ಕತಾರ್(ಜ. 19)  ಕತಾರಿನ ಭಾರತೀಯ ಸಾಂಸ್ಕೃತಿಕ ಸಂಘದ ಚುನಾವಣೆಯಲ್ಲಿ ಜಯಭೇರಿ ಗಳಿಸಿ ಅಧ್ಯಕ್ಷ ಸ್ಥಾನಕ್ಕೇರಿದ  ಪಿ. ಏನ್. ಬಾಬುರಾಜನ್  ಅವರನ್ನು ಚಿಕ್ಕಮಗಳೂರು ಗೆಳೆಯರ ಬಳಗ (CFC) ಹಾಗೂ ನಿಯಾಜ್ ಅಹ್ಮದ್ ಅಭಿಮಾನಿ  ಬಳಗ (NFC) ಸನ್ಮಾನಿಸಿತು.

ಇದೇ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಗಳಿಸಿ ದಾಖಲೆ ನಿರ್ಮಿಸಿದ ಕತಾರಿನ ಕನ್ನಡಿಗ , ಸಮಾಜ ಸೇವಕ ಸುಬ್ರಮಣ್ಯ ಹೆಬ್ಬಾಗಿಲು ( ಮಾಜಿ ಉಪಾಧ್ಯಕ್ಷ - ಕರ್ನಾಟಕ ಸಂಘ ಕತಾರ್ , ಮಾಜಿ ಸಹ ಕಾರ್ಯದರ್ಶಿ - ಐ. ಸಿ . ಬಿ . ಫ್ ) ಅವರನ್ನು ಸನ್ಮಾನಿಸಲಾಯಿತು.

ಸಂಘದ (CFC ಹಾಗೂ NFC) ಅಧ್ಯಕ್ಷರಾದ ಇಸ್ಮಾಯಿಲ್ ಅಬೂಬಕ್ಕರ್  ಹಾಗೂ ಪ್ರಧಾನ ಕಾರ್ಯದರ್ಶಿ ಮಹಿಳಾ ವಿಭಾಗದ ಮುಖ್ಯಸ್ಥೆ ನೂರ್ ಉಲ್  ಹುದಾ ಹಾಗೂ ಮಿಸ್ ಶೇಖಾ ಮಡಿಹಾ  ಹೂಗೂಚ್ಛ ನೀಡಿ ಅಭಿನಂದಿಸಿದರು. ಉಪಾಧ್ಯಕ್ಷ ಜಾಕಿರ್ ಅಹ್ಮದ್ ರವರು ಕತಾರಿನ ಖ್ಯಾತ ಸಿಹಿ ಪೆಟ್ಟಿಗೆ ವಿತರಿಸಿ ಶುಭ ಹಾರೈಸಿದರು . 

ಕತಾರ್ ಕನ್ನಡ ಸಂಘದಿಂದ ರಕ್ತದಾನ

ಕಾರ್ಯಕ್ರಮವನ್ನು ಜಾಕಿರ್ ಅಹ್ಮದ್ ನಿರೂಪಿಸಿದರು. ಸುಬ್ರಮಣ್ಯ ಹೆಬ್ಬಾಗಿಲು ಸಮಾಜ ಸೇವೆಯನ್ನು ಕೊಂಡಾಡಿ ಪ್ರಶಂಸನೀಯ ಮಾತುಗಳನ್ನಾಡಿದರು. ಇಸ್ಮಾಯಿಲ್ ಅಬೂಬಕ್ಕರ್ ವಂದನಾರ್ಪಣೆಯನ್ನು ನಡೆಸಿಕೊಟ್ಟರು. 

ಐಸಿಬಿಎಫ್ ಮಾಜಿ ಮುಖ್ಯಸ್ಥ  ಮಹೇಶ್ ಗೌಡ, ಐಸಿಬಿಎಫ್ ನ ನೂತನ ಸದಸ್ಯ ದಿನೇಶ್ ಗೌಡ ಉಪಸ್ಥಿತರಿದ್ದರು. ಹಾಗೂ ಸಂಘದ (CFC ಹಾಗೂ NFC) ಪಧಾಧಿಕಾರಿಗಳಾದ ರಾಇಶ್ , ಜುನೈದ್ , ಒವಯಿಸ್, ಇಸ್ಹಾಕ್, ಇಮ್ರಾನ್ ಹಾಗೂ ಇರ್ಷಾದ್ ಇದ್ದರು.