ಹೊಸ ವರ್ಷ ಪಾರ್ಟಿಯಲ್ಲಿದ್ದ ಜನರಿಗೆ ಭೂಕಂಪದ ಶಾಕ್, ನೋಡಾ ನಗರದಲ್ಲಿ 6.0 ತೀವ್ರತೆ ಕಂಪನ, ಇದೇ ವೇಳೆ ಭಾರಿ ಭೂಕಂಪದ ಎಚ್ಚರಿಕೆಯನ್ನು ನೀಡಲಾಗಿದೆ. ಸಂಭ್ರಮಾಚರಣೆಯಲ್ಲಿದ್ದವರು ಆತಂಕಗೊಂಡಿದ್ದಾರೆ.
ನೋಡಾ (ಡಿ.31) ಹೊಸ ವರ್ಷದ ಸಂಭ್ರಮಾಚರಣೆ ಎಲ್ಲೆಡೆ ಸದ್ದು ಮಾಡುತ್ತಿದೆ. ಪಾರ್ಟಿಗಳು ಜೋರಾಗಿ ನಡೆಯುತ್ತಿದೆ. ಇದರ ನಡುವೆ ಜಪಾನ್‌ನಲ್ಲಿ ಭಾರಿ ಭೂಕಂಪ ಸಂಭವಿಸಿದೆ. ಜಪಾನ್‌ನ ನೋಡಾ ನಗರದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪನದಲ್ಲಿ 6.0 ತೀವ್ರತೆ ದಾಖಲಾಗಿದೆ. ಭೂಕಂಪ ಭಾರಿ ಎಚ್ಚರಿಕೆ ನಡುವೆ 6.0 ತೀವ್ರತೆಯಿಂದ ಭೂಮಿ ಕಂಪಿಸಿದೆ. ಮನೆ, ಕಟ್ಟಡಗಳು ಅಲುಗಾಡಿದೆ. ಜನರು ಭಯಗೊಂಡ ಹೊರಗೆ ಬಂದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಸಾವು ನೋವಿನ ಮಾಹಿತಿಯಿಲ್ಲ.
ಹೊಸ ವರ್ಷ ಸ್ವಾಗತಿಸುವ ಅರ್ಧ ಗಂಟೆ ಮೊದಲು ಭೂಕಂಪ
ಜಪಾನ್‌ಲ್ಲಿ ಇಂದು (ಡಿ.31) ರಾತ್ರಿ 11.30ರ ವೇಳೆಗೆ (ಜಪಾನ್ ಸಮಯ) ಭೂಮಿ ಕಂಪಿಸಿದೆ. ಟೋಕಿಯೋ ಸೇರಿದಂತೆ ಜಪಾನ್ ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದ ಬೆನ್ನಲ್ಲೇ ಭೂಮಿ ಕಂಪಿಸಿದೆ. ಹೊಸ ವರ್ಷವನ್ನು ಜಪಾನ್ ಜನರು ಬರಮಾಡಿಕೊಳ್ಳಲು ಕೇವಲ 24 ನಿಮಿಷಗಳು ಮಾತ್ರ ಬಾಕಿ ಇತ್ತು. ಈ ವೇಳೆ ಭೂಮಿ ಕಂಪಿಸಿ ಆತಂಕದ ವಾತಾವರಣ ನಿರ್ಮಾಾಣವಾಗಿದೆ.
ನೋಡಾ ನಗರದಿಂದ ಪೂರ್ವ ದಿಕ್ಕಿನಲ್ಲಿ 91 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದು. 13.1 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ. ನೋಡಾ ನಗರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದೆ. ನೋಡಾ ನಗರದಲ್ಲಿ ಸುನಾಮಿ ಎಚ್ಚರಿಕೆ ನೀಡಿರುವ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಕಾರಣ ಜಪಾನ್‌ನಲ್ಲ ಸುನಾಮಿ ಎಚ್ಚರಿಕೆ ನೀಡಿದ ಸಂದರ್ಭಗಳಲ್ಲಿ ಅನಾಹುತಗಳು ಸಂಭವಿಸಿದೆ. ಡಿಸೆಂಬರ್ ತಿಂಗಳ ಆರಂಬದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಉತ್ತರ ಜಪಾನ್ ಭಾಗದಲ್ಲಿ ಭೂಕಂಪ ಸಂಭವಿಸಿ 23 ಜನರು ಗಾಯಗೊಂಡಿದ್ದರು.
ನೋಡಾ ನಗರದಲ್ಲಿ ಸಂಭವಿಸಿದ ಭೂಕಂಪನ ಕರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಮನೆಗಳು ಅಲುಗಾಡಿತು. ಗೋಡೆಗಳು ಬಿರುಕು ಬಿಟ್ಟಿತು. ಮೇಲ್ಚಾವಣಿಗಳು ಕುಸಿತ ಕಂಡಿತು. ಕುಟುಂಬ ಸದಸ್ಯರನ್ನು ಎಬ್ಬಿಸಿ ಹೊರಗೋಡಿದ್ದೇವೆ. ಹಲವರು ಹೊರಬಂದಿದ್ದಾರೆ. ಕಟ್ಟಡಗಳು ಅಲುಗಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಲೇಹ್ ಲಡಾಖ್‌ನಲ್ಲಿ 3.4 ತೀವ್ರತಯೆ ಕಂಪನ
ಭಾರತದ ಲೇಹ್ ಲಡಾಖ್‌ನಲ್ಲಿ ಇಂದು ಸಂಜೆ 7.35ರ ವೇಳೆಗೆ ಲಘುವಾಗಿ ಭೂಮಿ ಕಂಪಿಸಿದೆ. ಹೊಸ ವರ್ಷದ ಸಂಭ್ರಮಾಚರಣೆಗಳು ಆರಂಭಗೊಂಡ ಬೆನ್ನಲ್ಲೇ ಲಡಾಖ್‌ನಲ್ಲಿ ಭೂಮಿ ಕಂಪಿಸಿತ್ತು. ಆದರೆ ಇದು ಲುಘು ಭೂಕಂಪನವಾಗಿತ್ತು. ಹೀಗಾಗಿ ಯಾವುದೇ ಪರಿಣಾಮ ಬೀರಿಲ್ಲ.


