ನಕಲಿ ವಕೀಲನ ಬಂಧಿಸಿದ ಕೀನ್ಯಾ ಪೊಲೀಸರು: ಈತ ಗೆದ್ದಿದ್ದು 25ಕ್ಕೂ ಹೆಚ್ಚು ಕೇಸ್...!
ನಿಜವಾದ ವಕೀಲರೇ ಕೋರ್ಟ್ ವಾದ ಪ್ರತಿವಾದಗಳ ವೇಳೆ ತಮ್ಮ ಪಾಲಿನ ಕಕ್ಷಿದಾರರ ಪರ ಕೇಸುಗಳನ್ನು ಸೋಲುವುದಿದೆ. ಆದರೆ ಇಲ್ಲಿ ತಾನೊಬ್ಬ ವಕೀಲ ಎಂದು ಸೋಗು ಹಾಕಿಕೊಂಡಿದ್ದ ನಕಲಿ ವಕೀಲನೋರ್ವ ಬರೋಬ್ಬರಿ 26 ಕೇಸುಗಳನ್ನು ಗೆದ್ದಿದ್ದಾನೆ. ಆದರೆ ಇತ್ತೀಚೆಗೆ ಈತ ವಕೀಲನೇ ಅಲ್ಲ ಎಂದು ತಿಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಕೀನ್ಯಾ: ನಿಜವಾದ ವಕೀಲರೇ ಕೋರ್ಟ್ ವಾದ ಪ್ರತಿವಾದಗಳ ವೇಳೆ ತಮ್ಮ ಪಾಲಿನ ಕಕ್ಷಿದಾರರ ಪರ ಕೇಸುಗಳನ್ನು ಸೋಲುವುದಿದೆ. ಆದರೆ ಇಲ್ಲಿ ತಾನೊಬ್ಬ ವಕೀಲ ಎಂದು ಸೋಗು ಹಾಕಿಕೊಂಡಿದ್ದ ನಕಲಿ ವಕೀಲನೋರ್ವ ಬರೋಬ್ಬರಿ 26 ಕೇಸುಗಳನ್ನು ಗೆದ್ದಿದ್ದಾನೆ. ಆದರೆ ಇತ್ತೀಚೆಗೆ ಈತ ವಕೀಲನೇ ಅಲ್ಲ ಎಂದು ತಿಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ಕೀನ್ಯಾ ದೇಶದಲ್ಲಿ..
ಈ ನಕಲಿ ವಕೀಲನ ಹೆಸರು ಬ್ರಿಯಾನ್ ಮ್ವೆಂಡಾ, ಕೀನ್ಯಾದ ಹೈಕೋರ್ಟ್‌ನಲ್ಲಿ ತಾನೋರ್ವ ವಕೀಲ ಎಂದು ಹೇಳಿಕೊಂಡು ಈತ 26 ಕೇಸುಗಳನ್ನು ಗೆದ್ದಿದ್ದಾನೆ. ಆದರೆ ಈತ ನಕಲಿ ಎಂದು ತಿಳಿದ ಕೂಡಲೇ ಕೀನ್ಯಾ ಪೊಲೀಸರು ಈತನನ್ನು ಬಂಧಿಸಿದ್ದಾರೆ. ನೈಜೀರಿಯನ್ ಟ್ರಿಬ್ಯೂನ್ ವರದಿ ಪ್ರಕಾರ, ಈ ನಕಲಿ ವಕೀಲ ಈ ಎಲ್ಲಾ ಪ್ರಕರಣಗಳನ್ನು ಮ್ಯಾಜಿಸ್ಟ್ರೇಟ್‌ಗಳು, ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಹೈಕೋರ್ಟ್ ನ್ಯಾಯಾಧೀಶರ ಮುಂದೆ ಮಂಡಿಸಿ ಗೆದ್ದಿದ್ದಾನೆ. ತಾನೋರ್ವ ಅರ್ಹತೆ ಇರುವ ವಕೀಲ ಎಂಬಂತೆ ಹಲವು ವರ್ಷಗಳ ಕಾಲ ಈ ಬ್ರಿಯಾನ್ ಮ್ವೆಂಡಾ, ತನ್ನನ್ನು ತಾನು ತೋರಿಸಿಕೊಂಡಿದ್ದ. ಆತನ ಬಂಧನವಾಗುವವರೆಗೂ ನ್ಯಾಯಾಧೀಶರಿಗೆ ಆತನ ಸಾಮರ್ಥ್ಯದ ಬಗ್ಗೆ ಸ್ವಲ್ಪವೂ ಶಂಕೆ ಬಂದಿರಲಿಲ್ಲ,
ಜೀವ ಉಳಿಸಿಕೊಳ್ಳಲು ಓಡಿ ಹೋಗುತ್ತಿರುವ ತನ್ನ ನಾಗರಿಕರನ್ನೇ ತಡೆಯುತ್ತಿರುವ ಹಮಾಸ್
ಆದರೆ ಇತ್ತೀಚೆಗೆ ಸಾರ್ವಜನಿಕರಿಂದ ಈತನ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಕೀನ್ಯಾದ ಕಾನೂನು ಸಂಘದ ನೈರೋಬಿ ಶಾಖೆಯ ಕ್ಷಿಪ್ರ ಕಾರ್ಯಾಚರಣೆ ಪಡೆ ಅವರನ್ನು ಬಂಧಿಸಿದೆ. ಈ ಬಗ್ಗೆ ಕೀನ್ಯಾದ ಕಾನೂನು ಸಂಘ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. ಬ್ರಿಯಾನ್ ಮ್ವೆಂಡಾ, ಅವರು ಕೀನ್ಯಾ ಹೈಕೋರ್ಟ್‌ನ ವಕೀಲರಲ್ಲ, ಕಾನೂನು ಸೊಸೈಟಿಯಲ್ಲಿರುವ ದಾಖಲೆಯ ಪ್ರಕಾರ ಅವರು ಶಾಖೆಯ ಸದಸ್ಯರೂ ಅಲ್ಲ ಎಂದು ಶಾಖೆಯೂ ಸಮಾಜದ ಎಲ್ಲಾ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಲು ಬಯಸುತ್ತದೆ ಎಂದು ಟ್ವಿಟ್ಟರ್‌ನಲ್ಲಿ ಕೀನ್ಯಾ ಕಾನೂನು ಸಂಘ ಬರೆದುಕೊಂಡಿದೆ.
ಘಾನಾ ವೆಬ್ ಸೈಟ್ ವರದಿಯ ಪ್ರಕಾರ, ಮ್ವೆಂಡಾ ಕಾನೂನು ಪೋರ್ಟಲ್ ಅನ್ನು ಕ್ರಿಮಿನಲ್ ಆಗಿ ಪ್ರವೇಶಿಸಿದ್ದಾರೆ ಮತ್ತು ಅವರದೇ ಹೆಸರಿನಲ್ಲಿರುವ ಮತ್ತೊಬ್ಬ ವಕೀಲರ ಖಾತೆಯನ್ನು ಗುರುತಿಸಿದ್ದಾರೆ. ಅಲ್ಲಿದ್ದ ವಿವರಗಳನ್ನು ತಿದ್ದಿದ್ದಾರೆ ಮತ್ತು ಕೀನ್ಯಾದ ಕಾನೂನು ವೃತ್ತಿಗೆ ಸೇರುವ ವೇಳೆ ಅವರು ತಮ್ಮ ಸ್ವಂತ ಫೋಟೋವನ್ನು ಅಪ್ಲೋಡ್ ಮಾಡಿದ್ದರು ಎಂದು ಕೀನ್ಯಾದ ಕಾನೂನು ಸೊಸೈಟಿ ಹೇಳಿದೆ.
ಶೌಚಾಲಯದಲ್ಲಿ ಇದ್ದವರ ಮೇಲೂ ಹಮಾಸ್ ದಾಳಿ, ಇಸ್ರೇಲ್ ಯುದ್ಧದ ನಿಯಮ ಪಾಲಿಸುತ್ತಿಲ್ಲ ಎಂದ ವಿಶ್ವಸಂಸ್ಥೆ
ಬ್ರಿಯಾನ್ ಮ್ವೆಂಡಾ ತನ್ನ ಹೆಸರನ್ನೆ ಹೊಂದಿರುವ ಮತ್ತೋರ್ವ ವಕೀಲರ ಗುರುತನ್ನು ಕದ್ದು, ಆ ನಿಜವಾದ ವಕೀಲರು ಕಾನೂನು ಸೊಸೈಟಿಯ ವೆಬ್‌ಗೆ ಮತ್ತೆ ಲಾಗ್‌ಇನ್ ಆಗಲು ಸಾಧ್ಯವಾಗದಂತೆ ಮಾಡಿದ್ದ. ಹೀಗಾಗಿ ನಿಜವಾಗಿಯೂ ವಕೀಲರಾಗಿದ್ದವರಿಗೆ ಸಂಕಷ್ಟವಾಗಿತ್ತು. ಅವರು ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಇಲಾಖೆಗೆ ದೂರು ನೀಡಿದ್ದರು. ಅಲ್ಲದೇ ಅಲ್ಲಿರುವ ಮೇಲ್ ಹಾಗೂ ವಿಳಾಸ ತನ್ನದಲ್ಲ ಎಂದು ಮಾಹಿತಿ ನೀಡಿದ್ದರು. ಇದಕ್ಕೂ ಮೊದಲು ಆಗಸ್ಟ್ 2022 ರಂದು ಅವರು, ತನ್ನ ಇಮೇಲ್ ಮೂಲಕ ಬಾರ್ ಕೌನ್ಸಿಲ್‌ಗೆ ಸೇರಿಕೊಂಡು ಅಲ್ಲಿ ಅಡ್ವೋಕೇಟ್ ಪೋರ್ಟಲ್‌ನಲ್ಲಿ ಖಾತೆ ತೆರೆದಿದ್ದರು. ಆದರೆ ಅವರು ವಕೀಲಿಕೆ ವೃತ್ತಿ ಆರಂಭಿಸಿದಾಗಿನಿಂದಲೂ ವಕೀಲಿಕೆ ಅಭ್ಯಾಸ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿರಲಿಲ್ಲ, ಅಟಾರ್ನಿ ಜನರಲ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅವರು ಅಭ್ಯಾಸ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಭಾವಿಸಿದ್ದರು.
ಕಣ್ಣಿಗೆ ಬಿದ್ದ ಮಕ್ಕಳು, ಶಿಶು, ಮಹಿಳೆಯರ ಕೊಂದೆವು: ಹಮಾಸ್ ಉಗ್ರ ಸ್ಫೋಟಕ ಹೇಳಿಕೆ Video
ಆದರೆ ಈ ವರ್ಷ ಸೆಪ್ಟೆಂಬರ್‌ನಲ್ಲಿ ಅವರು ತಮ್ಮ ಪ್ರಮಾಣಪತ್ರವನ್ನು ಅಲ್ಲಿ ಅಪ್‌ಡೇಟ್ ಮಾಡಲು ನೋಡಿದಾಗ ಅವರಿಗೆ ಅಲ್ಲಿ ಲಾಗಿನ್ ಮಾಡಲು ಆಗುತ್ತಿರಲಿಲ್ಲ. ಅಲ್ಲಿ ಈ ನಕಲಿ ಲಾಯರ್ ತನ್ನದೇ ಸರ್ಟಿಫಿಕೇಟ್ ಹಾಕಿ ತಮ್ಮ ಫೋಟೋವನ್ನು ಕೂಡ ಹಾಕಿ ಅಪ್‌ಟೇಡ್ ಮಾಡಿದ್ದ. ಅಲ್ಲದೇ ಕೇಸ್‌ಗಳಿಗೆ ಹಣ ವಸೂಲಿಯನ್ನು ಮಾಡಿದ್ದ ಆದರೆ ಇದರಿಂದ ಮೂಲತಃ ವಕೀಲರಾದವರಿಗೆ ತೊಂದರೆಯಾಗಿತ್ತು. ಹೀಗಾಗಿ ಅವರು ಐಟಿ ಇಲಾಖೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕೀನ್ಯಾ ಪೊಲೀಸರು ಈಗ ನಕಲಿ ವಕೀಲನನ್ನು ಬಂಧಿಸಿದ್ದಾರೆ.