ವುಹಾನ್[ಫೆ.04]: ಸೋಶಿಯಲ್ ಮೀಡಿಯಾದಲ್ಲಿ ಹೃದಯ ಸ್ಪರ್ಶಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದು ನೋಡುಗರನ್ನು ಭಾವುಕರನ್ನಾಗಿಸಿದೆ. ವೃದ್ಧ ದಂಪತಿ ಕೊನೆಯುಸಿರೆಳೆಯುವುದಕ್ಕೂ ಮುನ್ನ ಪರಸ್ಪರ ಕೈ ಹಿಡಿದು ವಿದಾಯ ಹಾಡಿದ್ದಾರೆ. 80 ವರ್ಷಕ್ಕೂ ಅಧಿಕ ಪ್ರಾಯದ ಇಬ್ಬರೂ ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದರು. ಇಬ್ಬರೂ ಕೊನೆಯ ಕ್ಷಣದಲ್ಲಿ ಕೈ ಹಿಡಿದು ವಿದಾಯ ಹೇಳಿದಾಗ, ಪವರ ಪ್ರೀತಿ ಕಂಡ ವೈದ್ಯರು ಹಾಗೂ ದಾದಿಯರ ಕಣ್ಣಾಲಿಗಳು ತುಂಬಿ ಬಂದಿವೆ. ಈ ಟಿಕ್ ಟಾಕ್ ವಿಡಿಯೋ ಸದ್ಯ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ಕೊರೋನಾ ವೈರಸ್‌ಗೆ ಸಿಕ್ತು ಔಷಧಿ!: 48 ಗಂಟೆಯಲ್ಲಿ ರೋಗಿ ಗುಣಮುಖ?

ಟ್ವಿಟರ್ ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ವ್ಯಕ್ತಿ 'ದಂಪತಿ ಅಂದ್ರೆ ಏನು? ಕೊರೋನಾ ವೈರಸ್ ನಿಂದ ಬಳಲುತ್ತಿರುವ ವೃದ್ಧ ದಂಪತಿ ICUನಲ್ಲಿ ಪರಸ್ಪರ ವಿದಾಯ ಹೇಳಿದ್ದಾರೆ. ಬಹುಶಃ ಇದು ಇವರ ಕೊನೆಯ ಭೇಟಿ ಅನಿಸುತ್ತೆ' ಎಂದಿದ್ದಾರೆ. 

ಟ್ವಿಟರ್ ಬಳಕೆದಾರ ಜಿಯಾಂಗ್ ವಿ ಫೆಬ್ರವರಿ 3 ರಂದು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಬಳಿಕ ಈ ವಿಡಿಯೋ ವೈರಲ್ ಆಗಲಾರಂಭಿಸಿದೆ. ನೆಟ್ಟಿಗರನ್ನು ಭಾವುಕರನ್ನಾಗಿಸಿದ ಈ ವಿಡಿಯೋಗೆ ಹಲವಾರು ಕಮೆಂಟ್ ಗಳೂ ಬಂದಿವೆ. ಒಬ್ಬ ಬಳಕೆದಾರ 'ಈ ವಿಡಿಯೋ ನೋಡಿ ಬಹಳ ಕಳವಳವಾಗುತ್ತಿವೆ. ಪರಿಸ್ಥಿತಿ ನಿಯಂತ್ರಣದ ಹೊರಗಿದೆ ಎಂದೆನಿಸುತ್ತೆ. ವಿಡಿಯೋ ಶೇರ್ ಮಾಡಿರುವುದಕ್ಕೆ ಧನ್ಯವಾದಗಳು' ಎಂದಿದ್ದಾರೆ.

ಮತ್ತೊಬ್ಬ ಬಳಕೆದಾರ 'ನೋವು ಕೊಡುವ ಈ ವಿಡಿಯೋ, ಜೀವನದ ಕೊನೆಯವರೆಗೂ ಮುಗಿಯದ ಪ್ರೀತಿ' ಎಂದು ಬರೆದಿದ್ದಾರೆ. 

ಕೊರೋನಾ ಸೋಂಕಿತರಿಗಾಗಿ 10 ದಿನದಲ್ಲಿ ಆಸ್ಪತ್ರೆ ಕಟ್ಟಲಾರಂಭಿಸಿದ ಚೀನಾ!

ಚೀನಾದ ವುಹಾನ್ ನಲ್ಲಿ ಹುಟ್ಟಿಕೊಂಡ ಕೊರೋನಾ ವೈರಸ್ ಸದ್ಯ ವಿಶ್ವದ ನಾನಾ ಭಾಗಗಳಿಗೆ ಹರಡಿದೆ. ಚೀನಾದಲ್ಲಿ ಮೃತರ ಸಂಖ್ಯೆ 400ಕ್ಕೇರಿದ್ದರೆ, ಭಾರತದಲ್ಲಿ ಈವರೆಗೆ ಒಟ್ಟು ಮೂವರು ಕೊರೋನಾ ವೈರಸ್ ನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.