ಬಾಗಲಕೋಟೆ ಬೈಕ್ ಅಪಘಾತ: ಮಗನ ಮಡಿಲಲ್ಲೇ ನರಳಿ ಪ್ರಾಣ ಬಿಟ್ಟ ತಂದೆ!
ಬಾಗಲಕೋಟೆಯ ನಿವಾಸಿಗಳಾದ ತಂದೆ- ಮಗ ಬೈಕ್‌ನಲ್ಲಿ ಹೋಗುವಾಗ ಅಪರಿಚಿತ ವಾಹನ ಬಂದು ಡಿಕ್ಕಿ ಹೊಡೆದು ಕೆಳಗೆ ಬಿದ್ದ ತಂದೆಯ ಮೇಲೆ ಹರಿದು ಸಾವನ್ನಪ್ಪಿದ್ದಾರೆ.
ಬಾಗಲಕೋಟೆ (ಮೇ 20): ಬಾಗಲಕೋಟೆಯ ನಿವಾಸಿಗಳಾದ ತಂದೆ- ಮಗ ಬೈಕ್‌ನಲ್ಲಿ ಹೋಗುವಾಗ ಅಪರಿಚಿತ ವಾಹನ ಬಂದು ಡಿಕ್ಕಿ ಹೊಡೆದು ಕೆಳಗೆ ಬಿದ್ದ ತಂದೆಯ ಮೇಲೆ ಹರಿದು ಸಾವನ್ನಪ್ಪಿದ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ಅಮೀನಗಡದಲ್ಲಿ ಶನಿವಾರ ನಡೆದಿದೆ.
ಬೈಕ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ರೆಹಮಾನಸಾಬ್ ಮುದಗಲ್ (50) ಎಂದು ಗುರುತಿಸಲಾಗಿದೆ. ಬಾಗಲಕೋಟೆಯ ನವನಗರದ ವಾಜಪೇಯಿ ಕಾಲೋನಿ ನಿವಾಸಿಯಾಗಿದ್ದ ರೆಹಮಾನ್ ಸಾಬ್ ಮಗ ಮಗ ಕಲಂದರ ಬಾಬಾನೊಂದಿಗೆ ಅಮೀನಗಡದಲ್ಲಿ ಟೈಲ್ಸ್ ಕೆಲಸಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಆದರೆ, ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್‌ನಿಂದ ಕೆಳಗೆ ಬಿದ್ದ ರೆಹಮಾನ್ ಸಾಬ್ ಮೇಲೆ ವಾಹನ ಹರಿದಿದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದಾರೆ. ಕೆಳಗೆ ಬಿದ್ದು ಗಾಯಗೊಂಡ ಮಗ ತಂದೆಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸಬೇಕು ಅನ್ನುವಷ್ಟರಲ್ಲೇ ಮಗನ ಮಡಿಲಲ್ಲೇ ತಂದೆ ಸಾವನ್ನಪ್ಪಿದ್ದಾರೆ.
ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಕ್ರೂಸರ್: ಯಲ್ಲಮ್ಮನ ದರ್ಶನಕ್ಕೆ ಹೋದವರು ಮಸಣ ಸೇರಿದರು
ಪ್ರತಿನಿತ್ಯ ತಂದೆ ಮತ್ತು ಮಗ ಟೈಲ್ಸ್ ಕೆಲಸಕ್ಕೆ ಒಂದೇ ಬೈಕ್‌ನಲ್ಲಿ ಹೋಗುತ್ತೊದ್ದರು. ಆದರೆ, ಇಂದು ಅವರ ಅದೃಷ್ಟ ಕೈಕೊಟ್ಟಿದ್ದು, ಸಾವು ಖಚಿತವಾಗಿತ್ತು ಎಂದು ಕಾಣಿಸುತ್ತದೆ. ಮನೆಯಿಂದ ಕೆಲಸಕ್ಕೆ ಹೊರಟು ಕೆಲವೇ ನಿಮಿಷಗಳಲ್ಲಿ ಮನೆಯ ಕುಟುಂಬಸ್ಥರಿಗೆ ರೆಹಮಾನ್ ಸಾಬ್ ಸಾವನ್ನಪ್ಪಿದ ಸುದ್ದಿ ತಿಳಿದಿದ್ದು, ಬರಸಿಡಿಲು ಬಡಿದಂತಾಗಿದೆ. ಇನ್ನು ಸ್ಥಳೀಯರ ಸಹಾಯದಿಂದ ಆಂಬುಲೆನ್ಸ್‌ಗೆ ಕರೆ ಮಾಡಿ ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಹೋಗದೇ ಅಮೀನಗಡ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ತಂದೆಯ ಮೃತದೇಹವನ್ನೂ ತೆಗೆದುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ.
ಬಾಗಲಕೋಟೆಯಲ್ಲಿ ಹಾಡಹಗಲೇ ಚಾಕು ಇರಿದು ಕೊಲೆ: ರಾಜ್ಯದಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದ ಬಳಿ ಚಾಕುವಿನಿಮದ ಇರಿದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಹಾಡು ಹಗಲು ಹೊತ್ತಿನಲ್ಲಿಯೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ದಾಳಿ ಮಾಡಿ ಚಾಕುವಿನಿಂದ ಇರಿಯಲಾಗಿದೆ. ತೀವ್ರ ರಕ್ತಸ್ರಾವ ಉಂಟಾದ ವ್ಯಕ್ತಿ ಸ್ಥಳದಲ್ಲಿಯೇಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
Bengaluru- ಆಂಟಿಯೊಂದಿಗೆ ಲವ್ವಿ-ಡವ್ವಿ: ಮುಸ್ಲಿಂ ಪ್ರಿಯಕರನ ಸರಸಕ್ಕೆ ಗಂಡನ ಹತ್ಯೆ
ಹಾಡುಹಗಲೇ ನಡೆದ ಚಾಕು ಇರಿತ ಘಟನೆಯಲ್ಲಿ ಬಸವರಾಜ (55) ಮೃತಪಟ್ಟ ದುರ್ದೈವಿ ಆಗಿದ್ದಾನೆ. ನಗರದ ಎಪಿಎಂಸಿ ಮುಂಭಾಗದಲ್ಲಿ ಬಸವರಾಜ ನಿಂತಿದ್ದಾಗ ಈತನ ಬಳಿ ಚಾಕು ಹಿಡಿದು ಆಗಮಿಸಿದ ಮಹಾಂತೇಶ ಎನ್ನುವ ದುಷ್ಕರ್ಮಿ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ. ಇನ್ನು ಕೊಲೆ ಮಾಡಿದ ವ್ಯಕ್ತಿ ಸ್ವತಃ ಬಸವರಾಜನ ಹೆಂಡತಿಯ ತಂಗಿಯ ಗಂಡ (ಸಡಕ) ನಾಗಿದ್ದಾನೆ. ಇನ್ನು ಚಾಕುವನ್ನು ನೇರವಾಗಿ ಎದೆಗೇ ಚುಚ್ಚಿದ್ದು, ರಕ್ತಸ್ರಾವದಲ್ಲಿ ಬಿದ್ದ ಬಸವರಾಜು ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯೆ ಸಾವನ್ನಪ್ಪಿದ್ದಾರೆ.