Asianet Suvarna News Asianet Suvarna News

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮನೆಗೇ ಎಫ್‌ಬಿಐ ದಾಳಿ: ಬೈಡೆನ್‌ ನಿವಾಸ 13 ಗಂಟೆ ತಲಾಶ್‌..!

80 ವರ್ಷದ ಬೈಡೆನ್‌ ಅವರು ಮತ್ತೊಂದು ಅವಧಿಗೆ ಅಮೆರಿಕ ಅಧ್ಯಕ್ಷರಾಗಲು ಸಜ್ಜಾಗುತ್ತಿದ್ದಾರೆ. ಈ ಸಂದರ್ಭದಲ್ಲೇ ಅವರ ವಿರುದ್ಧ ಕಾನೂನು ರೀತಿ ಸುತ್ತಿಕೊಳ್ಳಬಹುದಾದ ಹಾಗೂ ರಾಜಕೀಯವಾಗಿ ಸಂಕಷ್ಟಕ್ಕೆ ದೂಡಬಹುದಾದ ಆರೋಪ ಕೇಳಿಬಂದಿರುವುದು ಮಹತ್ವ ಪಡೆದುಕೊಂಡಿದೆ.

fbi searches us president joe bidens home finds documents marked classified ash
Author
First Published Jan 23, 2023, 8:39 AM IST

ವಾಷಿಂಗ್ಟನ್‌: ಉಪಾಧ್ಯಕ್ಷ ಹಾಗೂ ಸಂಸತ್‌ ಸದಸ್ಯರಾಗಿದ್ದ ವೇಳೆ ಹೊಂದಿದ್ದ ಸರ್ಕಾರಿ ರಹಸ್ಯ ದಾಖಲೆಗಳನ್ನು ಮರಳಿಸದೆ ತಮ್ಮ ಬಳಿಯೇ ಇಟ್ಟುಕೊಂಡ ಆರೋಪದಡಿ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡೆನ್‌ ಅವರ ನಿವಾಸದ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆ (ಎಫ್‌ಬಿಐ) ದಾಳಿ ಮಾಡಿದೆ. ವಿಲ್ಮಿಂಗ್ಟನ್‌ನಲ್ಲಿರುವ ಅವರ ಖಾಸಗಿ ನಿವಾಸದಲ್ಲಿ 13 ತಾಸುಗಳ ಕಾಲ ಶೋಧ ಕಾರ್ಯ ನಡೆಸಿ, 6 ದಾಖಲೆಗಳನ್ನು ವಶಕ್ಕೆ ಪಡೆದಿದೆ. ಇದರೊಂದಿಗೆ ಕಳೆದ ನವೆಂಬರ್‌ನಿಂದ ಈವರೆಗೆ ಬೈಡೆನ್‌ ನಿವಾಸದಲ್ಲಿ ಪತ್ತೆಯಾದ ರಹಸ್ಯ ದಾಖಲೆಗಳ ಸಂಖ್ಯೆ ಒಂದೂವರೆ ಡಜನ್‌ಗೇರಿದೆ.

80 ವರ್ಷದ ಬೈಡೆನ್‌ ಅವರು ಮತ್ತೊಂದು ಅವಧಿಗೆ ಅಮೆರಿಕ ಅಧ್ಯಕ್ಷರಾಗಲು ಸಜ್ಜಾಗುತ್ತಿದ್ದಾರೆ. ಈ ಸಂದರ್ಭದಲ್ಲೇ ಅವರ ವಿರುದ್ಧ ಕಾನೂನು ರೀತಿ ಸುತ್ತಿಕೊಳ್ಳಬಹುದಾದ ಹಾಗೂ ರಾಜಕೀಯವಾಗಿ ಸಂಕಷ್ಟಕ್ಕೆ ದೂಡಬಹುದಾದ ಆರೋಪ ಕೇಳಿಬಂದಿರುವುದು ಮಹತ್ವ ಪಡೆದುಕೊಂಡಿದೆ.

ಇದನ್ನು ಓದಿ: ವೈಟ್‌ ಹೌಸ್‌ ದಾಖಲೆ ಕದ್ದ ಆರೋಪ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿವಾಸದ ಮೇಲೆ ಎಫ್‌ಬಿಐ ದಾಳಿ!

ಈ ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಖಾಸಗಿ ರೆಸಾರ್ಟ್‌ನಲ್ಲಿ ಸರ್ಕಾರಿ ದಾಖಲೆ ಇಟ್ಟುಕೊಂಡ ಕಾರಣಕ್ಕೆ ಅವರನ್ನು ‘ಬೇಜವಾಬ್ದಾರಿ’ ವ್ಯಕ್ತಿ ಎಂದು ಬೈಡೆನ್‌ ಹರಿಹಾಯ್ದಿದ್ದರು. ಇದೀಗ ಅವರ ಬಳಿಯೇ ಸರ್ಕಾರಿ ರಹಸ್ಯ ದಾಖಲೆಗಳು ಸಿಕ್ಕಿವೆ. ಆದಾಗ್ಯೂ, ತಮಗೆ ಯಾವುದೇ ವಿಷಾದವಿಲ್ಲ ಎಂದು ಬೈಡೆನ್‌ ಹೇಳಿಕೊಂಡಿದ್ದಾರೆ.

ಏನಿದು ಪ್ರಕರಣ?:
ಅಮೆರಿಕದಲ್ಲಿ ಅಧಿಕಾರ ಅನುಭವಿಸುವ ವ್ಯಕ್ತಿ ತನ್ನ ಅವಧಿ ಮುಗಿದ ಬಳಿಕ ತನ್ನ ಬಳಿ ಇರುವ ಸರ್ಕಾರಿ ರಹಸ್ಯ ದಾಖಲೆಗಳನ್ನು ಪತ್ರಾಗಾರ ಹಾಗೂ ನ್ಯಾಯಾಂಗ ಇಲಾಖೆಗೆ ಕೂಡಲೇ ಮರಳಿಸಬೇಕು. ಆದರೆ ಸೆನೆಟ್‌ ಸದಸ್ಯ ಹಾಗೂ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಹಸ್ಯ ದಾಖಲೆಗಳನ್ನು ಇಟ್ಟುಕೊಂಡಿದ್ದ ಬೈಡೆನ್‌ ಅದನ್ನು ಮರಳಿಸಿರಲಿಲ್ಲ.

ಇದನ್ನೂ ಓದಿ: ಎಫ್‌ಬಿಐ ತನ್ನ ನಿವಾಸದ ಮೇಲೆ ರೇಡ್‌ ಮಾಡಿದೆ: ಡೊನಾಲ್ಡ್‌ ಟ್ರಂಪ್‌ ಟೀಕೆ

ವಾಷಿಂಗ್ಟನ್‌ ಡಿ.ಸಿ.ಯಲ್ಲಿ ‘ಪೆನ್‌ ಬೈಡೆನ್‌ ಸೆಂಟರ್‌’ ಎಂಬ ಚಿಂತಕರ ಚಾವಡಿ ಇದೆ. ನವೆಂಬರ್ 2 ರಂದು ಅಲ್ಲಿ ಕೆಲವೊಂದು ರಹಸ್ಯ ದಾಖಲೆಗಳು ಪತ್ತೆಯಾಗಿದ್ದವು. ಡಿಸೆಂಬರ್ 20 ರಂದು ವಿಲ್ಮಿಂಗ್ಟನ್‌ ಮನೆಯ ಗ್ಯಾರೇಜ್‌ನಲ್ಲಿ ಮತ್ತಷ್ಟು ರಹಸ್ಯ ದಾಖಲೆಗಳು ಸಿಕ್ಕಿದ್ದವು. ಜನವರಿ 12ರಂದು ಮನೆಯ ಸಂಗ್ರಹಾಗಾರದಲ್ಲಿ ಒಂದಷ್ಟು ದೊರೆತಿದ್ದವು. ವಿಷಯ ದೊಡ್ಡದಾದ ಬಳಿಕ ಎಲ್ಲವನ್ನೂ ಪತ್ರಾಗಾರ ಹಾಗೂ ನ್ಯಾಯಾಂಗ ಇಲಾಖೆಗೆ ಬೈಡೆನ್‌ ಅವರ ತಂಡ ಮರಳಿಸಿತ್ತು.

ಈ ಪ್ರಕರಣ ಸಂಬಂಧ ತನಿಖೆ ನಡೆಸಲು ಕಳೆದ ವಾರ ಅಮೆರಿಕದ ಅಟಾರ್ನಿ ಜನರಲ್‌ ಮೆರ್ರಿಕ್‌ ಬಿ ಗಾರ್ಲಾಂಡ್‌ ಅವರು ವಿಶೇಷ ವಕೀಲ ರಾಬರ್ಟ್ ಹುರ್‌ ಅವರನ್ನು ನೇಮಕ ಮಾಡಿದ್ದರು. ಇದರ ಬೆನ್ನಲ್ಲೇ ಎಫ್‌ಬಿಐ ದಾಳಿ ನಡೆಸಿದೆ. ಈ ವೇಳೆ ಬೈಡೆನ್‌ ಕುಟುಂಬ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕ್ಷಿಪಣಿ ರಷ್ಯಾ ಉಡಾಯಿಸಿದ ಬಗ್ಗೆ ಸಾಕ್ಷ್ಯವಿಲ್ಲ ಎಂದ ಬೈಡೆನ್‌, ಪೊಲೆಂಡ್‌ ಸೇನೆ ಹೈ ಅಲರ್ಟ್‌!

  • ಅಮೆರಿಕ ಉಪಾಧ್ಯಕ್ಷ ಆಗಿದ್ದಾಗ ಸರ್ಕಾರಿ ರಹಸ್ಯ ದಾಖಲೆ ಹೊಂದಿದ್ದ ಬೈಡೆನ್‌
  • ನಿಯಮ ಪ್ರಕಾರ ಅಧಿಕಾರಾವಧಿ ಬಳಿಕ ಅವುಗಳನ್ನು ಸರ್ಕಾರಕ್ಕೆ ಮರಳಿಸಬೇಕು
  • ಆದರೆ, ನವೆಂಬರ್‌ನಿಂದೀಚೆಗೆ ಬೈಡೆನ್‌ಗೆ ಸೇರಿದ 2-3 ಕಡೆ ದಾಖಲೆಗಳು ಪತ್ತೆ
  • ಈ ಹಿನ್ನೆಲೆಯಲ್ಲಿ ತನಿಖೆಗೆ ಅಮೆರಿಕದ ಅಟಾರ್ನಿ ಜನರಲ್‌ರಿಂದ ನಿರ್ದೇಶನ
  • ಇದರ ಬೆನ್ನಲ್ಲೇ ಬೈಡೆನ್‌ ಖಾಸಗಿ ನಿವಾಸಕ್ಕೆ ಎಫ್‌ಬಿಐ ದಾಳಿ, 6 ದಾಖಲೆಗಳು ಪತ್ತೆ

ಕಳೆದ ವರ್ಷ ರಹಸ್ಯ ದಾಖಲೆ ನಿರ್ವಹಣೆ ಕೇಸಲ್ಲಿ ಟ್ರಂಪ್‌ ಎಸ್ಟೇಟ್‌ ಮೇಲೆ ಎಫ್‌ಬಿಐ ದಾಳಿ ಮಾಡಿತ್ತು
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಖಾಸಗಿ ಕ್ಲಬ್‌ ಮತ್ತು ಫ್ಲೋರಿಡಾದ ನಿವಾಸದ ಮೇಲೆ ಅಮೆರಿಕದ ಗುಪ್ತಚರ ಸಂಸ್ಥೆಯಾದ ಎಫ್‌ಬಿಐ ಮಂಗಳವಾರ ದಾಳಿ ಮಾಡಿದೆ. 2021ರಲ್ಲಿ ತಮ್ಮ ಅಧಿಕಾರಾವಧಿ ಬಳಿಕ ಶ್ವೇತ ಭವನದಿಂದ 15 ದಾಖಲೆ ಪೆಟ್ಟಿಗೆಗಳನ್ನು ಟ್ರಂಪ್‌ ಮಾರ್‌-ಎ-ಲಾಗೋಗೆ ಕೊಂಡೊಯ್ದಿದ್ದರು. ಅವುಗಳಲ್ಲಿ ಕೆಲವು ರಹಸ್ಯ ದಾಖಲೆಗಳಾಗಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ತಡೆಯಲು ನಡೆಸಿದ ಯತ್ನ ಇದಾಗಿದೆ ಎಂದು ಟ್ರಂಪ್‌ ಕಿಡಿಕಾರಿದ್ದಾರೆ.

ಇದನ್ನೂ ಓದಿ: G20 Summit: ಮೋದಿಗೆ ಬೈಡೆನ್‌ ಸೆಲ್ಯೂಟ್‌, ಮ್ಯಾಂಗ್ರೋವ್‌ ಅರಣ್ಯದಲ್ಲಿ ವಿಶ್ವ ನಾಯಕರ ಸಭೆ!

Follow Us:
Download App:
  • android
  • ios