ನಗೋಯಾ(ಜೂ.26): ಜಪಾನ್’ನ ನಗೋಯಾದಲ್ಲಿ ಕಂಡ ವಿಚಿತ್ರ ಪ್ರಾಣಿಯೊಂದು ಇಂಟರ್ನೆಟ್’ನಲ್ಲಿ ಸನ್ಸೇಶನ್ ಸೃಷ್ಟಿಸಿದ್ದು, ಈ ವಿಚಿತ್ರ ಪ್ರಾಣಿಯ ಕಂಡ ದಂಗಾದ ಜನ ದಂಗಾಗಿದ್ದಾರೆ.

ನಗರದ ಕಟ್ಟಡವೊಂದರಲ್ಲಿ ಏಕಾಏಕಿ ಕಂಡ ಈ ಪ್ರಾಣಿ ಕಂಡ ಜನ ಇದೇನೆಂದು ಕೇಳುವ ಮೊದಲೇ ಹಕ್ಕಿಯಂತೆ ಹಾರಿ ಹೋಗಿ ಮತ್ತಷ್ಟು ಭಯ ಮೂಡಿಸಿದೆ.

ಅಸಲಿಗೆ ಇದು ನಾವು ಇದುವರೆಗೂ ಕಂಡು ಕೇಳರಿಯದ ಯಾವುದೇ ಹೊಸ ಪ್ರಾಣಿಯಲ್ಲ. ಬದಲಿಗೆ ಕಾಗೆಯೊಂದು ತನ್ನ ರೆಕ್ಕೆಗಳನ್ನು ನೆಲಕ್ಕೆ ತಾಕಿಸಿ ಕುಳಿತ ಪರಿಣಾಮ ಅದು ಗೋರಿಲ್ಲಾ ರೀತಿ ಕಾಣುತ್ತಿದೆ.

ತನ್ನ ರೆಕ್ಕೆಗಳನ್ನು ಅಗಲಿಸಿದ ಪರಿಣಾ ಗೋರಿಲ್ಲಾ ಮಾದರಿಯಲ್ಲೇ ನಡೆಯುತ್ತಿರುವಂತೆ ಜನರಿಗೆ ಭಾಸವಾಗಿದೆ. ಸದ್ಯ ಈ ಕಾಗೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.