Explained: ವಿದ್ಯಾವಂತ ಮಹಿಳೆ ಕರಾಚಿಯಲ್ಲಿ ಆತ್ಮಾಹುತಿ ದಾಳಿ ನಡೆಸಲು ಕಾರಣವೇನು?

Pakistan Karachi Suicide Bomb Attack: ಬಲೂಚಿಸ್ತಾನ ಲಿಬರೇಷನ್‌ ಆರ್ಮಿ ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ ನಡೆಸಿದೆ. ಈ ದಾಳಿಯನ್ನು ಮಾಡಿದ್ದು ವಿದ್ಯಾವಂತೆ, ಎರಡು ಮಕ್ಕಳ ತಾಯಿ ಮತ್ತು ವೈದ್ಯರೊಬ್ಬರ ಹೆಂಡತಿ. ಇಷ್ಟೆಲ್ಲಾ ಓದಿಕೊಂಡವಳು ಕುಟುಂಬವನ್ನೂ ಮರೆತು ಆತ್ಮಾಹುತಿ ದಾಳಿ ಮಾಡಲು ಕಾರಣವೇನು? ಇಲ್ಲಿದೆ ಅದಕ್ಕೆ ಉತ್ತರ 

Explained why highly educated woman turned suicide bomber for balochistan

ಕರಾಚಿ: ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾಲಯದ (Karachi Suicide Bomb Blast) ಬಳಿ ನಿನ್ನೆ ಆತ್ಮಾಹುತಿ ದಾಳಿ ನಡೆಸಲಾಗಿತ್ತು. ಅದರಲ್ಲಿ ಮೂವರು ಚೀನಾ ನಾಗರಿಕರು ಸೇರಿದಂತೆ ಒಟ್ಟೂ ನಾಲ್ಕು ಜನ ಮೃತಪಟ್ಟಿದ್ದರು. ಇಷ್ಟಕ್ಕೂ ಈ ದಾಳಿಯ ಹಿಂದೆ ಯಾರಿದ್ದಾರೆ ಎಂದು ಹುಡುಕ ಹೊರಟರೆ ಒಬ್ಬ ವಿದ್ಯಾವಂತ ಮಹಿಳೆ ಕಾಣುತ್ತಾರೆ. ಶಾರಿ ಬಲೋಚ್‌ (30) ಬಲೂಚಿಸ್ತಾನ ಲಿಬರೇಷನ್‌ ಆರ್ಮಿಯ (Balochistan Liberation Army) ಸಕ್ರಿಯ ಕಾರ್ಯಕರ್ತೆ. ಪ್ರಾಣಿಶಾಸ್ತ್ರದಲ್ಲಿ ಎಂಎಸ್‌ಸಿ ಮಾಡಿರುವ ಈಕೆ, ಎಂಫಿಲ್‌ ಕೂಡ ಮಾಡುತ್ತಿದ್ದವಳು. ಬಲೂಚಿಸ್ತಾನದ ವೈದ್ಯರೊಬ್ಬರ ಜತೆ ಮದುವೆಯಾಗಿದ್ದ ಆಕೆಗೆ ಇಬ್ಬರು ಮುದ್ದಾದ ಮಕ್ಕಳೂ ಇದ್ದಾರೆ. ಆದರೆ ಇದೆಲ್ಲದರ ಹೊರತಾಗಿಯೂ ಬಲೂಚಿಸ್ತಾನದ ಸ್ವಾತಂತ್ರದ ಹಂಬಲ ಆಕೆಯನ್ನು ಕಾಡುತ್ತಿತ್ತು. ಅದರ ಪ್ರತಿಫಲವೇ ಮಂಗಳವಾರ ನಡೆದ ಆತ್ಮಾಹುತಿ ದಾಳಿ. 

ಶಾರಿ ಬಲೂಚ್‌ (Suicide Bomber Shari Baloch) ನಿಯಾಝಾರ್‌ ಅಬಾದ್‌ ಎಂಬ ಬಲೂಚಿಸ್ತಾನದ ಪ್ರದೇಶದ ತುರ್ಬಾತ್‌ ಎಂಬ ಊರಿನವಳು. ಬಲೂಚಿಸ್ತಾನ ಲಿಬರೇಷನ್‌ ಆರ್ಮಿಯ ಪತ್ರಿಕಾ ಪ್ರಕಟಣೆ ಹೇಳುವಂತೆ ಈಕೆ ಎಂಫಿಲ್‌ ಮಾಡುತ್ತಿದ್ದಳು ಮತ್ತು ವಿಜ್ಞಾನದ ಶಿಕ್ಷಕಿಯಾಗೂ ಕೆಲಸ ಮಾಡುತ್ತಿದ್ದಳು. ಈಗಾಗಲೇ ಬಲೂಚಿಸ್ತಾನ ಲಿಬರೇಷನ್‌ ಆರ್ಮಿಯ ವಿಶೇಷ ಆತ್ಮಾಹುತಿ ದಳದಲ್ಲಿ ಕಳೆದ ಎರಡು ವರ್ಷಗಳಿಂದ ಶಾರಿ ಬಲೂಚ್‌ ತರಬೇತಿ ಪಡೆಯುತ್ತಿದ್ದರು. ತರಬೇತಿಯ ನಂತರ ಆತ್ಮಾಹುತಿ ದಾಳಿಗೆ ಒಪ್ಪಿಗೆ ನೀಡಲು ಸಮಯವನ್ನು ಸಹ ನೀಡಲಾಗುತ್ತದೆ. ಶಾರಿ ಕಳೆದ ಆರು ತಿಂಗಳ ಹಿಂದೆ ಆತ್ಮಾಹುತಿ ದಾಳಿಗೆ ಸಮ್ಮತಿ ಸೂಚಿಸಿದ್ದಳು. ಅದಾದ ನಂತರ ಚೀನಾ ಮತ್ತು ಪಾಕಿಸ್ತಾನ ಎರಡೂ ದೇಶಗಳಿಗೆ ಚುರುಕು ಮುಟ್ಟಿಸಲು ಬಲೂಚಿಸ್ತಾನ ಲಿಬರೇಷನ್‌ ಆರ್ಮಿ ಈ ದಾಳಿ ನಡೆಸಿದೆ. 

ಪತ್ರಿಕಾ ಪ್ರಕಟಣೆಯ ಪ್ರಕಾರ, ಶಾರಿಗೆ ಎರಡು ಮಕ್ಕಳು ಇರುವ ಹಿನ್ನೆಲೆ, ಆತ್ಮಾಹುತಿ ದಳದಿಂದ ದೂರ ಇರುವಂತೆ ಕೋರಲಾಗಿತ್ತು. ಆದರೆ ಶಾರಿ ಅದಕ್ಕೆ ಒಪ್ಪಲಿಲ್ಲ ಎಂದು ಬಲೂಚ್‌ ಲಿಬರೇಷನ್‌ ಆರ್ಮಿ ಹೇಳಿದೆ. ಈ ಹೇಳಿಕೆಯ ಜತೆಗೆ ಬಲೂಚಿಸ್ತಾನದ ನೆಲದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಚೀನಾ ಕೆಲಸ ಮಾಡುವುದನ್ನು ಸಹಿಸುವುದಿಲ್ಲ. ಈ ದಾಳಿ ಇಲ್ಲಿಗೇ ನಿಲ್ಲುವುದಿಲ್ಲ, ಚೀನೀಯರ ಮೇಲೆ ಇನ್ನಷ್ಟು ದಾಳಿಗಳನ್ನು ಮಾಡುತ್ತೇವೆ ಎಂದು ಹೇಳಿದೆ. 

ಇದನ್ನೂ ಓದಿ: Russia Ukraine War ಉಕ್ರೇನ್‌ನ ಮತ್ತೊಂದು ನಗರ ರಷ್ಯಾ ವಶಕ್ಕೆ

"ಬಲೋಚ್‌ ಲಿಬರೇಷನ್‌ ಆರ್ಮಿಯ ಮಜೀದ್‌ ಬ್ರಿಗೇಡ್‌ ಚೀನಾ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದು, ದಾಳಿಯಲ್ಲಿ ಹುವಾಂಗ್‌ ಗುಯ್‌ಪಿಂಗ್‌, ಡಿಂಗ್‌ ಮುಫಾಂಗ್‌ ಮತ್ತು ಚೆನ್‌ ಸಾಯ್‌ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಅಧಿಕಾರಿ ವಾಂಗ್‌ ಯುಕಿಂಗ್‌ ಮತ್ತು ಆತನ ರಕ್ಷಣಾ ಸಿಬ್ಬಂದಿ ಗಾಯಗೊಂಡಿದ್ದಾರೆ," ಎಂದು ಬಲೂಚಿಸ್ತಾನ ಲಿಬರೇಷನ್‌ ಆರ್ಮಿ ಪ್ರಕಟಣೆಯಲ್ಲಿ ತಿಳಿಸಿದೆ. 
ಮುಂದುವರೆದ ಹೇಳಿಕೆಯಲ್ಲಿ, "ಇಂದಿನ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಜೀದ್‌ ಬ್ರಿಗೇಡ್‌ನ ಫಿದಾಯೀನ್‌ ಶಾರಿ ಬಲೋಚ್‌ ಅಲಿಯಾಸ್‌ ಬ್ರಂಶ್‌, ನಿಯಾಝಾರ್‌ ಅಬಾದ್‌ ತುರ್ಬಾತ್‌ನ ನಿವಾಸಿ ಯಶಸ್ವಿಯಾಗಿಸಿದ್ದಾರೆ. ಶಾರಿ ಬಲೋಚ್‌ ವಿದ್ಯಾರ್ಥಿ ಸಂಘಟನೆಯಲ್ಲಿದ್ದವರು. ಬಲೂಚಿಸ್ತಾನದಲ್ಲಾದ ನರಮೇಧ, ಆಕ್ರಮಣದ ಬಗ್ಗೆ ಅವರಿಗೆ ಅರಿವಿದೆ. ಅದೇ ಅವರನ್ನು ಇಂದು ಆತ್ಮಾಹುತಿ ದಾಳಿಗೆ ಪ್ರೇರೇಪಿಸಿದೆ," ಎಂದು ಹೇಳಲಾಗಿದೆ. 

ಇದನ್ನೂ ಓದಿ: ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾಲಯದಲ್ಲಿ ಸ್ಫೋಟ: ನಾಲ್ವರು ಮೃತಪಟ್ಟಿರುವ ಸಾಧ್ಯತೆ

ಬಿಎಲ್‌ಎ ವಕ್ತಾರೆ ಜೀಯಾಂದ್‌ ಬಲೋಚ್‌ ಮಾತನಾಡಿ, "ಚೀನಾದ ಅಧಿಕಾರಿಗಳ ಮೇಲೆ ದಾಳಿ ಮಾಡಿರುವುದರ ಹಿಂದೆ, ಚೀನಾದ ಸಾಮ್ರಾಜ್ಯಶಾಹಿ ಹುನ್ನಾರವನ್ನು ತಡೆಯುವುದಾಗಿದೆ. ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯವಾಗಿ ಪಾಕಿಸ್ತಾನ ಮತ್ತು ಬಲೂಚಿಸ್ತಾನದ ಮೇಲೆ ಪ್ರಭಾವ ಬೀರಲು ಚೀನಾ ಯತ್ನಿಸುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ದಾಳಿ ಎಚ್ಚರಿಕೆಯಷ್ಟೇ. ಚೀನಾದ ನೇರ, ಪರೋಕ್ಷ ಯಾವುದೇ ರೀತಿಯ ಇರುವಿಕೆಯನ್ನೂ ನಾವು ಒಪ್ಪುವುದಿಲ್ಲ. ಇದನ್ನು ಈಗಲೇ ಚೀನಾ ಅರಿತರೆ ಒಳ್ಳೆಯದು ಇಲ್ಲದಿದ್ದರೆ, ಇನ್ನಷ್ಟು ದಾಳಿಗಳಾಗಲಿವೆ," ಎಂದಿದ್ದಾರೆ. 

Latest Videos
Follow Us:
Download App:
  • android
  • ios