Asianet Suvarna News Asianet Suvarna News

ರಾಜಧಾನಿಯಲ್ಲಿ ದೀಪಾವಳಿಗೆ ಪಟಾಕಿ ಸಂಪೂರ್ಣ ನಿಷೇಧ, ಮಾರಾಟ-ಸಿಡಿಸಲು ಅವಕಾಶವಿಲ್ಲ!

ದೀಪ ಬೆಳಗಿ, ಪಟಾಕಿ ಸಿಡಿಸುವ ದೀಪಾವಳಿ ಹಬ್ಬಕ್ಕೆ ತಯಾರಿಗಳು ಆರಂಭಗೊಂಡಿದೆ. ಇಡೀ ಭಾರತ ದೀಪಾವಳಿ ಹಬ್ಬದಲ್ಲಿ ಮಿಂದೇಳಲು ಸಜ್ಜಾಗಿದೆ. ಆದರೆ ದೆಹಲಿಯಲ್ಲಿ ಎಲ್ಲಾ ರೀತಿಯ ಪಟಾಕಿ ನಿಷೇಧಿಸಲಾಗಿದೆ.  ಮಾರಾಟ, ಖರೀದಿ, ಸಿಡಿಸುವುದು ನಿಷೇಧ ಹೇರಲಾಗಿದೆ.

Delhi Govt announces all types fire crackers ban ahead of Diwali  festival to control pollution ckm
Author
First Published Sep 11, 2023, 5:24 PM IST

ನವದೆಹಲಿ(ಸೆ.11) ದೀಪಾವಳಿ ಹಬ್ಬಕ್ಕೆ ಇನ್ನೊಂದು ತಿಂಗಳು ಮಾತ್ರ ಬಾಕಿ.  ಈಗಾಗಲೇ ಸಡಗರ ಮನೆ ಮಾಡಿದೆ.  ಗಣೇಶ ಚತುರ್ಥಿ, ದೀಪಾಳಿ ಹಬ್ಬಗಳು ಭಾರತದ ಮೂಲೆ ಮೂಲೆಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಕುಟುಂಬದವರು ಒಟ್ಟಿಗೆ ಸೇರಿ ದೀಪ ಬೆಳಗಿ ಪಟಾಕಿ ಸಿಡಿಸಿ ಆಚರಿಸುವ ದೀಪಾವಳಿ ಹಬ್ಬಕ್ಕೆ ಈಗನಿಂದಲೇ ನಿಯಂತ್ರಣಗಳು ಆರಂಭಗೊಂಡಿದೆ. ವಾಯು ಮಾಲಿನ್ಯ ನಿಯಂತ್ರಣದ ಕಾರಣದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ಸಿಡಿಸುವುದು, ಮಾರಾಟ ಮಾಡುವುದು ನಿಷೇಧಿಸಲಾಗಿದೆ.  ಇಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಈ ಘೋಷಣೆ ಮಾಡಿದ್ದಾರೆ.

ಚಳಿಗಾಲದ ಅವಧಿಯಲ್ಲಿ ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗಲಿದೆ. ದೀಪಾವಳಿ ಹಬ್ಬದಿಂದ ಆರಂಭಗೊಂಡು, ಕ್ರಿಸ್ಮಸ್, ಹೊಸ ವರ್ಷ ಆಚರಣೆ ವರೆಗೂ ಪಟಾಕಿಗಳ ಅಬ್ಬರ ನಡೆಯಲಿದೆ. ಹೀಗಾಗಿ ವಾಯುಮಾಲಿನ್ಯ ನಿಯಂತ್ರಣಕ್ಕೂ ಮೀರಲಿದೆ.  ವಾಯು ಮಾಲಿನ್ಯದ ದೃಷ್ಟಿಯಿಂದ ದೆಹಲಿಯಲ್ಲಿ ಎಲ್ಲಾ ರೀತಿಯ ಪಟಾಕಿ ನಿಷೇಧಿಸಲಾಗಿದೆ ಎಂದಿದ್ದಾರೆ. ಆನ್‌ಲೈನ್ ಸೇರಿದಂತೆ ಯಾವುದೇ ರೀತಿಯ ಮಾರಾಟಕ್ಕೂ ಅವಕಾಶವಿಲ್ಲ ಎಂದು ಗೋಪಾಲ್ ರೈ ಹೇಳಿದ್ದಾರೆ.

ಈ 4 ರಾಶಿಯವರಿಗೆ ದೀಪಾವಳಿ ಬಂಪರ್; ಕೈ ಹಿಡಿಲಿದ್ದಾನೆ ಶನಿದೇವ...!

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡೆಸಿದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಿಸಲು ಪಟಾಕಿ ನಿಷೇಧ ಮಾಡಲಾಗಿದೆ.   ಕಳೆದೆರಡು ವರ್ಷವೂ ದೆಹಲಿಯಲ್ಲಿ ಪಟಾಕಿ ನಷೇಧಿಸಲಾಗಿದೆ. ಜನರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಈ ಬಾರಿ ಮತ್ತಷ್ಟು ಕಠಿಣ ನೀತಿಗಳು ಅನ್ವಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಪಟಾಕಿ ನಿಷೇಧ ಕುರಿತು ಪೊಲೀಸರಿಗೆ ಸುತ್ತೊಲೇ ನೀಡಲಾಗಿದೆ. ದೆಹಲಿಯಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತದೆ.  ನಿಯಮ ಉಲ್ಲಂಘಿಸಿದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಪರಿಸರಕ್ಕೆ ಪೂರಕ, ಹಸಿರು ಪಟಾಕಿ ಸೇರಿದಂತೆ ಯಾವುದೇ ಪಟಾಕಿಗೆ  ಅವಕಾಶವಿಲ್ಲ. ದೀಪಾವಳಿ ಹಬ್ಬವನ್ನು ಬೆಳಕಿನಿಂದ ಆಚರಿಸಿ, ಎಲ್ಲಾ ಸಂಪ್ರದಾಯ ಪಾಲಿಸಿ ಆಚರಿಸಿ. ಆದರೆ ಪಟಾಕಿ ಸಿಡಿಸಿ ಮಾಲಿನ್ಯಕ್ಕೆ ಎಡೆ ಮಾಡಿಕೊಬೇಡಿ ಎಂದು ಸಚಿವರು ಮನವಿ ಮಾಡಿದ್ದಾರೆ.

ಮೋದಿ ಅಮೆರಿಕ ಭೇಟಿ ಬೆನ್ನಲ್ಲೇ ದೀಪಾವಳಿ ಹಬ್ಬಕ್ಕೆ ಶಾಲೆಗೆ ಸರ್ಕಾರಿ ರಜೆ ಘೋಷಿಸಿದ ನ್ಯೂಯಾರ್ಕ್!

ಕಳೆದ ವರ್ಷ ಮಾಲಿನ್ಯ ನಿಯಂತ್ರ ಮೀರಿತ್ತು. ಸುಪ್ರೀಂ ಕೋರ್ಟ್, ಮಾಲಿನ್ಯ ನಿಯಂತ್ರಣ ಪ್ರಾಧಿಕಾರಗಳು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರೆ, ವರ್ಕ್ ಫ್ರಮ್ ಹೋಮ್ ಸೇರಿದಂತೆ ಹಲವು  ಕ್ರಮಗಳು ಜಾರಿಯಾಗಿತ್ತು.  ದೆಹಲಿ ಜನರಲ್ಲಿ ಆರೋಗ್ಯ ಸಮಸ್ಸೆ ತೀವ್ರವಾಗಿತ್ತು. ಈ ಬಾರಿಈ ಪರಿಸ್ಥಿತಿ ತಲುಪದಂತೆ ನೋಡಿಕೊಳ್ಳಲು ದೆಹಲಿ ಸರ್ಕಾರ ಈಗನಿಂದಲೇ ಎಚ್ಚೆತ್ತುಕೊಂಡಿದೆ.
 

Follow Us:
Download App:
  • android
  • ios