ ಕಾಣೆಯಾಗಿದ್ದ ನಾಯಿ; ವಿಡಿಯೋ ವೈರಲ್!
ಪುಟ್ಟ ಕಂದಮ್ಮ ಹಾಗೂ ತಾಯಿ ಮನಸ್ಸು ಅರ್ಥ ಮಾಡಿಕೊಳ್ಳಬೇಕಿತ್ತು. ಮಗುವನ್ನು ಹಿಡಿದು ಈ ರೀತಿ ಪ್ರಾಂಕ್ ಉತ್ತಮವಲ್ಲ. ತಾಯಿ ಆಘಾತಕ್ಕೊಳಗಾದರೆ ಗತಿ ಏನು ಎಂದು ಹಲವರು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮ್ಯಾಕ್ ಅಂಡ್ ಬೆಕ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಕ್ಷಣಾರ್ಧದಲ್ಲೇ ಈ ವಿಡಿಯೋ ವೈರಲ್ ಆಗಿದೆ.
