ಡ್ರೈಫ್ರೂಟ್ಸ್, ಬಿಯರ್ ಹಾಕಿ ಗೋ ಸಾಕಣೆ; ಗೋಮಾಂಸ ಬಿಸ್ನೆಸ್‌ಗಳಿದ ಫೇಸ್ಬುಕ್ ಸ್ಥಾಪಕ ಜುಕರ್‌ಬರ್ಗ್
ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಬೀಫ್ ಬಿಸ್ನೆಸ್‌ಗಿಳಿದಿದ್ದಾರೆ. ತಮ್ಮ ಎಲ್ಲ ವ್ಯವಹಾರಗಳಲ್ಲಿ ಇದು ಹೆಚ್ಚು ರುಚಿಕರವಾದುದಾಗಿದೆ ಎಂದಿದ್ದಾರೆ. ಇದಕ್ಕೆ ಸಾಕಷ್ಟು ಬಳಕೆದಾರರು ಬೈಕಾಟ್ ಫೇಸ್ಬುಕ್ ಎಂದಿದ್ದಾರೆ.
ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರು ವಿಶ್ವದ ಅತ್ಯುತ್ತಮ ಗುಣಮಟ್ಟದ ಗೋಮಾಂಸವನ್ನು ಉತ್ಪಾದಿಸುವುದಾಗಿ ಹೇಳಿಕೊಂಡಿದ್ದಾರೆ ಮತ್ತು ಈ ಗುರಿಯನ್ನು ಸಾಧಿಸಲು ಅವರು ಹಸುಗಳಿಗೆ
ಬಿಯರ್ ಕುಡಿಸುತ್ತಿದ್ದಾರಂತೆ! ತಮ್ಮ ಈ ಹೊಸ ಉದ್ಯಮ ಇದುವರೆಗೆ ಆರಂಭಿಸಿದ ಎಲ್ಲ ಉದ್ಯಮಗಳಲ್ಲೇ ಹೆಚ್ಚು ರುಚಿಕರವಾದುದು ಎಂದವರು ಹೇಳಿದ್ದಾರೆ.
'ಉತ್ತಮ ಗುಣಮಟ್ಟದ ಗೋಮಾಂಸ'
ಹವಾಯಿ ದ್ವೀಪದಲ್ಲಿ ತಾವು ಗೋ ಸಾಕಣೆ ಮಾಡುತ್ತಿದ್ದು, ಇಲ್ಲಿ ಹಸುಗಳಿಗೆ ಬಿಯರ್ ಕುಡಿಸಿ, ಡ್ರೈ ಫ್ರೂಟ್ಸ್ ಹಾಕಿ ಗುಣಮಟ್ಟದ ಆಹಾರ ನೀಡುತ್ತಿದ್ದೇವೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ಗೋ ಮಾಂಸದೊಂದಿಗೆ ಕುಳಿತಿರುವ ಫೋಟೋನ್ನು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ತಾವು ಹವಾಯಿ ದ್ವೀಪದಲ್ಲಿ ಮಕಾಡಾಮಿಯಾ ಮರಗಳನ್ನು ಬೆಳೆಸುತ್ತಿದ್ದು, ಇದರ ಬೀಜಗಳನ್ನು ಹಸುಗಳಿಗೆ ತಿನ್ನಲು ನೀಡುತ್ತೇವೆ ಎಂದಿದ್ದಾರೆ.
ಸಾವಿನಂಚಿನಲ್ಲಿದ್ದ ವಿದ್ಯಾರ್ಥಿನಿ ಜೀವ ಉಳಿಸಿದ ಸ್ಮಾರ್ಟ್ ವಾಚ್
ವಿಶ್ವದ ಅತ್ಯಂತ ಗುಣಮಟ್ಟದ ಗೋ ಮಾಂಸ ಉತ್ಪಾದಿಸುವುದು ತಮ್ಮ ಗುರಿ ಎಂದಿರುವ ಮಾರ್ಕ್, 'ಪ್ರತಿ ಹಸುವಿಗೆ ವರ್ಷಕ್ಕೆ 5000-10000 ಪೌಂಡ್ ಆಹಾರ ಬೇಕಾಗುತ್ತದೆ. ಅದಕ್ಕಾಗಿ ಬಹಳಷ್ಟು ಎಕರೆಯ ಮಕಾಡಾಮಿಯಾ ಅರಣ್ಯ ಬೇಕಾಗುತ್ತದೆ. ಅದನ್ನು ಬೆಳೆಸಲು ಹಾಗೂ ಜಾನುವಾರುಗಳನ್ನು ನೋಡಿಕೊಳ್ಳಲು ನನ್ನ ಮಗಳು ಸಹಾಯ ಮಾಡುತ್ತಿದ್ದಾಳೆ. ವಾಗ್ಯು ಮತ್ತು ಆ್ಯಂಗಸ್ ತಳಿಯನ್ನು ನಾವು ಬೆಳೆಸುತ್ತಿದ್ದು, ಇದು ನನ್ನೆಲ್ಲ ಪ್ರಾಜೆಕ್ಟ್‌ಗಳಲ್ಲಿ ಹೆಚ್ಚು ಡಿಲಿಶಿಯಸ್ ಆಗಿದೆ' ಎಂದಿದ್ದಾರೆ.
ಜುಕರ್‌ಬರ್ಗ್ ಅವರ ಈ ಪೋಸ್ಟಿಗೆ ಸಾಕಷ್ಟು ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗಳು ಹರಿದು ಬರುತ್ತಲೇ ಇವೆ.
ಇದಕ್ಕೆ ಮಹಿಳೆಯೊಬ್ಬರು ಪ್ರತಿಕ್ರಿಯಿಸಿ, 'ಬಹಳ ನಿರಾಶೆಗೊಂಡಿದ್ದೇನೆ. ಇದರಲ್ಲಿ ತಾರ್ಕಿಕ, ಸಮರ್ಥನೀಯ, ಮಾನವೀಯ ಅಥವಾ ನಾವು ಪ್ರಾಣಿಗಳಿಗೆ ಏನು ಮಾಡಬೇಕೆಂಬುದನ್ನು ಒಳಗೊಂಡಿರುವ ಬಗ್ಗೆ ಆರೋಗ್ಯಕರವಾದ ಏನೂ ಇಲ್ಲ' ಎಂದಿದ್ದಾರೆ.
ಮಾಲ್ಡೀವ್ಸ್ ಬುಕ್ಕಿಂಗ್ ಕ್ಯಾನ್ಸಲ್ ಬಳಿಕ ‘ದೇಶ ಮೊದಲು ವ್ಯಾಪಾರ ನಂತರ’ ಎಂಬ ಸಂದೇಶ ಕಳಿಸಿದ Ease My Trip
ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿ, 'ಇದರ ಮಾರ್ಕೆಟಿಂಗ್ ಮಾಡಲು ಜುಕರ್‌ಬರ್ಗ್‌ಗೆ ಯಾವುದೇ ಹೊಸ ವೆಬ್‌ಸೈಟ್ ಅಥವಾ ಆ್ಯಪ್ ಬೇಕಾಗಿಲ್ಲ. ತಮ್ಮದೇ ಸ್ವಂತ ಫೇಸ್ಬುಕ್, ಇನ್ಸ್ಟಾ ಪೇಜಿಗೆ ಹಾಕಿದರೂ ಸಾಕು' ಎಂದಿದ್ದಾರೆ. ಇನ್ನೊಬ್ಬರು 'ಜೀವವನ್ನು ಸಾಯಿಸುವ ಸಲುವಾಗಿ ಬೆಳೆಸುವುದು ಎಂಥ ಜೋಕ್ ಆಗಿದೆ' ಎಂದಿದ್ದಾರೆ.
ಇನ್ನೂ ಬಹಳಷ್ಟು ಹಿಂದೂಗಳು ಬೈಕಾಟ್ ಫೇಸ್ಬುಕ್ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.