Asianet Suvarna News Asianet Suvarna News

ಇರಾಕ್‌ನಲ್ಲಿ ಮದ್ವೆ ಮನೇಲಿ ಪಟಾಕಿ ಅವಘಡ: 100 ಜನರ ಸಾವು

ವಿವಾಹ ಕಾರ್ಯಕ್ರಮದ ವೇಳೆ ಸಂಭ್ರಮಕ್ಕಾಗಿ ಹಚ್ಚಿದ ಪಟಾಕಿಯಿಂದ ಬೆಂಕಿ ಹೊತ್ತಿಕೊಂಡು ಬರೋಬ್ಬರಿ 100 ಜನರು ಸಾವನ್ನಪ್ಪಿ, 150 ಜನರು ಗಾಯಗೊಂಡಿರುವ ಭೀಕರ ಘಟನೆ ಇರಾಕ್‌ನಲ್ಲಿ ನಡೆದಿದೆ.

firework mishap in Marriage hall 100 killed, over 150 injured in Iraqs mosul akb
Author
First Published Sep 28, 2023, 8:06 AM IST

ಮೊಸುಲ್‌ (ಇರಾಕ್): ವಿವಾಹ ಕಾರ್ಯಕ್ರಮದ ವೇಳೆ ಸಂಭ್ರಮಕ್ಕಾಗಿ ಹಚ್ಚಿದ ಪಟಾಕಿಯಿಂದ ಬೆಂಕಿ ಹೊತ್ತಿಕೊಂಡು ಬರೋಬ್ಬರಿ 100 ಜನರು ಸಾವನ್ನಪ್ಪಿ, 150 ಜನರು ಗಾಯಗೊಂಡಿರುವ ಭೀಕರ ಘಟನೆ ಇರಾಕ್‌ನಲ್ಲಿ ನಡೆದಿದೆ. ಇಲ್ಲಿನ ನಿವೆವೆ ಪ್ರದೇಶದ ಹಮ್ದಾನಿಯಾದಲ್ಲಿ ನಡೆಯುತ್ತಿದ್ದ ಕ್ರಿಶ್ಚಿಯನ್‌ ಸಂಪ್ರದಾಯದ ಮದುವೆ ಸಮಾರಂಭದಲ್ಲಿ ಬೆಂಕಿ ದುರಂತ ಸಂಭವಿಸಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಭೀತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದುವೆ ಸಮಾರಂಭದಲ್ಲಿ ವಧುವರರು ನೃತ್ಯ ಮಾಡಲು ಪ್ರಾರಂಭಿಸುತ್ತಿದ್ದಂತೆ ಸಿಡಿಮದ್ದುಗಳ ಬೆಂಕಿಯು ಸೀಲಿಂಗ್‌ಗೆ ತಾಗಿ ಕೆಲವೇ ಸೆಕೆಂಡುಗಳಲ್ಲಿ ಇಡೀ ಸಭಾಂಗಣಕ್ಕೆ ಬೆಂಕಿ ಹೊತ್ತಿಕೊಂಡಿತು’ ಎಂದು ಗಾಯಾಳುಗಳು ತಿಳಿಸಿದ್ದಾರೆ.

ರಾಜಧಾನಿಯಲ್ಲಿ ದೀಪಾವಳಿಗೆ ಪಟಾಕಿ ಸಂಪೂರ್ಣ ನಿಷೇಧ, ಮಾರಾಟ-ಸಿಡಿಸಲು ಅವಕಾಶವಿಲ್ಲ!

ಮೃತಪಟ್ಟವರಲ್ಲಿ ಮಕ್ಕಳೂ ಸೇರಿದ್ದು, ವಧುವರರ ಆರೋಗ್ಯ ಸ್ಥತಿಗತಿ ಕುರಿತು ತಕ್ಷಣಕ್ಕೆ ಯಾವುದೇ ಮಾಹಿತಿ ಇಲ್ಲ. ಇನ್ನು ಘಟನೆ ಕುರಿತು ತನಿಖೆಗೆ ಆದೇಶಿಸಿರುವ ಇರಾಕ್‌ ಪ್ರಧಾನಿ ಸಂಸತ್ರಸ್ತರಿಗೆ ಪರಿಹಾರ ಘೋಷಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶೃಂಗಾರಕ್ಕಾಗಿ ದಹನಕಾರಿ ವಸ್ತುಗಳನ್ನು ಬಳಸಿದ್ದ ಕಾರಣ ಬೆಂಕಿ ಬಹುಬೇಗ ಹಬ್ಬಿ ಭಾರೀ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾವೇರಿ ಪಟಾಕಿ ಗೋದಾಮಿಗೆ ಬೆಂಕಿ, 4 ಮಂದಿ ಸಜೀವದಹನ

Follow Us:
Download App:
  • android
  • ios