ಅಂತರಿಕ್ಷದಿಂದ ಹೇಗೆ ಕಾಣುತ್ತೆ ರಾಮ ಸೇತುವೆ? ಯುರೋಪ್ ಬಾಹ್ಯಾಕಾಶ ಸಂಸ್ಥೆಯಿಂದ ಫೋಟೋ ರಿಲೀಸ್
ಅಂತರಿಕ್ಷದಿಂದ ರಾಮಸೇತುವೆ (Ram Setu) ಹೇಗೆ ಕಾಣುತ್ತೆ ಎಂಬುದನ್ನು ಈ ಫೋಟೋದಲ್ಲಿ ನೋಡಬಹುದಾಗಿದೆ. ರಾಮ ಸೇತುವೆಯನ್ನು ಆಡಂ ಬ್ರಿಜ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ನವದೆಹಲಿ: ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA-European Space Agency) ಭಾರತ ಮತ್ತು ಶ್ರೀಲಂಕಾದ ನಡುವೆ ರಾಮಯಾಣ ಕಾಲದಲ್ಲಿ ಶ್ರೀರಾಮಚಂದ್ರ ನಿರ್ಮಿಸಿದ್ದ ರಾಮ ಸೇತುವೆಯ ಫೋಟೋವನ್ನು ಬಿಡುಗಡೆಗೊಳಿಸಿದೆ. ಅಂತರಿಕ್ಷದಿಂದ ರಾಮಸೇತುವೆ (Ram Setu) ಹೇಗೆ ಕಾಣುತ್ತೆ ಎಂಬುದನ್ನು ಈ ಫೋಟೋದಲ್ಲಿ ನೋಡಬಹುದಾಗಿದೆ. ರಾಮ ಸೇತುವೆಯನ್ನು ಆಡಂ ಬ್ರಿಜ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ರಾಮಸೇತುವೆ ಭಾರತದ ಆಗ್ನೇಯ ಭಾಗ ರಾಮೇಶ್ವರಂನಿಂದ ಶ್ರೀಲಂಕಾದ ಮನ್ನಾರ್ ದ್ವೀಪದವರೆಗೆ ಅಂದ್ರೆ ಬರೋಬ್ಬರಿ 48 ಕಿಲೀ ಮೀಟರ್ ಉದ್ದವಿದೆ. ಇದು ದಕ್ಷಿಣದಲ್ಲಿ ಮನ್ನಾರ್ ಕೊಲ್ಲಿಯನ್ನು ಉತ್ತರದ ಪಾಕ್ ಜಲಸಂಧಿಯಿಂದ ಪ್ರತ್ಯೇಕಿಸುತ್ತದೆ. ಮನ್ನಾರ್ ಕೊಲ್ಲಿಯನ್ನು ಹಿಂದೂ ಮಹಾಸಾಗರದ ಹೆಬ್ಬಾಗಿಲು ಅಂತಾ ಪಾಕ್ ಜಲಸಂಧಿ ಬಂಗಾಳದ ಗೇಟ್ ವೇ ಆಗಿದೆ.
ರಾಮಸೇತುವೆ ನಿಜಕ್ಕೂ ಮಾನವ ನಿರ್ಮಿತವಾಗಿದ್ದಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರೀರಾಮಚಂದ್ರರು ಸೀತೆಯನ್ನು ಹುಡುಕುತ್ತಾ ರಾವಣನ ವಾಸಸ್ಥಾನವಾದ ಲಂಕೆಗೆ ಹೊರಟಿದ್ದರು. ಈ ವೇಳೆ ಮಾರ್ಗಮಧ್ಯೆ ಸಮುದ್ರ ಬಂದಿದ್ದರಿಂದ ಸೇತುವೆ ನಿರ್ಮಿಸಲಾಯ್ತು ಎಂದು ಹೇಳಲಾಗುತ್ತದೆ. ಸೇತುವೆ ನಿರ್ಮಿಸಿದ ಜಾಗದಲ್ಲಿ ಸುಣ್ಣದ ಕಲ್ಲುಗಳು ಕಾಣಲು ಸಿಗುತ್ತವೆ. ಇದು ತೇಲುವೆ ಸೇತುವೆ ಆಗಿತ್ತು ಎಂದು ಧಾರ್ಮಿಕ ಗ್ರಂಥಗಳಿಂದ ಗೊತ್ತಾಗುತ್ತದೆ.
ರಾಮಸೇತು ಇತ್ತು ಎನ್ನಲಾಗದು, ಕುರುಹು ಇದೆ: ಕೇಂದ್ರ ಸರ್ಕಾರ; ಕಾಂಗ್ರೆಸ್ ಆಕ್ರೋಶ
ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಹೇಳಿಕೆ
15ನೇ ಶತಮಾನದವರೆಗೂ ಜನರು ರಾಮಸೇತುವೆಯನ್ನು ಬಳಕೆ ಮಾಡುತ್ತಿದ್ದರು. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಇದೊಂದು ನಿಸರ್ಗ ನಿರ್ಮಿತ ಸೇತುವೆಯಾಗಿತ್ತು ಎಂದು ಹೇಳಿದೆ. 15ನೇ ಶತಮಾನದ ಬಳಿಕ ಕಾಲಕ್ರಮೇಣ ಬಿರುಗಾಳಿ ಸೇರಿದಂತೆ ನೈಸರ್ಗಿಕ ವಿಕೋಪಗಳಿಗೆ ತುತ್ತಾಗಿ ರಾಮಸೇತುವೆ ನಾಶವಾಯ್ತು. ಸೇತುವೆ ಇತ್ತು ಎಂಬುದಕ್ಕೆ ಮರಳಿನ ದಿಬ್ಬದ ಕುರುಹುಗಳಿವೆ. ಕೆಲವು ಭಾಗದಲ್ಲಿ ಸಮುದ್ರದಾಳ ಕೇವಲ 1 ರಿಂದ 10 ಮೀಟರ್ ಇತ್ತು ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಹೇಳುತ್ತದೆ.
ಶ್ರೀ ರಾಮನು ಸೇತುವೆಗೆ 'ನಲ್ ಸೇತು' ಎಂದು ಹೆಸರು
ಶ್ರೀ ರಾಮನು ತನ್ನ ಸೈನ್ಯದೊಂದಿಗೆ ಲಂಕೆಯನ್ನು ಆಕ್ರಮಿಸಲು ಧನುಷ್ಕೋಡಿಯಿಂದ ಶ್ರೀಲಂಕಾಕ್ಕೆ ಸಮುದ್ರದ ಮೇಲೆ ಸೇತುವೆಯನ್ನು ನಿರ್ಮಿಸಿದನು. ಈ ಸೇತುವೆಯನ್ನು ನಲ್ ನ ಸಾರತ್ಯದಲ್ಲಿ 5 ದಿನಗಳಲ್ಲಿ ವಾನರಗಳು ನಿರ್ಮಿಸಿದರು. ವಾಲ್ಮೀಕಿಯ ರಾಮಾಯಣದಲ್ಲಿ, ಈ ಸೇತುವೆಯ ಉದ್ದ 100 ಯೋಜನಗಳು ಮತ್ತು ಅಗಲವು 10 ಯೋಜನಗಳು ಎನ್ನಲಾಗಿದೆ. ಗೀತಾ ಪ್ರೆಸ್ ಗೋರಖ್ಪುರ ಪ್ರಕಟಿಸಿದ ಶ್ರೀಮದ್ ವಾಲ್ಮೀಕಿ ರಾಮಾಯಣ-ಕಥಾ-ಸುಖ-ಸಾಗರ್ನಲ್ಲಿ, ಶ್ರೀ ರಾಮನು ಸೇತುವೆಗೆ 'ನಲ್ ಸೇತು' ಎಂದು ಹೆಸರಿಸಿದ್ದಾನೆ ಎಂದು ಹೇಳಲಾಗಿದೆ. ಶ್ರೀ ರಾಮನ ನಲ್ ಸೇತುವನ್ನು ಮಹಾಭಾರತದಲ್ಲಿಯೂ (Mahabharat) ಉಲ್ಲೇಖಿಸಲಾಗಿದೆ.
ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ (NASA) 1993 ರಲ್ಲಿ ಶ್ರೀಲಂಕಾದ ವಾಯುವ್ಯದಲ್ಲಿ ಧನುಷ್ಕೋಡಿ ಮತ್ತು ಪಂಬನ್ ನಡುವೆ ಸಮುದ್ರವಾಗಿ ಹೊರಹೊಮ್ಮಿದ 48 ಕಿ.ಮೀ ಅಗಲದ ಭೂಮಿಯ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿತು. ಇದರ ನಂತರ, ಭಾರತದಲ್ಲಿ ರಾಜಕೀಯ ವಿಪ್ಲವ ಪ್ರಾರಂಭವಾಯಿತು. ಸೇತುವೆಯಂತಹ ಈ ಭೂಪ್ರದೇಶವನ್ನು ರಾಮ ಸೇತು ಎಂದು ಕರೆಯಲಾಯಿತು.