Asianet Suvarna News Asianet Suvarna News

ರಾಮ ಮಂದಿರ ಆಯ್ತು, ಈಗ ನೂತನ ರಾಮ ಸೇತುಗೆ ಪ್ಲ್ಯಾನ್: ಭಾರತ - ಶ್ರೀಲಂಕಾ ನಡುವೆ ಶೀಘ್ರ 23 ಕಿ.ಮೀ. ಉದ್ದದ ಸಮುದ್ರ ಸೇತುವೆ!

23 ಕಿಮೀ ಉದ್ದದ ನೂತನ ರಾಮ ಸೇತು ಭಾರತದ ಧನುಷ್ಕೋಡಿಯಿಂದ ಶ್ರೀಲಂಕಾದ ತಲೈಮನ್ನಾರ್ ಅನ್ನು Palk Strait ಮೂಲಕ ಸಂಪರ್ಕಿಸುವ ರಸ್ತೆ/ರೈಲು ಸಮುದ್ರ ಸಂಪರ್ಕವಾಗಲಿದೆ.

central government plans 23 km sea bridge between india and sri lanka soon ash
Author
First Published Jan 23, 2024, 11:48 AM IST

ಚೆನ್ನೈ (ಜನವರಿ 23, 2024): ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಪ್ರಮುಖ ಉತ್ತೇಜನ ನೀಡುವಲ್ಲಿ, ಭಾರತ ಮತ್ತು ಶ್ರೀಲಂಕಾವನ್ನು ಸಂಪರ್ಕಿಸುವ ಸೇತುವೆಯ ನಿರ್ಮಾಣದ ಕೆಲಸವನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಪ್ರಾರಂಭಿಸಲಿದೆ. ತಮಿಳುನಾಡಿನ ಧನುಷ್ಕೋಡಿ ಮತ್ತು ಶ್ರೀಲಂಕಾದ ತಲೈಮನ್ನಾರ್ ಅನ್ನು ಸಂಪರ್ಕಿಸುವ ಸಮುದ್ರಕ್ಕೆ ಅಡ್ಡಲಾಗಿ 23 ಕಿಮೀ ಉದ್ದದ ಸೇತುವೆಯನ್ನು ನಿರ್ಮಿಸಲು ಸರ್ಕಾರವು ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

23 ಕಿಮೀ ಉದ್ದದ ನೂತನ ರಾಮ ಸೇತು ಭಾರತದ ಧನುಷ್ಕೋಡಿಯಿಂದ ಶ್ರೀಲಂಕಾದ ತಲೈಮನ್ನಾರ್ ಅನ್ನು Palk Strait ಮೂಲಕ ಸಂಪರ್ಕಿಸುವ ರಸ್ತೆ/ರೈಲು ಸಮುದ್ರ ಸಂಪರ್ಕವಾಗಲಿದೆ. ಸೇತುಸಮುದ್ರಂ ಯೋಜನೆ ಪರ್ಯಾಯವಾಗಿರುವ ಈ ನೂತನ ಸಮುದ್ರ ಸೇತುವೆ ಸಾರಿಗೆ ವೆಚ್ಚವನ್ನು 50 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ. ಮತ್ತು ಲಂಕಾ ದ್ವೀಪಕ್ಕೆ ಮುಖ್ಯ ಭೂ ಸಂಪರ್ಕವನ್ನು ಒದಗಿಸುತ್ತದೆ. ಬಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈ ಸಮುದ್ರ ಸೇತುವೆಯನ್ನು ನಿರ್ಮಿಸಲಿದೆ ಎಂದೂ ತಿಳಿದುಬಂದಿದೆ.

 

ಸಮುದ್ರದಲ್ಲಿ ತೇಲುತ್ತಿದ್ದ ‘ರಾಮ ಸೇತು’ ಮುಳುಗಲು ಕಾರಣವೇನು? ವಿಜ್ಞಾನಿಗಳು ತಿಳಿಸಿದ್ದಾರೆ ರಹಸ್ಯ

ಆರು ತಿಂಗಳ ಹಿಂದೆ ಆರ್ಥಿಕ ಮತ್ತು ತಾಂತ್ರಿಕ ಸಹಕಾರ ಒಪ್ಪಂದವನ್ನು ತೀರ್ಮಾನಿಸಲಾಗಿದ್ದು, ಇದು 40,000 ಕೋಟಿ ರೂಪಾಯಿಗಳ ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ., ಇದರಲ್ಲಿ ಹೊಸ ರೈಲು ಮಾರ್ಗಗಳು ಮತ್ತು ಎಕ್ಸ್‌ಪ್ರೆಸ್‌ವೇ ಒಳಗೊಂಡಿದ್ದು, ರಾಮಸೇತು ಕೇಂದ್ರ ಸ್ಥಾನದಲ್ಲಿ ಇರಲಿದೆ ಎಮದು ಹೇಳಲಾಗಿದೆ. ಹಾಗೂ, ಶೀಘ್ರದಲ್ಲೇ ಈ ಯೋಜನೆಯ ಕಾರ್ಯಸಾಧ್ಯತೆಯ ಅಧ್ಯಯನವನ್ನು ಪ್ರಾರಂಭಿಸಲಾಗುವುದು ಎಂದೂ ತಿಳಿದುಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ತಮಿಳುನಾಡಿನ ಧನುಷ್ಕೋಡಿ ಬಳಿ ರಾಮಸೇತುವಿನ ಆರಂಭದ ಸ್ಥಳವೆಂದು ಪರಿಗಣಿಸಲಾದ ಅರಿಚಲ್ ಮುನೈಗೆ ಭೇಟಿ ನೀಡಿದ್ದನ್ನು ಸ್ಮರಿಸಬಹುದಾಗಿದೆ.  

ರಾಮಸೇತು ಆರಂಭದ ಬಿಂದು ಅರಿಚಲ್ ಮುನೈಗೆ ಮೋದಿ ಭೇಟಿ; ಈ ಸ್ಥಳದಲ್ಲೇ ರಾವಣನ ವಧೆಗೆ ರಾಮ ಮಾಡಿದ ಪ್ರತಿಜ್ಞೆ

Sangam Days ಹಾಗೂ ಅಸಂಖ್ಯಾತ ತಮಿಳು ಪಠ್ಯಗಳಲ್ಲಿ ಮತ್ತು ತಮಿಳು ರಾಜರ ಅನೇಕ ಶಾಸನಗಳು/ತಾಮ್ರ ಫಲಕಗಳಲ್ಲಿ 'ರಾಮ ಸೇತು' ಉಲ್ಲೇಖವನ್ನು ಕಂಡುಕೊಳ್ಳುತ್ತದೆ. ರಾಮನಾಥಪುರಂ ಸೇತುಪತಿಗಳು ಈ ಸ್ಥಳದ ಬಗ್ಗೆ ಬಹಳ ಗೌರವ ಹೊಂದಿದ್ದು, ಅವರ ಎಲ್ಲಾ ಅನುದಾನಗಳು ಈ ಪವಿತ್ರ ಸ್ಥಳದಲ್ಲಿ 'ನೋಂದಣಿ' ಮಾಡಲಾಗಿದೆ. ಅಯೋಧ್ಯೆ ದೇಗುಲ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ಪ್ರಧಾನಿ ಮೋದಿ ತಮ್ಮ ಆಧ್ಯಾತ್ಮಿಕ ಪ್ರವಾಸವನ್ನು ಇಲ್ಲಿ ಅಂತ್ಯಗೊಳಿಸಿದರು.

Follow Us:
Download App:
  • android
  • ios