ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ, 950 ಜನರ ಸಾವು, ಸರ್ಕಾರದ ಹೇಳಿಕೆ!
ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ಅಂದಾಜು 250ಕ್ಕೂ ಅಧಿಕ ಜನರ ಸಾವಾಗಿದೆ. 1 ಸಾವಿರಕ್ಕೂ ಅಧಿಕ ಮಂದಿ ಗಾಯಾಳುವಾಗಿರುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ. ಪಾಕಿಸ್ತಾನದ ಕೆಲವು ಭಾಗದಲ್ಲೂ ಭೂಕಂಪದ ಪರಿಣಾಮ ಕಂಡುಬಂದಿದೆ.
ಕಾಬೂಲ್ (ಜೂನ್ 22): ಅಫ್ಘಾನಿಸ್ತಾನದಲ್ಲಿ(Afghanistan) ಬುಧವಾರ ಬೆಳ್ಳಬೆಳಗ್ಗೆ ಭಾರೀ ಭೂಕಂಪ (earthquake) ಸಂಭವಿಸಿದ್ದು, 950 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಫ್ಘಾನಿಸ್ತಾನ ಸರ್ಕಾರ ತಿಳಿಸಿದ್ದು, ಸಾವು ನೋವಗಳ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಅಂದಾಜು 1 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಭೂಕಂಪದ ಪ್ರಭಾವ ಪಾಕಿಸ್ತಾನದ (Pakistan) ಕೆಲ ಭಾಗಗಳಲ್ಲೂ ಕಂಡು ಬಂದಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.1ರಷ್ಟು ದಾಖಲಾಗಿದೆ. ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಆಗ್ನೇಯದಲ್ಲಿದೆ ಎಂದು ಹೇಳಲಾಗಿದೆ. ಸ್ಥಳೀಯ ಸುದ್ದಿ ಸಂಸ್ಥೆಗಳ ಆರಂಭಿಕ ವರದಿಯ ಪ್ರಕಾರ, ಭೂಕಂಪದಲ್ಲಿ 255 ಜನರ ಸಾವು ಕಂಡಿದ್ದಾರೆ ಎನ್ನಲಾಗಿತ್ತು.
ಬುಧವಾರದ ಭೂಕಂಪವು 2002 ರ ನಂತರದ ಅತ್ಯಂತ ಮಾರಣಾಂತಿಕ ಭೂಕಂಪ ಎನಿಸಿದೆ. ಇದು ಪಾಕಿಸ್ತಾನದ ಗಡಿಯ ಸಮೀಪವಿರುವ ಆಗ್ನೇಯ ನಗರವಾದ ಖೋಸ್ಟ್‌ನಿಂದ ಸುಮಾರು 44 ಕಿಮೀ (27 ಮೈಲುಗಳು) ಅಪ್ಪಳಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಸಿ) ತಿಳಿಸಿದೆ. ದೃಢಪಡಿಸಿದ ಸಾವುಗಳಲ್ಲಿ ಹೆಚ್ಚಿನವು ಪೂರ್ವ ಪ್ರಾಂತ್ಯದ ಪಕ್ಟಿಕಾದಲ್ಲಿವೆ, ಅಲ್ಲಿ 255 ಜನರು ಸಾವನ್ನಪ್ಪಿದ್ದಾರೆ ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಖೋಸ್ಟ್ ಪ್ರಾಂತ್ಯದಲ್ಲಿ 25 ಮಂದಿ ಸಾವನ್ನಪ್ಪಿದ್ದು, 90 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭೂಕಂಪದ ಗರಿಷ್ಠ ತೀವ್ರತೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದಾಗ್ಯೂ, ರಿಕ್ಟರ್ ಮಾಪಕದಲ್ಲಿ 7.0 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪವನ್ನು ಮಧ್ಯಮ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಅಫ್ಘಾನಿಸ್ತಾನದಲ್ಲಿ ಭೂಕಂಪನವು ಇದಕ್ಕಿಂತ ಕಡಿಮೆ ತೀವ್ರತೆಯನ್ನು ಹೊಂದಿತ್ತು. ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಇಸ್ಲಾಮಾಬಾದ್ ಸೇರಿದಂತೆ ಇತರ ನಗರಗಳಲ್ಲಿ ಭೂಕಂಪನದ ಅನುಭವವಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಭೂಕಂಪದ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಭೂಕಂಪದ ಈ ಕಂಪನಗಳು ಕೆಲವು ಸೆಕೆಂಡುಗಳ ಕಾಲ ಅನುಭವಿಸಿದವು ಎಂದು ಜನರು ಬರೆದಿದ್ದಾರೆ. ಆದರೆ ಇದರಿಂದ ಜನರು ಭಯಭೀತರಾಗಿ ಸುರಕ್ಷಿತ ಸ್ಥಳಗಳಿಗೆ ಓಡಲಾರಂಭಿಸಿದರು.
ಕಳೆದ ಶುಕ್ರವಾರವೂ ಪಾಕಿಸ್ತಾನದಲ್ಲಿ ಕೆಲ ಭಾಗಗಳಲ್ಲಿ ಭೂಕಂಪದ ಅನುಭವವಾಗಿತ್ತು. ನಂತರ ಇಸ್ಲಾಮಾಬಾದ್, ಪೇಶಾವರ್, ರಾವಲ್ಪಿಂಡಿ ಮತ್ತು ಮುಲ್ತಾನ್‌ನಲ್ಲಿ ಈ ಕಂಪನದ ಅನುಭವವಾಗಿದೆ. ಈ ಕಂಪನಗಳು ಫೈಸಲಾಬಾದ್, ಅಬೋಟಾಬಾದ್, ಸ್ವಾತ್, ಬುನೇರ್, ಕೊಹತ್ ಮತ್ತು ಮಲ್ಕಂಡಿಯಲ್ಲಿಯೂ ಸಂಭವಿಸಿದೆ. ಮತ್ತೊಂದೆಡೆ, ಈ ಭೂಕಂಪದ ಪ್ರಭಾವವು 500 ಕಿಮೀ ವ್ಯಾಪ್ತಿಯೊಳಗೆ ಇತ್ತು ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ. ಈ ಭೂಕಂಪದಿಂದಾಗಿ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತದಲ್ಲಿ ಕಂಪನದ ಅನುಭವವಾಗಿದೆ.
ಸರ್ಕಾರದ ವಕ್ತಾರ ಬಿಲಾಲ್ ಕರಿಮಿ ಈ ಕುರಿತಾಗಿ ಟ್ವೀಟ್ ಮಾಡಿದ್ದು, "ದುರದೃಷ್ಟವಶಾತ್, ನಿನ್ನೆ ರಾತ್ರಿ ಪಕ್ಟಿಕಾ ಪ್ರಾಂತ್ಯದ ನಾಲ್ಕು ಜಿಲ್ಲೆಗಳಲ್ಲಿ ತೀವ್ರ ಭೂಕಂಪ ಸಂಭವಿಸಿದೆ. ಇದರಲ್ಲಿ ನಮ್ಮ ದೇಶದ ನೂರಾರು ಜನರು ಸಾವಿಗೀಡಾಗಿದ್ದು, ಗಾಯಗೊಂಡರು ಮತ್ತು ಸಾಕಷ್ಟು ಮನೆಗಳು ನಾಶವಾದವು. ಹೆಚ್ಚಿನ ವಿನಾಶವನ್ನು ತಡೆಗಟ್ಟಲು ಈ ಪ್ರದೇಶಕ್ಕೆ ತಂಡಗಳನ್ನು ಕಳುಹಿಸಲು ನಾವು ಎಲ್ಲಾ ತುರ್ತು ಏಜೆನ್ಸಿಗಳಿಗೆ ಮನವಿ ಮಾಡುತ್ತೇವೆ' ಎಂದು ಬರೆದುಕೊಂಡಿದ್ದಾರೆ.
Earthquake ಕೋವಿಡ್ ಭೀತಿಯಲ್ಲಿರುವ ಭಾರತಕ್ಕೆ ಮತ್ತೊಂದು ಆಘಾತ, ಲಡಾಖ್‌ನಲ್ಲಿ ಭೂಕಂಪನ!
ಪಕ್ಟಿಕಾ ಪ್ರಾಂತ್ಯದಲ್ಲಿ ಸಂಭವಿಸಿದ 6 ತೀವ್ರತೆಯ ಕಂಪನದ ಬಗ್ಗೆ ಮಾಹಿತಿಯು ಸಾಕಷ್ಟು ವಿರಳವಾಗಿದೆ. ಕಳೆದ ವರ್ಷ ಅಮೆರಿಕದ ಸೇನೆಯು ಅಫ್ಘಾನಿಸ್ತಾನವನ್ನು ತೊರೆದ ಬಳಿಕ ಕೆಲವೇ ದಿನದಲ್ಲಿ ತಾಲಿಬಾನ್ ದೇಶವನ್ನು ಸ್ವಾಧೀನಪಡಿಸಿಕೊಂಡಿತ್ತು. ಇದರಿಂದಾಗಿ ಅಫ್ಘಾನಿಸ್ತಾನದಲ್ಲಿ ಆಗುವ ಯಾವುದೇ ಬೆಳವಣಿಗೆಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಸಿಗುತ್ತಿಲ್ಲ. ಇದರಿಂದಾಗಿ 38 ಮಿಲಿಯನ್ ಜನರಿರುವ ಈ ದೇಶಕ್ಕೆ ಯಾವುದೇ ಪರಿಹಾರ ಪ್ರಯತ್ನಗಳನ್ನು ಸಂಕೀರ್ಣವಾಗಿದೆ.
Japan Earthquake ಜಪಾನ್ ರಾಜಧಾನಿ ಟೋಕಿಯೋ ಬಳಿ ಭಾರಿ ಪ್ರಮಾಣದ ಭೂಕಂಪ, ಸುನಾಮಿ ಎಚ್ಚರಿಕೆ!
ಭೂಕಂಪಕ್ಕೆ ಕಾರಣಗಳೇನು: ಭೂಮಿಯೊಳಗೆ 7 ಫಲಕಗಳು ನಿರಂತರವಾಗಿ ತಿರುಗುತ್ತವೆ. ಈ ಫಲಕಗಳು ಹೆಚ್ಚು ಘರ್ಷಣೆಯಾಗುವ ಸ್ಥಳಗಳನ್ನು ದೋಷ ರೇಖೆಯ ವಲಯಗಳು ಎಂದು ಕರೆಯಲಾಗುತ್ತದೆ. ಪದೇ ಪದೇ ಆಗುವ ಘರ್ಷಣೆಯಿಂದಾಗಿ, ಫಲಕಗಳ ಮೂಲೆಗಳು ತಿರುಚಿಕೊಳ್ಳಲು ಆರಂಭಿಸುತ್ತವೆ.. ಒತ್ತಡವು ಹೆಚ್ಚಾಗಲು ಪ್ರಾರಂಭಿಸಿದಾಗ, ಫಲಕಗಳು ಒಡೆಯಲು ಪ್ರಾರಂಭಿಸುತ್ತವೆ. ಅವುಗಳ ಸ್ಥಗಿತದಿಂದಾಗಿ, ಒಳಗಿನ ಶಕ್ತಿಯು ಹೊರಬರಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ. ಈ ಅಡಚಣೆಯ ನಂತರ ಭೂಕಂಪ ಸಂಭವಿಸುತ್ತದೆ.