* ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ* ಪಾಕಿಸ್ತಾನದಲ್ಲೀಗ ಚಹಾಗೂ ಕುತ್ತು* ಚಹಾ ಹೆಚ್ಚು ಸೇವಿಸದಂತೆ ತನ್ನ ದೇಶದ ಜನರಲ್ಲಿ ಮನವಿ ಮಾಡಿದ ಸಚಿವ
ಇಸ್ಲಮಾಬಾದ್(ಜೂ.15): ಕೆಟ್ಟ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಆಹಾರ ಪದಾರ್ಥಗಳ ಬೆಲೆ ನಿರಂತರವಾಗಿ ಏರುತ್ತಿದೆ. ಏತನ್ಮಧ್ಯೆ, ಪಾಕಿಸ್ತಾನವು ಈಗ ಚಹಾದ ಬಳಕೆಯನ್ನು ಕಡಿಮೆ ಮಾಡಲು ತನ್ನ ನಾಗರಿಕರನ್ನು ಒತ್ತಾಯಿಸಿದೆ. ಪಾಕಿಸ್ತಾನದ ಯೋಜನೆ ಮತ್ತು ಅಭಿವೃದ್ಧಿ ಸಚಿವ ಅಹ್ಸಾನ್ ಇಕ್ಬಾಲ್ ಅಲ್ಲಿನ ಜನರಿಗೆ ಕನಿಷ್ಠ ಚಹಾ ಕುಡಿಯುವಂತೆ ಕೇಳಿದ್ದಾರೆ. ಪಾಕಿಸ್ತಾನದಲ್ಲಿ ಬೇಳೆಕಾಳುಗಳು, ಸಕ್ಕರೆ, ತರಕಾರಿಗಳು ಮತ್ತು ಹಣ್ಣುಗಳ ಬೆಲೆ ಗಗನಕ್ಕೇರಿದೆ ಎಂಬುವುದು ಉಲ್ಲೇಖನೀಯ. ಇದರಿಂದಾಗಿ ಸಾರ್ವಜನಿಕರ ಸ್ಥಿತಿ ಇನ್ನಷ್ಟು ಹದಗೆಡುತ್ತಿದೆ.
ಚಹಾ ಕುಡಿಯದಂತೆ ತಡೆಯುತ್ತಿದೆ ಪಾಕ್, ಕಾರಣ ಹೀಗಿದೆ
ಪಾಕಿಸ್ತಾನದ ಸಚಿವ ಅಹ್ಸಾನ್ ಇಕ್ಬಾಲ್ ಪ್ರಕಾರ, ನಾವು ಹೊರಗಿನಿಂದ ಚಹಾವನ್ನು ಆಮದು ಮಾಡಿಕೊಳ್ಳಬೇಕು. ಪಾಕಿಸ್ತಾನದ ಜನರು ಚಹಾ ಸೇವನೆಯನ್ನು ಕಡಿಮೆ ಮಾಡಿದರೆ, ಅದು ಸರ್ಕಾರದ ಆಮದು ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದೀಗ ಸಾಲ ಮಾಡಿ ಹೊರಗಿನಿಂದ ಚಹಾ ಆಮದು ಮಾಡಿಕೊಳ್ಳುತ್ತೇವೆ. ಚಹಾ ಸೇವನೆಯಲ್ಲಿನ ಕಡಿತವು ನಮ್ಮ ಆಮದು ವೆಚ್ಚವನ್ನು ಕಡಿಮೆ ಮಾಡುತ್ತದೆ, ಇದು ಆರ್ಥಿಕ ರಚನೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂಬುವುದು ಲೆಕ್ಕಾಚಾರವಾಗಿದೆ.
ವರ್ತಕರು ಹಾಗೂ ಸಾರ್ವಜನಿಕರಿಗೆ ಸಚಿವರ ಮನವಿ
ಆರ್ಥಿಕ ಬಿಕ್ಕಟ್ಟಿನಿಂದ ಪಾಕಿಸ್ತಾನ ಚೇತರಿಸಿಕೊಳ್ಳಲು ಸಹಾಯ ಮಾಡುವಂತೆ ಪಾಕಿಸ್ತಾನದ ಯೋಜನೆ ಮತ್ತು ಅಭಿವೃದ್ಧಿ ಸಚಿವ ಅಹ್ಸಾನ್ ಇಕ್ಬಾಲ್ ಉದ್ಯಮಿಗಳು ಮತ್ತು ದೇಶದ ಜನರನ್ನು ವಿನಂತಿಸಿದ್ದಾರೆ. ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಜತೆಗೆ ವಿದ್ಯುತ್ ಸಮಸ್ಯೆಯೂ ತಲೆದೋರುತ್ತಿದೆ ಎಂದರು. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ವ್ಯಾಪಾರಸ್ಥರು ರಾತ್ರಿ 8.30ರವರೆಗೆ ಅಂಗಡಿಗಳನ್ನು ಮುಚ್ಚಬೇಕು.
41 ವಸ್ತುಗಳ ಆಮದು ಮೇಲೆ 2 ತಿಂಗಳ ನಿಷೇಧ
ವರದಿಗಳ ಪ್ರಕಾರ, ಪಾಕಿಸ್ತಾನ ಸರ್ಕಾರವು ತನ್ನ ಆಮದು ವೆಚ್ಚವನ್ನು ಕಡಿಮೆ ಮಾಡಲು ಎರಡು ತಿಂಗಳ ಕಾಲ 41 ವಸ್ತುಗಳ ಆಮದನ್ನು ನಿಷೇಧಿಸಿದೆ. ಆದರೆ, ಈ ಆಮದು ನಿಷೇಧದಿಂದ ಬೊಕ್ಕಸಕ್ಕೆ ಅಷ್ಟಾಗಿ ಮೊತ್ತ ಸೇರ್ಪಡೆಯಾಗಲಿಲ್ಲ. ಈ ಕಾರಣದಿಂದಾಗಿ, ಪಾಕಿಸ್ತಾನವು ತನ್ನ ಆಮದು ಬಿಲ್ ಅನ್ನು ಕಡಿಮೆ ಮಾಡುವಲ್ಲಿ ಸುಮಾರು $ 600 ಮಿಲಿಯನ್ ಲಾಭವನ್ನು ಪಡೆದಿದೆ.
ಪಾಕಿಸ್ತಾನದಲ್ಲಿ ಹಣದುಬ್ಬರ:
| ಆಹಾರ ಮತ್ತು ಪಾನೀಯ | ಬೆಲೆ (ಪಾಕಿಸ್ತಾನಿ ರೂಪಾಯಿಗಳಲ್ಲಿ) |
| ಹಾಲು 1 ಲೀಟರ್ | 126 ರೂ |
| ಪನೀರ್ 1 ಕೆಜಿ | 996 ರೂ |
| ಸಕ್ಕರೆ 1 ಕೆಜಿ | 100 ರೂ |
| ಗೋಧಿ 1 ಕೆಜಿ | 50-60 ರೂ |
| ಹೆಸರು ಬೇಳೆ 1 ಕೆಜಿ | 260 ರೂ |
| ಕಡ್ಲೆ ಬೇಳೆ 1 ಕೆಜಿ | 160 ರೂ |
| ಚಹಾ 1 ಕೆಜಿ | 900 ರೂ |
| ಟೀ ಕಪ್‌ಗೆ | 30-40 ರೂ |
