ಅಷ್ಘಾನಿಸ್ತಾನ ಮಹಿಳಾ ಫುಟ್‌ಬಾಲ್ ತಂಡದ ಆಟಗಾರರಿಗೆ ಸಮವಸ್ತ್ರ, ಫುಟ್‌ಬಾಲ್ ಕಿಟ್ ಸುಡಲು ಕರೆ ಸುಟ್ಟುಹಾಕುವಂತೆ ತಂಡದ ಮಾಜಿ ನಾಯಕಿ ಖಲೀದಾ ಪೋಪಲ್ ಕಿವಿಮಾತು
ಕಾಬೂಲ್ (ಆ.20): ಅಷ್ಘಾನಿಸ್ತಾನ ಮಹಿಳಾ ಫುಟ್‌ಬಾಲ್ ತಂಡದ ತಂಡದ ಆಟಗಾರರು ತಮ್ಮ ಸಮವಸ್ತ್ರ, ಫುಟ್‌ಬಾಲ್ ಕಿಟ್‌ಗಳನ್ನು ಸುಟ್ಟುಹಾಕುವಂತೆ ತಂಡದ ಮಾಜಿ ನಾಯಕಿ ಖಲೀದಾ ಪೋಪಲ್ ಕಿವಿಮಾತು ಹೇಳಿದ್ದಾರೆ.
ತಾಲಿಬಾನಿಗಳು ಮಹಿಳೆಯರ ಕುರಿತು ಹೊಂದಿರುವ ಕ್ರೂರ ಭಾವನೆಯಿಂದ ನೊಂದಿರುವ ಅವರು ಈಗ ವಿದೇಶದಲ್ಲಿದ್ದು, ತಮ್ಮ ಸಹ ಆಟಗಾರರಿಗೆ ಇತ್ತೀಚಿಗೆ ನಡೆದ ಸಂದರ್ಶನ ಒಂದರಲ್ಲಿ ಹೀಗೆ ಹೇಳಿದ್ದಾರೆ.
ತಾಲಿಬಾನಿಗಳಿಗೆ ಸಾಲು ಸಾಲು ಸವಾಲು : ಹಣವಿಲ್ಲ, ಅಹಾರ ದುಬಾರಿ
1996-2001ರವರೆಗೆ ನಡೆದ ತಾಲಿಬಾನಿಗಳ ಆಳ್ವಿಕೆಯ ಸಮಯದಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯಗಳ ಕುರಿತು ಮಾತನಾಡಿರುವ ಅವರು ‘ಹೆಣ್ಣಮಕ್ಕಳು ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ತಮ್ಮ ಗುರುತನ್ನು ನಾಶ ಮಾಡುವುದು ಅನಿವಾರ್ಯವಾಗಿದೆ.
ಹಾಗಾಗಿ ನಿಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಅಳಿಸಿ, ರಾಷ್ಟ್ರೀಯ ತಂಡದ ಸಮವಸ್ತ್ರ ಮತ್ತು ಕಿಟ್‌ನ್ನು ಸುಟ್ಟು ಹಾಕಿ. ಹೀಗೆ ಹೇಳುವುದಕ್ಕೆ ತೀವ್ರ ನೋವಾಗುತ್ತಿದೆ ಆದರೆ ಜೀವ ಉಳಿಸಿಕೊಳ್ಳಲು ಇದು ಅನಿವಾರ್ಯ’ ಎಂದು ಅವರು ಹೇಳಿದ್ದಾರೆ.
