ಅಮೆರಿಕಾದ ಟೆಕ್ಸಾಸ್ ಮೃಗಾಲಯದ ಹೊರಗೆ ಅಳವಡಿಸಿದ ಸಿಸಿಟಿವಿಯೊಂದರಲ್ಲಿ ವಿಚಿತ್ರ ದೆವ್ವದಂತೆ ಕಾಣಿಸುವ ಆಕಾರವೊಂದು ಸೆರೆಯಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ಭದ್ರತಾ ಕ್ಯಾಮರಾದಲ್ಲಿ ಸೆರೆಯಾದ ಈ ದೃಶ್ಯದಲ್ಲಿ ವಿಚಿತ್ರ  ಆಕೃತಿಯೊಂದು ಮೃಗಾಲಯದ ಸುತ್ತ ತಿರುಗುತ್ತಿರುವುದು ಕಂಡು ಬಂದಿದೆ.

ಅಮೆರಿಕಾದ ಟೆಕ್ಸಾಸ್ ಮೃಗಾಲಯದ ಹೊರಗೆ ಅಳವಡಿಸಿದ ಸಿಸಿಟಿವಿಯೊಂದರಲ್ಲಿ ವಿಚಿತ್ರ ದೆವ್ವದಂತೆ ಕಾಣಿಸುವ ಆಕಾರವೊಂದು ಸೆರೆಯಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ಭದ್ರತಾ ಕ್ಯಾಮರಾದಲ್ಲಿ ಸೆರೆಯಾದ ಈ ದೃಶ್ಯದಲ್ಲಿ ವಿಚಿತ್ರ ಆಕೃತಿಯೊಂದು ಮೃಗಾಲಯದ ಸುತ್ತ ತಿರುಗುತ್ತಿರುವುದು ಕಂಡು ಬಂದಿದೆ. ಈ ವಿಚಿತ್ರ ಅಕೃತಿ ಎರಡು ಕಾಲುಗಳ ಮೇಲೆ ನಿಂತಿದ್ದು ದೆವ್ವವನ್ನು ಹೋಲುತ್ತಿದೆ. ಆದರೆ ಮೊನಚಾದ ಕಿವಿಗಳು ಮತ್ತು ಕುತ್ತಿಗೆ ಭಾಗದಲ್ಲಿ ಕುದುರೆಯಂತೆ ಉದ್ದವಾದ ಕೂದಲನ್ನು ಹೊಂದಿರುವುದು ಕಾಣಿಸುತ್ತಿದೆ. ಇದು ಮೃಗಾಲಯದ ಬೇಲಿಯ ಹೊರ ಭಾಗದಲ್ಲಿ ಕಂಡು ಬರುತ್ತಿದೆ. 

ಟೆಕ್ಸಾಸ್‌ನ ಅಮರಿಲ್ಲೊ ನಗರವು ಫೇಸ್‌ಬುಕ್‌ನಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿದ್ದು, ಅಮರಿಲ್ಲೊ ಮೃಗಾಲಯದಲ್ಲಿ ಮೇ 21 ರ ಮಧ್ಯರಾತ್ರಿ ಸುಮಾರು 1:25 ರ ಸುಮಾರಿಗೆ ಮೃಗಾಲಯದ ಹೊರಗೆ ವಿಚಿತ್ರವಾದ ಆಕೃತಿ ಓಡಾಡಿದ್ದು, ಅದರ ದೃಶ್ಯ ಸೆರೆಯಾಗಿದೆ. ಅದು ಏನಾಗಿರಬಹುದು ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಆದರೆ ಈ ವಿಚಿತ್ರ ಆಕೃತಿ ಯಾವುದೇ ಪ್ರಾಣಿಗಳು ಅಥವಾ ವ್ಯಕ್ತಿಗಳಿಗೆ ಹಾನಿಯಾಗಿಲ್ಲ ಮತ್ತು ಅಪರಾಧ ಚಟುವಟಿಕೆ ನಡೆಸಿದ ಅಥವಾ ಬಲವಂತವಾಗಿ ಸ್ಥಳ ಪ್ರವೇಶಿಸಿದ ಯಾವುದೇ ಲಕ್ಷಣಗಳಿಲ್ಲ ಎಂದು ಉದ್ಯಾನವನದ ನಿರ್ದೇಶಕರು ಹೇಳಿದ್ದಾರೆ. 

ಏಲಿಯನ್ಸ್ ಆಕರ್ಷಿಸಲು ಬಾಹ್ಯಾಕಾಶಕ್ಕೆ ಮಾನವರ ನಗ್ನ ಚಿತ್ರ

ಮಾನವರು 150 ವರ್ಷಗಳಿಂದ ಅನ್ಯಲೋಕದ ಜೀವಿಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಆದರೂ ಈ ಪ್ರಯತ್ನಕ್ಕೆ ಇನ್ನೂ ಯಶಸ್ಸು ಸಿಕ್ಕಿಲ್ಲ, ಅಥವಾ ವಿಜ್ಞಾನಿಗಳು ಈ ಸಾಹಸದಲ್ಲಿ ಯಶಸ್ವಿಯಾಗಿದ್ದರೂ ಕನಿಷ್ಠ ಸಾರ್ವಜನಿಕರಿಗೆ ಈ ಬಗ್ಗೆ ತಿಳಿದಿಲ್ಲ. ಈಗ ಅನ್ಯಲೋಕದ ಜೀವಿಗಳನ್ನು ಅಥವಾ ಏಲಿಯನ್‌ಗಳನ್ನು ಸಂಪರ್ಕಿಸುವ ಹೊಸ ಪ್ರಯತ್ನದಲ್ಲಿ, ವಿಜ್ಞಾನಿಗಳು ಇಬ್ಬರು ನಗ್ನ ವ್ಯಕ್ತಿಗಳ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಹೊಸ ಪ್ರಯೋಗಕ್ಕೆ ಸಿದ್ದರಾಗಿದ್ದಾರೆ. 

ಇಂಟರ್ನೆಟ್ ಸ್ತಬ್ಧ: ಇದ್ಯಾವ ಪ್ರಾಣಿ ಹೇಳಿ ನೋಡೋಣ..?

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ವಿಜ್ಞಾನಿಗಳ ಗುಂಪೊಂದು ಹೊಸ ಸಂದೇಶವನ್ನು ಅಭಿವೃದ್ಧಿಪಡಿಸಿದೆ. ಈ ಸಂದೇಶಗಳನ್ನು ಇತರೆ ಗೃಹಗಳಲ್ಲಿ ಅಸ್ತಿತ್ವದಲ್ಲಿರಬಹುದಾದ ಅನ್ಯಲೋಕದ ಬುದ್ಧಿವಂತ ಜೀವಿಗಳಿಗೆ ರವಾನಿಸಬಹುದು ಎಂದು ಸೈಂಟಿಫಿಕ್ ಅಮೇರಿಕನ್ (Scientific American) ವರದಿ ತಿಳಿಸಿದೆ.

ಸಂಭಾವ್ಯ ಅನ್ಯಗ್ರಹ ಜೀವಿಗಳ ಬಗೆಗಿನ ಕುತೂಹಲವನ್ನು ಹೆಚ್ಚಿಸಲು ಮತ್ತು ಸಂವಹನವನ್ನು ಉತ್ತೇಜಿಸಲು ಭೂಮಿಯ ವಾತಾವರಣದಿಂದ ಇಬ್ಬರು ನಗ್ನ ವ್ಯಕ್ತಿಗಳ ಕಾರ್ಟೂನನ್ನು ಕಳುಹಿಸುವ ಮೂಲಕ ವಿಶ್ವದಲ್ಲಿನ ಇತರ ಜೀವ ರೂಪಗಳನ್ನು ಸಂಪರ್ಕಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಈ ಯೋಜನೆಯು ಗುರುತ್ವಾಕರ್ಷಣೆಯ ಚಿತ್ರಣವನ್ನು ಮತ್ತು ಡಿಎನ್‌ಎಯನ್ನು (DNA) ಸಹ ಒಳಗೊಂಡಿದೆ, ಜೊತೆಗೆ ನಗ್ನ ಪುರುಷ ಮತ್ತು ಮಹಿಳೆ ಹಲೋ (Hello) ಎಂದು ಹೇಳುವ ಪಿಕ್ಸಿಲೇಟೆಡ್ ರೇಖಾಚಿತ್ರವನ್ನೂ ಒಳಗೊಂಡಿದೆ.

ಗಾಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ತಾಯಿ ಕೋತಿ: ವಿಡಿಯೋ ವೈರಲ್

ಬೀಕನ್ ಇನ್ ದಿ ಗ್ಯಾಲಕ್ಸಿ (Beacon in the Galaxy- BITG) ಹೆಸರಿನ ಹೊಸ ಬಾಹ್ಯಾಕಾಶ ಟಿಪ್ಪಣಿಯನ್ನು (Messege) ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ವಿಜ್ಞಾನಿ ಜೊನಾಥನ್ ಜಿಯಾಂಗ್ ಮತ್ತು ಅವರ ಸಹೋದ್ಯೋಗಿಗಳು ರೂಪಿಸಿದ್ದಾರೆ. ಈ ವಿಜ್ಞಾನಿಗಳು ತಮ್ಮ ಪ್ರೇರಣೆ ಮತ್ತು ವಿಧಾನವನ್ನು ಪ್ರಿಪ್ರಿಂಟ್ ಸೈಟ್‌ನ ಅಧ್ಯಯನದಲ್ಲಿ ಪ್ರಕಟಿಸಿದ್ದಾರೆ. ವಿಜ್ಞಾನಿಗಳ ಪ್ರಕಾರ, ಅವರು ಅನ್ಯಗೃಹ ಜೀವಿ ಅಥವಾ ಏಲಿಯನ್‌ಗಳೊಂದಿಗೆ ಸಂಹವನ ಮಾಡುವ ಸವಾಲುಗಳ ಕಾರಣದಿಂದಾಗಿ ಈ ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ ಅನ್ಯಗೃಹ ಜೀವಿಗಳ ಸಂಹವನ ಮಾಧ್ಯಮ ಮಾನವರ ಶೈಲಿಗಿಂತ ಸಂಪೂರ್ಣವಾಗಿ ವಿಭಿನ್ನವಾದ ಭಾಷೆಯ ಸ್ವರೂಪವನ್ನು ಹೊಂದಿರಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.