ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಮಿಗ್-21 ವಿಮಾನ ಪತನ ಪ್ರಕರಣ| ಪಾಕ್ ವಶದಲ್ಲಿದ್ದಾರಾ ಭಾರತದ ವಿಂಗ್ ಕಮಾಂಡರ್?| ವಿಂಗ್ ಕಮಾಂಡರ್ ಅಭಿನಂದನ್ ಬಂಧಿಸಿರುವುದಾಗಿ ಹೇಳಿಕೊಂಡ ಪಾಕ್| ವಿಡಿಯೋ ಸತ್ಯಾಸತ್ಯತೆ ಖಚಿತತೆ ಕೊಡಬೇಕಿದೆ ವಾಯುಸೇನೆ|
ಇಸ್ಲಾಮಾಬಾದ್(ಫೆ.27): ಭಾರತೀಯ ವಾಯುಪಡೆಯ ಮಿಗ್-21 ವಿಮಾನ ಪತನ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮಿಗ್-21 ವಿಮಾನವನ್ನು ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದ್ದಲ್ಲದೇ, ಇದೀಗ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಂಧಿಸಿದ್ದಾಗಿ ಹೇಳಿಕೊಂಡಿದೆ.
ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಪಾಕ್, ಇದೊಂದು ಅಭೂತಪೂರ್ವ ಯಶಸ್ಸು ಎಂದು ಹೇಳಿಕೊಂಡಿದೆ. ರಕ್ತಸಿಕ್ತ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಂಧಿಸಿ ಕಾರಿನಲ್ಲಿ ಕರೆಯೊಯ್ಯುವ ವಿಡಿಯೋ ಇದಾಗಿದೆ.
"
ಆದರೆ ಈ ವಿಡಿಯೋ ಸತ್ಯಾಸತ್ಯತೆ ಕುರಿತು ಭಾರತದ ವಾಯುಸೇನೆ ಇದುವರೆಗೂ ಯಾವುದೇ ಅಧಿಕೃತ ಹೇಳಿಲ್ಲ.
ಅಸಲಿ ಕತೆ ಏನು?:
ಅಸಲಿಗೆ ಇಂತದ್ದೊಂದು ಸುಳ್ಳು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನಿನ್ನೆಯೇ ಅಪ್ಲೋಡ್ ಮಾಡಲಾಗಿದೆ. ಅಲ್ಲದೇ ಬೆಂಗಳೂರಿನ ಏರ್ ಶೋಗೂ ಮೊದಲು ನಡೆದಿದ್ದ ಸೂರ್ಯ ಕಿರಣ್ ವಿಮಾನ ಅಪಘಾತದಲ್ಲಿ ಗಾಯಗೊಂಡಿದ್ದ ಪೈಲೆಟ್ ಓರ್ವರ ವಿಡಿಯೋ ಬಳಸಿ ಪಾಕಿಸ್ತಾನ ಮಾಧ್ಯಮಗಳು ಸುಳ್ಳು ಸುದ್ದಿ ಹರಡುತ್ತಿವೆ.
ಇತ್ತ ಬೆಳಗ್ಗೆಯಷ್ಟೇ ಭಾರತೀಯ ವಾಯುಪಡೆಯ ಮಿಗ್-21 ವಿಮಾನ ಹೊಡೆದಿರುವುದಾಗಿ ಹೇಳಿದ್ದ ಮೇಜರ್ ಜನರಲ್ ಆಸಿಫ್ ಗಫೂರ್, ಇದೀಗ ಉಲ್ಟಾ ಹೊಡೆದಿದ್ದು, ಬದ್ಗಾಮ್ ನಲ್ಲಿ ಪತನಗೊಂಡ ವಿಮಾನಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
