ಇರಾನ್‌ನ ಬಂದರ್ ಅಬ್ಬಾಸ್ ಬಂದರಿನಲ್ಲಿ ಭಾರಿ ಸ್ಫೋಟ ಸಂಭವಿಸಿ 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವು ಕಂಟೇನರ್‌ಗಳು ಸ್ಫೋಟಗೊಂಡಿದ್ದರಿಂದ ಈ ದುರಂತ ಸಂಭವಿಸಿದೆ.

ಟೆಹ್ರಾನ್‌ (ಏ.26): ಇರಾನ್‌ನ ಬಂದರ್‌ ಅಬ್ಬಾಸ್‌ ಪೋರ್ಟ್‌ನಲ್ಲಿ ಶನಿವಾರ ಭಾರೀ ಸ್ಪೋಟ ಸಂಭವಿಸಿದ್ದು, ಕನಿಷ್ಠ 400 ಮಂದಿ ಗಾಯಾಳುವಾಗಿದ್ದಾರೆ ಎನ್ನಲಾಗಿದೆ. ಇರಾನ್‌ನ ಪ್ರಮುಖ ಬಂದರಿನಲ್ಲಿ ನಿಲ್ಲಿಸಲಾಗಿದ್ದ ಹಲವು ಕಂಟೇನರ್‌ಗಳು ಏಕಕಾಲಕ್ಕೆ ಸ್ಫೋಟಗೊಂಡಿದ್ದರಿಂದ ದೊಡ್ಡ ಪ್ರಮಾಣದ ಬ್ಲಾಸ್ಟ್‌ ಹಾಗೂ ಬೆಂಕಿ ಉಂಟಾಗಿದೆ.

ಈ ಘಟನೆಯಲ್ಲಿ ಕನಿಷ್ಠ 400 ಮಂದಿ ಗಾಯಾಳುವಾಗಿದ್ದು, ಸಾವಿನ ಸಂಖ್ಯೆಯ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ. ವೈರಲ್‌ ಆಗಿರುವ ವಿಡಿಯೋದಲ್ಲಿ ಬಂದರು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹೊಗೆ ಹೊರಬರುತ್ತಿರುವುದು ಕಂಡಿದೆ.

ಇರಾನ್‌ನ ಶಾಹಿದ್ ರಾಜೀ ಬಂದರಿನಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ 280 ಜನರು ಗಾಯಗೊಂಡರು, ಇದರಿಂದಾಗಿ ವ್ಯಾಪಕ ಬೆಂಕಿ ಮತ್ತು ಹೊಗೆ ಉಂಟಾಯಿತು ಎಂದು ಮೊದಲಿಗೆ ವರದಿಗಳು ಬಂದಿದ್ದವು. ಬಹು ಕಂಟೇನರ್ ಸ್ಫೋಟಗಳಿಗೆ ಸಂಬಂಧಿಸಿದ ಈ ಘಟನೆಯು ಕ್ವಿಕ್‌ ರಿಯಾಕ್ಷನ್‌ ಟೀಮ್‌ ತಕ್ಷಣವೇ ಆಗಮಿಸಿದೆ. ಸಂತ್ರಸ್ಥರನ್ನು ವೈದ್ಯಕೀಯ ಸೌಲಭ್ಯಗಳಿಗೆ ಸಾಗಿಸಲಾಗಿದ್ದು, ಹೊಸ ವರದಿಯ ಪ್ರಕಾರ 400ಕ್ಕೂ ಅಧಿಕ ಮಂದಿ ಗಾಯಾಳುವಾಗಿದ್ದಾರೆ ಎನ್ನಲಾಗಿದೆ.

"ಶಾಹಿದ್ ರಾಜೀ ಬಂದರು ಡಾಕ್‌ನ ಒಂದು ಭಾಗದಲ್ಲಿ ಸ್ಫೋಟ ಸಂಭವಿಸಿದೆ ಮತ್ತು ನಾವು ಬೆಂಕಿಯನ್ನು ನಂದಿಸುತ್ತಿದ್ದೇವೆ" ಎಂದು ಪ್ರಾದೇಶಿಕ ಬಂದರು ಅಧಿಕಾರಿ ಎಸ್ಮಾಯಿಲ್ ಮಲೆಕಿಜಾದೆ ಅವರನ್ನು ಉಲ್ಲೇಖಿಸಿ ಇರಾನ್‌ ಟಿವಿ ವರದಿ ಮಾಡಿದೆ.

ರಾಜಧಾನಿ ಟೆಹ್ರಾನ್‌ನಿಂದ ದಕ್ಷಿಣಕ್ಕೆ 1000 ಕಿಲೋಮೀಟರ್ ದೂರದಲ್ಲಿರುವ ಶಾಹಿದ್ ರಾಜೀ, ಇರಾನ್‌ನ ಅತ್ಯಂತ ಅತ್ಯಾಧುನಿಕ ಕಂಟೇನರ್ ಬಂದರು ಮತ್ತು ಹಾರ್ಮೋಜ್ಗನ್ ಪ್ರಾಂತೀಯ ರಾಜಧಾನಿ ಬಂದರ್ ಅಬ್ಬಾಸ್‌ನಿಂದ ಪಶ್ಚಿಮಕ್ಕೆ 23 ಕಿಲೋಮೀಟರ್ ದೂರದಲ್ಲಿದೆ ಮತ್ತು ವಿಶ್ವದ ತೈಲ ಉತ್ಪಾದನೆಯ ಐದನೇ ಒಂದು ಭಾಗ ಹಾದುಹೋಗುವ ಹಾರ್ಮೋಜ್ ಜಲಸಂಧಿಯ ಉತ್ತರಕ್ಕೆ ಇದೆ.

"ಸ್ಫೋಟದ ನಂತರ ನಾಲ್ಕು ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ" ಎಂದು ಹಾರ್ಮೋಜ್ಗನ್ ರೆಡ್ ಕ್ರೆಸೆಂಟ್ ಸೊಸೈಟಿಯ ಮುಖ್ಯಸ್ಥ ಮೊಖ್ತರ್ ಸಲಾಹ್‌ಶೌರ್ ಇರಾನ್‌ ಟಿವಿಗೆ ತಿಳಿಸಿದರು.

ಕಾಡುತ್ತಿರುವ ಹೌತಿ ಉಗ್ರರ ಹೆಡೆಮುರಿ ಕಟ್ಟಲು ಟ್ರಂಪ್ ಪ್ಲಾನ್‌ : ಇರಾನ್‌ಗೆ ಮತ್ತಷ್ಟು ಸಂಕಷ್ಟ

ಪ್ರಾಂತ್ಯದ ಬಿಕ್ಕಟ್ಟು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಮೆಹರ್ದಾದ್ ಹಸನ್ಜಾದೆ ಅವರು ಇರಾನ್‌ ಟಿವಿಗೆ ದೃಢಪಡಿಸಿದ್ದು, ಘಟನೆಗೆ ಹಲವಾರು ಕಂಟೇನರ್‌ಗಳು ಸ್ಫೋಟಗೊಂಡಿರುವುದು ಕಾರಣ ಎಂದು ಹೇಳಿದ್ದಾರೆ."ನಾವು ಪ್ರಸ್ತುತ ಗಾಯಾಳುಗಳನ್ನು ಸ್ಥಳಾಂತರಿಸುತ್ತಿದ್ದೇವೆ ಮತ್ತು ಹತ್ತಿರದ ವೈದ್ಯಕೀಯ ಕೇಂದ್ರಗಳಿಗೆ ಸಾಗಿಸುತ್ತಿದ್ದೇವೆ" ಎಂದು ಅವರು ಹೇಳಿದರು.

ಉದ್ವಿಘ್ನತೆ ನಡುವೆ ಕೊನೆಗೂ ಅಮೆರಿಕ ಇರಾನ್ ಪರಮಾಣು ಮಾತುಕತೆ, ಮಹತ್ವದ ಘೋಷಣೆ

Scroll to load tweet…