ಕೊರೋನಾ ಸೋಂಕಿತರಿಗಾಗಿ 10 ದಿನದಲ್ಲಿ ಆಸ್ಪತ್ರೆ ಕಟ್ಟಲಾರಂಭಿಸಿದ ಚೀನಾ!

ಹತ್ತೇ ದಿನದಲ್ಲಿ ಆಸ್ಪತ್ರೆ ಕಟ್ಟಲು ಕೆಲಸ ಆರಂಭಿಸಿದ ಚೀನಾ| ಕೊರೋನಾ ಸೋಂಕಿತರ ಚಿಕಿತ್ಸೆಗೆ ಸೌಲಭ್ಯ| ಈ ಹಿಂದೆ ಒಂದೇ ವಾರದಲ್ಲಿ ಆಸ್ಪತ್ರೆ ಕಟ್ಟಿತ್ತು

Chinese city plans to build coronavirus hospital in days

ಬೀಜಿಂಗ್‌[ಜ.25]: ಕೊರೋನಾವೈರಸ್‌ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ತುರ್ತಾಗಿ ಚಿಕಿತ್ಸೆ ನೀಡಲು ಹತ್ತೇ ದಿನದಲ್ಲಿ ಆಸ್ಪತ್ರೆಯೊಂದನ್ನು ನಿರ್ಮಾಣ ಮಾಡಲು ಚೀನಾ ಮುಂದಾಗಿದೆ.

ಭಾರತಕ್ಕೂ ಕೊರೋನಾ ವೈರಸ್‌ ಲಗ್ಗೆ? 80 ಜನರ ಮೇಲೆ ನಿಗಾ!

ಕೊರೋನಾವೈರಸ್‌ ಮೊದಲು ಹಬ್ಬಿದ ತಾಣವಾಗಿರುವ ವುಹಾನ್‌ನಲ್ಲಿ ರೋಗಿಗಳಿಗೆ ಬೆಡ್‌ಗಳ ಕೊರತೆ ಉಂಟಾಗಿದೆ ಎಂಬುದು ಗೊತ್ತಾಗುತ್ತಿದ್ದಂತೆ ಆಸ್ಪತ್ರೆ ನಿರ್ಮಾಣ ಪ್ರಾರಂಭವಾಗಿದೆ. 1000 ಹಾಸಿಗೆ ಸಾಮರ್ಥ್ಯದ, 25000 ಚದರ ಮೀಟರ್‌ ವಿಸ್ತೀರ್ಣದ ಆಸ್ಪತ್ರೆ ಫೆ.3ರಂದು ಬಳಕೆಗೆ ಸಿದ್ಧವಾಗಲಿದೆ ಎಂದು ಸರ್ಕಾರಿ ಸುದ್ದಿವಾಹಿನಿಗಳು ತಿಳಿಸಿವೆ.

ಇಷ್ಟೊಂದು ತರಾತುರಿಯಲ್ಲಿ ಚೀನಾ ಆಸ್ಪತ್ರೆ ನಿರ್ಮಾಣ ಮಾಡುತ್ತಿರುವುದು ಇದೇ ಮೊದಲಲ್ಲ. 2003ರಲ್ಲಿ ಸಾರ್ಸ್‌ ರೋಗ ಚೀನಾವನ್ನು ಬಾಧಿಸಿದಾಗ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಬೀಜಿಂಗ್‌ ಹೊರವಲಯದಲ್ಲಿ ಕೇವಲ ಒಂದು ವಾರದಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡಿತ್ತು. ಪ್ರಿಫ್ಯಾಬ್ರಿಕೇಟೆಡ್‌ ವಿಧಾನ ಬಳಸಿ ಆಸ್ಪತ್ರೆ ನಿರ್ಮಿಸಲಾಗಿತ್ತು. ಅದೇ ವಿಧಾನದಡಿ ವುಹಾನ್‌ನಲ್ಲೂ ಆಸ್ಪತ್ರೆ ತಲೆ ಎತ್ತಲಿದೆ ಎಂದು ವರದಿಗಳು ತಿಳಿಸಿವೆ.

ಮಾರಕ ಕೊರೋನಾ ವೈರಸ್‌ಗೆ ಚೀನಾ ತಲ್ಲಣ! ಮತ್ತಷ್ಟು ಬಲಿ

Latest Videos
Follow Us:
Download App:
  • android
  • ios