ಹೆಣ್ಣು ಮಗುವಿನ ತಂದೆಯಾಗುವ ಕೆಲವೇ ಕ್ಷಣಗಳ ಮುನ್ನ ಪ್ರಾಣ ಬಿಟ್ಟ ತಂದೆ, ಹೃದಯವಿದ್ರಾವಕ ಘಟನೆ!

ಪತ್ನಿ ಹೆಣ್ಣು ಮಗುವಿನ ತಂದೆಯಾಗುವ ಕೆಲವೇ ಕ್ಷಣಗಳ ಮೊದಲು ತಂದೆ ನಿಧನರಾಗಿದ್ದಾರೆ. ಒಂದೆಡೆ ಪತ್ನಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದರೆ ಮತ್ತೊಂದೆ ಪತಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

Father dies by heart attack hours before birth of his first baby Tragic in Uk Manchester ckm

ಮ್ಯಾಂಚೆಸ್ಟರ್(ಜೂ.6) ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿ ಸಂಭ್ರಮದಲ್ಲಿ ತೇಲಾಡಿದ್ದ. ಇತ್ತ ಪತ್ನಿಯ ಡೆಲಿವರಿ ಡೇಟ್ ಹತ್ತಿರಬಂದಿದೆ. ಆಸ್ಪತ್ರೆ ದಾಖಲಾಗುವ ದಿನಾಂಕ ನಿಗದಿಯಾಗಿತ್ತು. ಎಲ್ಲವೂ ಬುಕ್ ಆಗಿತ್ತು. ಆದರೆ ಪತ್ನಿ ಹೆಣ್ಣುಮಗುವಿಗೆ ಜನ್ಮ ನೀಡುವ ಕೆಲವೇ ಗಂಟೆಗಳ ಮೊದಲು ಪತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಯುಕೆಯ ಮ್ಯಾಂಚೆಸ್ಟರ್‌ನಲ್ಲಿ ನಡೆದಿದೆ. ಮುದ್ದಾದ ಹೆಣ್ಣು ಮಗುವಿನ ಮುಖ ನೋಡುವ ಭಾಗ್ಯ ತಂದೆ ಇರಲಿಲ್ಲ ಅನ್ನೋ ನೋವಿನಲ್ಲಿ ಪತ್ನಿ ತೀವ್ರ ಅಸ್ವಸ್ಥರಾಗಿದ್ದಾರೆ.

40 ವರ್ಷದ ಥಾಮಸ್ ಗಿಬ್ಸನ್ ಮೃತ ದುರ್ದೈವಿ. ಪತ್ನಿ ರೆಬಾಕಾ ಮೊಸ್ 39ನೇ ವಾರದ ಗರ್ಭಿಣಿ. ನಿಗದಿ ಪಡಿಸಿದ ದಿನಾಂಕ ಬಂದಿದೆ. ಆಸ್ಪತ್ರೆ ತೆರಳಬೇಕು. ಇದಕ್ಕಾಗಿ ಬೆಳಗ್ಗೆ ಬೇಗನೆ ಎದ್ದ ರೆಬೆಕಾಗೆ ಪತಿಯನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದಾಳೆ. ಇಂದು ನಮ್ಮ ಬೇಬಿ ಡೇ. ಎದ್ದೇಳಿ ಎಂದು ಪತಿಯನ್ನು ಕರೆದಿದ್ದಾಳೆ. ಆದರೆ ಪತಿಯ ಪ್ರತಿಕ್ರಿಯೆ ಇಲ್ಲ. ಮುಟ್ಟಿ ಕರೆಯಲು ಹೋದಾಗ ಆಘಾತವಾಗಿದೆ. ಕಾರಣ ಪತಿಯ ದೇಹ ತಣ್ಣಗಾಗಿತ್ತು. ಆತಂಕ ಹೆಚ್ಚಾಗಿದೆ. ತಕ್ಷಣ ತುರ್ತು ಸೇವೆಗೆ ಕರೆ ಮಾಡಿದ್ದಾಳೆ.

Shivamogga: ಅಪಘಾತದಲ್ಲಿ ತಂದೆ ಸಾವು: ದುಃಖದಲ್ಲೇ ಹಸೆಮಣೆ ಏರಿದ ಸಹೋದರಿಯರು

ತುರ್ತು ಸೇವೆಯ ವೈದ್ಯರು ಥಾಮಸ್‌ನನ್ನು ನೆಲದ ಮೇಲೆ ಮಲಗಿಸಿ ಎದೆ ಒತ್ತುವಂತೆ ಹೇಳಿದ್ದಾರೆ. ಪ್ರಥಮ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಎಲ್ಲಾ ಪ್ರಯತ್ನ ಮಾಡಿದರೂ ಥಾಮಸ್ ಸ್ಪಂದನೆ ಇರಲಿಲ್ಲ. ಅಷ್ಟೊತ್ತಿಗೆ ಆ್ಯಂಬುಲೆನ್ಸ್ ಮನಗೆ ತಲುಪಿತ್ತು. ತಕ್ಷಣವೇ ಐಸಿಯುಗೆ ದಾಖಲಿಸಿದ್ದಾರೆ. ಇತ್ತ ರೆಬೆಕಾಳನ್ನು ಡೆಲಿವರಿಗಾಗಿ ಆಡ್ಮಿಟ್ ಮಾಡಲಾಗಿದೆ. ರೆಬೆಕಾ ಹಾಗೂ ಥಾಮಸ್ ಪೋಷಕರು ಕಣ್ಮೀರಾಗಿದ್ದಾರೆ. 

ಐಸಿಯುನಲ್ಲಿ ಥಾಮಸ್‌ಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಥಾಮಸ್ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಪತ್ನಿ ರೆಬೆಕಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಹೆಣ್ಣು ಮಗುವಿನ ತಂದೆಯಾಗುವ ಕೆಲವೇ ಗಂಟೆಗಳ ಮೊದಲು ಥಾಮಸ್ ಹೃದಯಾಘಾತಕ್ಕೆ ಮೃತಪಟ್ಟಿದ್ದಾರೆ. ಪತ್ನಿಗೆ ಪುತ್ರಿಯ ಆಗಮನ ಖುಷಿ ಒಂದೆಡೆಯಾದರೆ, ಪತಿ ಕಳೆದುಕೊಂಡು ನೋವು ಮತ್ತೊಂದೆಡೆ. 

ಬಾಗಲಕೋಟೆ ಬೈಕ್ ಅಪಘಾತ: ಮಗನ ಮಡಿಲಲ್ಲೇ ನರಳಿ ಪ್ರಾಣ ಬಿಟ್ಟ ತಂದೆ!

ಥಾಮಸ್ ವೈದ್ಯಕೀಯ ದಾಖಲೆ ನೋಡಿದ ವೈದ್ಯರಿಗೆ ಅಚ್ಚರಿಯಾಗಿದೆ. 11 ದಿನಗಳ ಹಿಂದೆ ಥಾಮಸ್ ಕೆಲ ಪರೀಕ್ಷೆಗಳನ್ನು ನಡೆಸಿದ್ದರು. ಈ ವೇಳೆ  ಥಾಮಸ್ ಪರೀಕ್ಷಾ ವರದಿ ನೋಡಿದ್ದ ವೈದ್ಯರು ಯಾವುದೇ ಅಪಾಯವಿಲ್ಲ ಎಂದಿದ್ದರು. ಆದರೆ ವರದಿಯನ್ನು ತಪ್ಪಾಗಿ ಅರ್ಥೈಸಿದ್ದಾರೆ. 11 ದಿನಗಳ ಹಿಂದೆ ಥಾಮಸ್ ಅಡ್ಮಿಟ್ ಆಗಿದ್ದರೆ ಬದುಕುಳಿಯುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios