ವಿಶ್ವದಾದ್ಯಂತ ಮತ್ತೊಂದು ಎಚ್‌ಎಂಪಿವಿ ವೈರಸ್ ಆತಂಕ: ಚೀನಾದಲ್ಲಿ ಇದೀಗ ಏನಾಗ್ತಿದೆ?
ಇಡೀ ವಿಶ್ವವನ್ನೇ ಸ್ತಬ್ಧಬಾಗಿಸಿದ್ದ ಕೊರೋನಾ ಸೋಂಕಿನ ಕರಾಳ ಪರಿಣಾಮಗಳು ಇನ್ನೂ ಮಾಸದೇ ಇರುವಾಗಲೇ, ಚೀನಾದಲ್ಲಿ ಎಚ್‌ಎಂಪಿವಿ (ಹ್ಯೂಮನ್ ಮೆಟಾನ್ಯೂಮೋವೈರಸ್) ವೈರಸ್ ವ್ಯಾಪಕವಾಗಿ ಹಬ್ಬಿರುವುದು ಆತಂಕಕ್ಕೆ ಕಾರಣವಾಗಿದೆ.
ಇಡೀ ವಿಶ್ವವನ್ನೇ ಸ್ತಬ್ಧಬಾಗಿಸಿದ್ದ ಕೊರೋನಾ ಸೋಂಕಿನ ಕರಾಳ ಪರಿಣಾಮಗಳು ಇನ್ನೂ ಮಾಸದೇ ಇರುವಾಗಲೇ, ಚೀನಾದಲ್ಲಿ ಎಚ್‌ಎಂಪಿವಿ (ಹ್ಯೂಮನ್ ಮೆಟಾನ್ಯೂಮೋವೈರಸ್) ವೈರಸ್ ವ್ಯಾಪಕವಾಗಿ ಹಬ್ಬಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಕೋವಿಡ್ ವಿಷಯದಲ್ಲಿ ರಹಸ್ಯವಾಗಿ ನಡೆದುಕೊಂಡಂತೆ ಈಗಲೂ ಚೀನಾ ಮುಗುಮ್ಮಾಗಿರುವುದು ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿದೆ.
ಚೀನಾದಲ್ಲಿ ಇದೀಗ ಏನಾಗ್ತಿದೆ?: ಚೀನಾದ ಹಲವು ಭಾಗಗಳಲ್ಲಿ ಎಚ್‌ಎಂಪಿವಿ ಸೋಂಕು ವ್ಯಾಪಕವಾಗಿ ಹಬ್ಬಿದೆ. ಈ ಉಸಿರಾಟ ಸಂಬಂಧಿ ಸಮಸ್ಯೆಯಿಂದಾಗಿ ಸಾವಿರಾರು ಪ್ರಮಾಣದಲ್ಲಿ ಜನರು ಆಸ್ಪತ್ರೆಗೆ ದಾಂಗುಡಿ ಇಡುತ್ತಿದ್ದಾರೆ. ಪರಿಣಾಮ ಆಸ್ಪತ್ರೆಗಳೆಲ್ಲಾ ತುಂಬಿ ತುಳಕುತ್ತಿವೆ. ಭಾರೀ ಪ್ರಮಾಣದಲ್ಲಿ ಸಾವು ಕೂಡಾ ಸಂಭವಿಸಿದೆ. ಹೀಗಾಗಿ ಶವಾಗಾರ ಮತ್ತು ಸ್ಮಶಾನಗಳು ಕೂಡಾ ತುಂಬಿ ತುಳುಕುತ್ತಿವೆ ಸೋಂಕು ನಿಗ್ರಹದ ನಿಟ್ಟಿನಲ್ಲಿ ಚೀನಾ ಸರ್ಕಾರ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದೆ. ಕೊರೋನಾ ಸಂದರ್ಭದಲ್ಲಿ ಉಂಟಾದ ಅವ್ಯವಸ್ಥೆ ಮತ್ತೆ ನಿರ್ಮಾಣವಾಗುವುದನ್ನು ತಡೆಯಲು ಸೂಕ್ತ ಮಾರ್ಗಸೂಚಿ ರಚಿಸಲು ಸಿದ್ಧತೆ ನಡೆಯುತ್ತಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಆಯೋಗಯು ಎಚ್‌ಎಂಪಿವಿ ಸೋಂಕಿನ ವರದಿ, ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಏಜೆನ್ಸಿ ಸ್ಥಾಪಿಸಲು ಮತ್ತು ಸಿಸಿಟಿವಿ ಅಳವಡಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ಚೀನಾ ಬಳಿಕ ಹಾಂಕಾಂಗ್, ಜಪಾನ್‌ಗೂ ವೈರಸ್ ಲಗ್ಗೆ: ಹೆಚ್ಚಾದ ಆತಂಕ
ಸೋಂಕು ಹರಡುವಿಕೆ, ಲಕ್ಷಣ, ಚಿಕಿತ್ಸೆ: ಎಚ್‌ಎಂಪಿವಿ ಸೋಂಕು ಅತಿ ಹೆಚ್ಚಾಗಿ ಮಕ್ಕಳು ಹಾಗೂ ವೃದ್ಧರು ಹಾಗೂ ರೋಗನಿರೋಧಕ ಶಕ್ತಿಯ ಕೊರತೆ ಇರುವವರನ್ನು ಬಾಧಿಸುವಂತಹದ್ದಾಗಿದೆ. ಕೆಮ್ಮುವಾಗ ಅಥವಾ ಸೀನುವಾಗ ಹೊರಬರುವ ಕಣಗಳಿಂದ ಈ ಸೊಂಕು ಹರಡುತ್ತದೆ. ಸೋಂಕಿತರ ಸಂಪರ್ಕಕ್ಕೆ ಬರುವುದರಿಂದ ಹಾಗೂ ಕಲುಷಿತ ವಾತಾವರಣಕ್ಕೆ ತೆರೆದುಕೊಳ್ಳುವುದರಿಂದಲೂ ಎಚ್‌ಎಂಪಿವಿ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ. ಕೆಮ್ಮು, ಶೀತ, ಜ್ವರ, ಗಂಟಲು ನೋವು, ಉಬ್ಬಸ, ಉಸಿರಾಟದಲ್ಲಿ ತೊಂದರೆ ಸೇರಿದಂತೆ ಕೊರೋನಾದ ಸೌಮ್ಯ ಲಕ್ಷಣಗಳು ಲಕ್ಷಣಗಳು ಎಚ್‌ಎಂಪಿವಿ ಸೋಂಕಿತರಲ್ಲಿ ಕಂಡುಬರುತ್ತವೆ. ಎಚ್‌ಎಂಪಿವಿ ಸೋಂಕಿಗೆ ಸದ್ಯ ಯಾವುದೇ ಲಸಿಕೆ ಇಲ್ಲ.
ಮೊದಲು ಕಾಣಿಸಿಕೊಂಡಿದ್ದು ಎಲ್ಲಿ?: 2001ರಲ್ಲಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಕ್ಕಳಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಮೊದಲ ಬಾರಿಗೆ ಡಚ್ ಸಂಶೋಧಕರು ಎಚ್‌ಎಂಪಿವಿ ಸೋಂಕನ್ನು ಪತ್ತೆ ಮಾಡಿದ್ದರು. ಅಧ್ಯಯನಗಳ ಪ್ರಕಾರ ಈ ಸೋಂಕು ಕಳೆದ 60 ವರ್ಷಗಳಿಂದ ಅಸ್ತಿತ್ವದಲ್ಲಿದೆ. 2023ರಲ್ಲಿ ಇದು ನೆದರ್ಲೆಂಡ್, ಬ್ರಿಟನ್, ಫಿನ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ಅಮೆರಿಕದಲ್ಲಿ ಕಾಣಿಸಿಕೊಂಡಿತ್ತು.
ಚೀನಾದಲ್ಲಿ ಮತ್ತೆ ವೈರಸ್ ಸ್ಫೋಟ: ಭಾರಿ ಸಾವು?: ಶವಾಗಾರಗಳು ಫುಲ್, ಸ್ಮಶಾನದಲ್ಲೂ ಜಾಗವಿಲ್ಲ!
ಕೋವಿಡ್ ಬಂದಾಗ ಏನಾಗಿತ್ತು: 2019ರಲ್ಲಿ ಚೀನಾದ ಲ್ಯಾಬ್ ಒಂದರಿಂದ ಸೋರಿಕೆಯಾದ ಕೊರೋನಾ ಸೋಂಕು ನೋಡನೋಡುತ್ತಿದ್ದಂತೆ ವಿಶ್ವಾದ್ಯಂತ ವ್ಯಾಪಿಸಿತ್ತು. ಅಷ್ಟಾಗಿಯೂ ಚೀನಾ ಸರ್ಕಾರ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಹಲವು ದೇಶಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದು, ಜನಜೀವನ ಸ್ತಬ್ಧವಾಗಿತ್ತು, ಇದರಿಂದ ಆರ್ಥಿಕತೆಗೂ ಬಲವಾದ ಪೆಟ್ಟು ಬಿದ್ದಿತ್ತು. ವಿಶ್ವದ ಬಹುತೇಕ ದೇಶಗಳ 70 ಕೋಟಿಗೂ ಹೆಚ್ಚು ಜನರಿಗೆ ಸೋಂಕು ಹಬ್ಬಿ, 70 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. 3 ವರ್ಷಗಳ ಕಾಲ ಸೋಂಕು ಇಡೀ ಜಗತ್ತನ್ನು ಕಾಡಿತ್ತು.