Asianet Suvarna News Asianet Suvarna News

Fact Check: ಕಪ್ಪು ಮೈಬಣ್ಣಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆ ಬರೆದ ಮಾಡೆಲ್ ?

*ಕಪ್ಪಗಿನ ಮೈಬಣ್ಣ ಹೊಂದಿರುವ ಗಿನ್ನಿಸ್ ವಿಶ್ವ ದಾಖಲೆ
*ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಫೋಟೋ ವೈರಲ್‌
*Fact Checkಯಿಂದ ವೈರಲ್‌ ಫೋಟೋ ನಿಜಾಂಶ ಬಯಲು
 

Fact Check This model does not hold a Guinness World Record for her dark complexion mnj
Author
Bengaluru, First Published Dec 15, 2021, 11:30 AM IST

Fact Check: ಕಪ್ಪು ತ್ವಚೆಯ ಮಹಿಳೆಯ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದೆ, ಈ ಚಿತ್ರವನ್ನು ನೀವು ವಾಟ್ಸಪ್‌ ಸೇರಿದಂತೆ ಇತರ ಸೋಷಿಯಲ್‌ ಮೀಡಿಯಾಗಳಲ್ಲಿ ನೋಡಿರಬಹುದು. ಈ ಮಹಿಳೆ ಅತ್ಯಂತ ಕಪ್ಪಗಿನ ಮೈಬಣ್ಣ (Black Color) ಹೊಂದಿರುವ ಗಿನ್ನಿಸ್ ವಿಶ್ವ ದಾಖಲೆಯಲ್ಲಿ (Guinness World Record) ಸೇರಿರುವ ನ್ಯಾಕಿಮ್ ಗಟ್ವೆಚ್ (Nyakim Gatwech) ಎಂಬ ಮಾಡೆಲ್ ಎಂದು ಕ್ಯಾಪ್ಶನ್‌ನಲ್ಲಿ ಬರೆಯಲಾಗಿದೆ. ನವೆಂಬರ್ 2021 ರಲ್ಲಿ ಫ್ರಾಂಕೋಫೋನ್ ಆಫ್ರಿಕನ್ ದೇಶಗಳಲ್ಲಿ  ವೈರಲ್ ಆಗಿದ್ದ ಈ ಚಿತ್ರ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಆದರೆ  ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಈ ರೀತಿ ಯಾವುದೇ ದಾಖಲೆಯಿಲ್ಲ ಈ ಪೋಸ್ಟ್‌ಗಳಲ್ಲಿ ಬರೆಯಲಾದ ಮಾಹಿತಿ ಸುಳ್ಳು ಎಂಬುದು ಈಗ ಸ್ಪಷ್ವವಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸನ ವಕ್ತಾರರು ಇಂತಹ ದಾಖಲೆಯ ಯಾವುದು ಇಲ್ಲವೆಂದು ತಿಳಿಸಿದ್ದಾರೆ. ಅಲ್ಲದೇ ವೈರಲ್‌ ಆಗಿರುವ  ಛಾಯಾಚಿತ್ರವು ನ್ಯಾಕಿಮ್ ಗಟ್ವೆಚ್ ಅವರದ್ದು ಅಲ್ಲ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊಗಳನ್ನು ಸಾವಿರಾರು ಬಾರಿ ಶೇರ್‌ ಮಾಡಲಾಗಿದೆ. 

Fact Check This model does not hold a Guinness World Record for her dark complexion mnj

“ದಕ್ಷಿಣ ಸೂಡಾನ್ ಮೂಲದ ಇಥಿಯೋಪಿಯಾದ ಗಂಬೆಲ್ಲಾ ಮೂಲದ ನ್ಯಾಕಿಮ್ ಗ್ಯಾಟ್ವೆಚ್ (27) ವಿಶ್ವದ ಅತ್ಯಂತ ಕಪ್ಪು ಮೈಬಣ್ಣವನ್ನು ಹೊಂದಿದ್ದಕ್ಕಾಗಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಅನ್ನು ಪ್ರವೇಶಿಸಿದ್ದಾರೆ. ಗ್ಯಾಟ್ವೆಚ್ ತನ್ನ ನೈಸರ್ಗಿಕವಾಗಿ ಗಾಢವಾದ ಚರ್ಮದ ಬಣ್ಣಕ್ಕೆ ಹೆಸರುವಾಸಿಯಾಗಿದ್ದಾಳೆ ಮತ್ತು ಇವರನ್ನು 'ಕತ್ತಲೆಯ ರಾಣಿ' (‘Queen of Darkness) ಎಂದು ಹೆಸರಿಸಲಾಗಿದೆ" ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಇದೇ ರೀತಿಯ ಪೋಸ್ಟ್‌ಗಳು ಆಫ್ರಿಕನ್ ಫ್ರಾಂಕೋಫೋನ್ ದೇಶಗಳಲ್ಲಿ ವೈರಲ್ ಆಗಿವೆ. ಅದರೆ ಇದು ಸುಳ್ಳು ಮಾಹಿತಿಯಾಗಿದೆ.

ಗಿನ್ನೆಸ್ ರೆಕಾರ್ಡ್‌ ಸ್ಪಷ್ಟನೆ

ಈ  ದಾಖಲೆಯನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಿರಾಕರಿಸಿದ್ದು ಚರ್ಮದ ಬಣ್ಣವನ್ನು ಆಧರಿಸಿ ದಾಖಲೆಯನ್ನು ನಾವು ಪರಿಗಣಿಸುವುದಿಲ್ಲ ಎಂದು ಹೇಳಿದೆ "ದಯವಿಟ್ಟು ಈ ಕಥೆಯು ಸುಳ್ಳು ಮತ್ತು ನಾವು ಈ ದಾಖಲೆಯನ್ನು ಅಥವಾ ಚರ್ಮದ ಟೋನ್ ಅನ್ನು ಆಧರಿಸಿ ಯಾವುದೇ ದಾಖಲೆಗಳನ್ನು ಮೇಲ್ವಿಚಾರಣೆ ಮಾಡುವುದಿಲ್ಲ" ಎಂದು AFP Fact ಚೆಕ್ಗೆ ತಿಳಿಸಿದೆ. ಗ್ಯಾಟ್ವೆಚ್ ಅವರು ಈ ದಾಖಲೆಯನ್ನು ಹೊಂದಿದ್ದಾರೆ ಎಂಬ ವದಂತಿಯು ಈ ಹಿಂದೆ 2020 ರಲ್ಲಿ ಪ್ರಸಾರವಾಗಿತ್ತು ಮತ್ತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಈಗಾಗಲೇ ಮೇ 4, 2020 ರಂದು ಕಳುಹಿಸಲಾದ ಟ್ವೀಟ್‌ನಲ್ಲಿ ಈ ಮಾಹಿತಿಯನ್ನು ನಿರಾಕರಿಸಿದೆ.

 

ಆದರೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಗೆ ಈ ಬಗ್ಗೆ ಪ್ರಶ್ನೆ ಕೇಳಿ ಟ್ಯಾಗ್‌ ಮಾಡಲಾಗಿದ್ದ ಟ್ವೀಟ್‌ ಈಗ ಬಳಕೆದಾರರು ಡಿಲೀಟ್‌ ಮಾಡಿದ್ದಾರೆ. ಆದರೆ ಈ ಮಾಹಿತಿ ಸುಳ್ಳು ಎಂಬುದು ಸ್ಪಷ್ಟವಾಗಿದೆ. ಇದು ಭಾರತದಲ್ಲೂ ಈಗ ವೈರಲ್‌ ಆಗಿದ್ದು ಸಾಕಷ್ಟು ಜನ ವಾಟ್ಸಪ್‌ ಸ್ಟೇಟಸ್ಗಳಲ್ಲಿ ಹೊಂಚಿಕೊಂಡಿದ್ದಾರೆ. ಇದನ್ನು ಸತ್ಯ ಎಂಬುದಾಗಿ ನಂಬಿದ ಹಲವರು ರಿಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ:

1) Fact Check: ಮುಸ್ಲಿಂ ಮಹಿಳೆಯರು ಮಸೀದಿಯಲ್ಲಿ ರಾಮ ಭಜನೆ ಹಾಡಿದ್ರಾ? ಮತ್ತೆ ವೈರಲ್‌ ಆಯ್ತು ಹಳೆ ವಿಡಿಯೋ!

2) Fact Check About ₹500 Note ಯಾವುದು ಅಸಲಿ ಯಾವುದು ನಕಲಿ?

3) Vicky- Katrina Mehandi Photo: ಅಷ್ಟೆಲ್ಲ ಕಟ್ಟುನಿಟ್ಟಾದ್ರೂ ಫೋಟೋ ಲೀಕ್ ಆಯ್ತಾ!

 

Follow Us:
Download App:
  • android
  • ios