ಕತ್ರಿನಾ ಕೈಫ್‌ ಹಾಗೂ ವಿಕ್ಕಿ ಕೌಶಲ್‌ ಇಂದು ಹೊಸ ಬಾಳಿನ ಹೊಸಿಲು ತುಳಿಯಲಿದ್ದಾರೆ. ಆದರೆ ಈವರೆಗೆ ಈ ಜೋಡಿ ಮದುವೆಯ ಒಂದೇ ಒಂದು ಫೋಟೋ ಹೊರಬಿದ್ದಿಲ್ಲ. ಇದೀಗ ಕತ್ರಿನಾ ಮದುಮಗಳ ಉಡುಗೆಯಲ್ಲಿ ಕೈ ತುಂಬ ಮೆಹೆಂದಿ ಹಾಕಿ ನಿಂತಿರುವ ಫೋಟೋ ವೈರಲ್‌ ಆಗ್ತಿದೆ. ಏನಿದರ ಹಿಂದಿನ ಕಥೆ? 

ಬಾಲಿವುಡ್‌ (Bollywood)ನಲ್ಲೀಗ ಬಹಳ ಸೌಂಡ್‌ ಮಾಡ್ತಿರೋದು ಕತ್ರಿನಾ ಕೈಫ್‌ (Katrina kaif) ಹಾಗೂ ವಿಕ್ಕಿ ಕೌಶಲ್‌ (Vicky Koushal) ಮದುವೆ ಸುದ್ದಿ. ಎಲ್ಲೆಲ್ಲೂ ಅದೇ ಸುದ್ದಿಯೇ ಹರಿದಾಡ್ತಿದೆ. ಸವಾಯಿ ಮಾಧೋಪುರದ (Sawai Madhopur) ಬರ್ವಾರ ಕೋಟೆ (Barwara Fort) ಯಲ್ಲಿರುವ ಸಿಕ್ಸ್ ಸೆನ್ಸಸ್‌ ರೆಸಾರ್ಟ್‌ನಲ್ಲಿ (Six Senses Resort) ಕತ್ರಿನಾ ಮತ್ತು ವಿಕ್ಕಿ ಕೌಶಲ್‌ ಕೆಲವೇ ಆಪ್ತರ ನಡುವೆ ವಿವಾಹದ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಿನ್ನೆ ತಾನೇ ಈ ಜೋಡಿಯ ಮೆಹೆಂದಿ (Mehndi) ಕಾರ್ಯಕ್ರಮ ನಡೆದಿದೆ. ಆದರೆ ಕತ್ರಿನಾ ಹಾಗೂ ವಿಕ್ಕಿ ತಮ್ಮ ಮದುವೆಯನ್ನು ಸೀಕ್ರೇಟ್‌ ಆಗಿಡಲು ಮಾಡುತ್ತಿರುವ ಸರ್ಕಸ್ ಒಂದೆರಡಲ್ಲ. ಮದುವೆಗೆ ಬರುವ ಅತಿಥಿಗಳಿಗೆ ಮೊಬೈಲ್‌ಅನ್ನೇ ಬ್ಯಾನ್‌ ಮಾಡಿದ್ದಾರೆ. ಅವರಿಗೆ ಉಳಿದುಕೊಳ್ಳಲು ಈ ಭಾಗದ ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ವ್ಯವಸ್ಥೆ ಮಾಡಿದ್ದು, ಎಲ್ಲರೂ ಮೊಬೈಲ್‌ ಫೋನ್‌ಗಳನ್ನು ರೂಮ್‌ನಲ್ಲೇ ಬಿಟ್ಟುಬರಬೇಕೆಂದು ಕಟ್ಟು ನಿಟ್ಟಿನ ನಿಯಮ ಮಾಡಲಾಗಿದೆ. ಯಾವೊಬ್ಬ ಅತಿಥಿಯನ್ನೂ ಮೊಬೈಲ್‌ ಸಮೇತರಾಗಿ ಮದುವೆ ಮನೆಯೊಳಗೆ ಬಿಡುತ್ತಿಲ್ಲ. ಇಷ್ಟೆಲ್ಲ ಆದರೂ ಇದೀಗ ಈ ಜೋಡಿಯ ಒಂದು ಫೋಟೋ ಲೀಕ್‌ ಆಗಿದೆ ಅನ್ನೋ ಸುದ್ದಿ ಎಲ್ಲೆಲ್ಲೂ ಹರಿದಾಡ್ತಿದೆ. ಅಂದ್ರೆ ಕತ್ರಿನಾ ಹಾಗೂ ವಿಕ್ಕಿ ತಮ್ಮ ತಮ್ಮ ಮದುವೆಯನ್ನು ಎಷ್ಟೇ ಗುಟ್ಟಾಗಿಡಲು ಯತ್ನಿಸಿದರೂ ಒಂದು ಫೋಟೋ ಲೀಕ್‌ ಆಯ್ತಾ ಅನ್ನೋದು ಸದ್ಯದ ಪ್ರಶ್ನೆ. 

ಅದು ಕತ್ರಿನಾ ಕೈಫ್‌ ಮೆಹೆಂದಿ ಕಾರ್ಯಕ್ರಮದ ಫೋಟೋ ಎನ್ನಲಾಗುತ್ತೆ. ಕೈ ತುಂಬ ಮೆಹೆಂದಿ ಹಾಕಿಕೊಂಡು ಮದುಮಗಳ ಉಡುಗೆಯಲ್ಲಿ ಮಿಂಚುತ್ತಿರುವ ಕತ್ರಿನಾ ಮನಬಿಚ್ಚಿ ನಗುತ್ತಾ ಫೋಟೋಗೆ ಪೋಸ್‌ ನೀಡಿದ್ದಾರೆ. ನಿಂಬೆ ಬಣ್ಣದ ಸೀರೆ, ಮೈ ತುಂಬ ಒಡವೆ, ಕೈಗಳ ತುಂಬ ಮದರಂಗಿ ಧರಿಸಿ ಮದುಮಗಳ ಡ್ರೆಸ್‌ನಲ್ಲಿ ಕತ್ರಿನಾ ಮಿಂಚುತ್ತಿದ್ದಾರೆ. ಮುಖದ ತುಂಬ ಹರಡಿಕೊಂಡಿರುವ ನಗು ನೋಡಿದರೆ ಈಕೆ ಅತ್ಯಂತ ಸಂತೋಷದಲ್ಲಿರುವುದು ಗೊತ್ತಾಗುತ್ತೆ. ಅಂದರೆ ಮದುವೆಯ ಮೆಹೆಂದಿ ಶಾಸ್ತ್ರದಲ್ಲೇ ಈಕೆ ಇಷ್ಟು ಖುಷಿಯಲ್ಲಿದ್ದಾರೆ ಅನ್ನಲಾಗ್ತಿತ್ತು. ಈ ಫೋಟೋ ಕತ್ರಿನಾ ಅವರ ಫ್ಯಾನ್ಸ್‌ ಪೇಜ್‌ಗಳಲ್ಲೆಲ್ಲ ಓಡಾಡ್ತಿದೆ. ವೈರಲ್‌ ಆಗಿದೆ. 'ಕತ್ರಿನಾ ತನ್ನ ಮೆಹೆಂದಿ ಶಾಸ್ತ್ರವನ್ನು ಬಹಳ ಖುಷಿಯಿಂದ ಎನ್‌ಜಾಯ್‌ ಮಾಡ್ತಿದ್ದಾರೆ. ಆಕೆಯ ಆನಂದ ಅವಳ ಮುಖದ ಕಾಂತಿ ಹೆಚ್ಚಿಸಿದೆ' ಎಂಬ ನೋಟ್‌ನೊಂದಿಗೆ ಈ ಫೋಟೋ ಎಲ್ಲೆಡೆ ಹರಿದಾಡ್ತಿದೆ. ಅರೆ, ನೀವು ಚಾಪೆ ಕೆಳಗೇ ನಸುಳೋ ಪ್ರಯತ್ನ ಮಾಡಿದರೆ ನಾವು ರಂಗೋಲಿ ಕೆಳಗೆ ನುಸುಳ್ತೀವಿ ಅನ್ನೋ ದಾಟಿಯಲ್ಲಿ ನೆಟಿಜನ್ಸ್ ನಗುತ್ತಿದ್ದಾರೆ. ಬಹುಶಃ ಈ ವಿಷ್ಯ ಗೊತ್ತಾಗಿದ್ರೆ ಕತ್ರಿನಾನೂ ನಗ್ತಿದ್ರೇನೋ..

Actresses spotted in braless : ಪಬ್ಲಿಕ್‌ನಲ್ಲಿ ಬ್ರಾಲೆಸ್ ಆಗಿ ಎದೆಗಾರಿಕೆ ಪ್ರದರ್ಶಿಸಿದ ನಟಿಯರು!

ಏಕೆಂದರೆ ಇದು ಆಕೆಯ ಮೆಹೆಂದಿ ಶಾಸ್ತ್ರದ ಫೋಟೋ ಅಲ್ಲ. ಇಂಟರ್‌ನೆಟ್‌ನಲ್ಲಿ ಇದನ್ನು ಸರಿಯಾಗಿ ಕ್ರಾಸ್‌ ಚೆಕ್‌ ಮಾಡಿದರೆ ಈ ಫೋಟೋದ ಹಿಂದಿನ ಸತ್ಯ ಸಂಗತಿ ಗೊತ್ತಾಗುತ್ತೆ. ಇದು ಕಲ್ಯಾಣ್‌ ಜ್ಯುವೆಲ್ಲರಿಯ ಆಡ್‌ ಶೂಟ್‌ನ ಫೋಟೋ. ಕತ್ರಿನಾ ಕೈಫ್‌ ಅವರ ಮೆಹೆಂದಿ ಶಾಸ್ತ್ರದ ಫೋಟೋ ಅಲ್ಲ. ಕಲ್ಯಾಣ್‌ ಜ್ಯುವೆಲ್ಲರಿಯ ಈ ಜಾಹೀರಾತಿನಲ್ಲಿ ಅಮಿತಾಬ್‌ ಬಚ್ಚನ್‌ ಹಾಗೂ ಜಯಾ ಬಚ್ಚನ್‌ ಅವರೂ ಭಾಗಿಯಾಗಿದ್ದಾರೆ. ಕತ್ರಿನಾ ಇದರಲ್ಲಿ ಮದುಮಗಳ ಪಾತ್ರದಲ್ಲಿದ್ದಾರೆ. ಇನ್ನೊಂದು ವಿಚಾರ ಅಂದ್ರೆ ಕಳೆದ ವರ್ಷ ಮಾಡಿದ ಕಲ್ಯಾಣ ಜ್ಯುವೆಲ್ಲರಿ ಆಡ್‌ನಲ್ಲಿ ನಮ್ಮ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರೂ ಭಾಗಿಯಾಗಿದ್ದಾರೆ. 

ಅಲ್ಲಿಗೆ ಎಪ್ರಿಲ್‌ ಬರೋದಕ್ಕೂ ಮುಂಚೆನೇ ಫೂಲ್‌ ಆಗಿದ್ದಾರೆ ನೆಟಿಜನ್ಸ್. ಕತ್ರಿನಾ ಮಾತ್ರ ಎಂದಿನ ತುಂಟನಗೆಯಲ್ಲಿ ಮದುವೆಯ ಯಾವೊಂದು ವಿವರಗಳನ್ನೂ ಹೊರಬಿಡದೇ ವಿಕ್ಕಿಯ ಜೊತೆಗೆ ಹಸೆಮಣೆ ಏರಿದ್ದಾರೆ. ಅಮೆಜಾನ್‌ ಪ್ರೈಮ್‌ ಓಟಿಟಿ ಇವರ ಮದುವೆಯ ವೀಡಿಯೋವನ್ನು ಖರೀದಿಸುತ್ತಿದೆ ಎಂಬ ಗುಸು ಗುಸು ಸುದ್ದಿಯೂ ಇದೆ. 

Katrina Kaif Wedding: ಮದುವೆ ಫೋಟೋ, ವಿಡಿಯೋ ಪ್ರಸಾರಕ್ಕೆ 100 ಕೋಟಿ ಆಫರ್ ಮಾಡಿದ OTT