ಜಮ್ಮು ಕಾಶ್ಮೀರ : ಭಾರತೀಯ ವಾಯುಪಡೆ ಬಾಲಾಕೋಟ್ ನಲ್ಲಿ ದಾಳಿ ಮಾಡಿ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಪ್ರಕರಣ ಹೆಚ್ಚಿದೆ. 

ಗಡಿ ನಿಯಂತ್ರಣ ರೇಖೆಯಾದ್ಯಂತ ಅನೇಕ ಬಾರಿ ಶೆಲ್ ದಾಳಿ ನಡೆಸುತ್ತಿದೆ. 

ಭಾರತೀಯ ಸೇನೆ ಹಾಗೂ ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕ್ ಪಡೆಗಳು ನಿರಂತರವಾಗಿ ದಾಳಿ ನಡೆಸುತ್ತಿವೆ.

ರಫೇಲ್‌ ಇದ್ದಿದ್ದರೆ ಪಾಕ್ ಗಡಿ ದಾಟುವ ಅಗತ್ಯವೇ ಇರಲಿಲ್ಲ

ಪಾಕ್ ದಾಳಿಗೆ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರವನ್ನೇ ನೀಡಿದೆ. ಭಾರತೀಯ ಸೇನೆ ಪ್ರತಿದಾಳಿ ನಡೆಸಿದ್ದು ಈ ವೇಳೆ ಐದು ಪಾಕ್ ನೆಲೆಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡಲಾಗಿದೆ. 

ಪಾಕ್ ವಶದಲ್ಲಿ ವಿಂಗ್ ಕಮಾಂಡರ್?: ಸ್ವ'ಅಭಿನಂದನ್' ಪಾಕ್ ಜಾಯಮಾನ!

ಪಾಕ್ ಹಾಗೂ ಭಾರತೀಯ ಪಡೆಗಳ ನಡುವೆ ನಡೆದ ಪರಸ್ಪರ ದಾಳಿಯಲ್ಲಿ  ಪಾಕಿಸ್ತಾನದಲ್ಲಿ ಸಾವು ನೋವುಗಳು ಸಂಭವಿಸಿವೆ ಎಂದು ಭಾರತೀಯ ಸೇನೆ ಹೇಳಿದೆ.