Asianet Suvarna News Asianet Suvarna News

Earthquake ಕೋವಿಡ್ ಭೀತಿಯಲ್ಲಿರುವ ಭಾರತಕ್ಕೆ ಮತ್ತೊಂದು ಆಘಾತ, ಲಡಾಖ್‌ನಲ್ಲಿ ಭೂಕಂಪನ!

  • ಉತ್ತರ ಭಾರತದ ಭಾಗದಲ್ಲಿ ಭೂಕಂಪನ 
  • ಲಡಾಖ್‌ನಲ್ಲಿ 4.2 ರಷ್ಟು ತೀವ್ರತೆ ದಾಖಲು
  • ಲಘು ಭೂಕಂಪನದಿಂದ ಭಯಗೊಂಡ ಜನ
Ladakh reports earthquake 4 2 magnitude on Richter scale No loss of life ckm
Author
Bengaluru, First Published Apr 24, 2022, 9:33 PM IST

ಲಡಾಖ್(ಏ.24): ಕೊರೋನಾ ವೈರಸ್ 4ನೇ ಅಲೆ ಭೀತಿಯಲ್ಲಿರುವ ಭಾರತಕ್ಕೆ ಇದೀಗ ಮತ್ತೊಂದು ಆತಂಕ ಎದುರಾಗಿದೆ. ಉತ್ತರ ಭಾರತದ ಅದರಲ್ಲೂ ಲಡಾಖ್‌ನಲ್ಲಿ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 4.2 ರಷ್ಟು ತೀವ್ರತೆ ದಾಖಲಾಗಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಇಂದು(ಏ.24) ಮಧ್ಯಾಹ್ನ 2.53ಕ್ಕೆ ಭೂಕಂಪನವಾಗಿದೆ. 36.02 ಡಿಗ್ರಿ ಉತ್ತರ ಅಕ್ಷಾಂಶದಿಂದ 77.33 ಡಿಗ್ರಿ ಪೂರ್ವ ರೇಖಾಂಶದಲ್ಲಿ ಸುಮಾರು 30 ಕಿಲೋಮೀಟರ್ ಆಳದಲ್ಲಿ ಭೂಕಂಪನ ಕೇಂದ್ರಬಿಂದು ಎಂದು ಅಧಿಕಾರಿಗಳು ಹೇಳಿದ್ದಾರೆ. ಲಡಾಖ್ ಭೂಕಂಪನದ ರಾಷ್ಟ್ರೀಯ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ. ಏಪ್ರಿಲ್ 18 ರಂದು ಜಮ್ಮು ಕಾಶ್ಮೀರದ ಕಿಶ್ತ್ವಾರ ಪ್ರಾಂತ್ಯದಲ್ಲಿ 3.4ರಷ್ಟು ಭೂಕಂಪನವಾಗಿತ್ತು. 

 

 

ಜಮ್ಮು ಮತ್ತು ಕಾಶ್ಮೀರ, ಲಡಾಖ್ ಪ್ರಾಂತ್ಯದಲ್ಲಿ ಕೆಲ ದಿನಗಳ ಅಂತರದಲ್ಲೇ ಭೂಕಂಪನ ದಾಖಲಾಗಿದೆ.  ಇದು ಜನರ ಆತಂಕಕ್ಕೆ ಕಾರಣವಾಗಿದೆ.

ವಿಜಯಪುರ ಸುತ್ತ ಮುತ್ತಲಿನ ಭಾಗದಲ್ಲಿ ಲಘು ಭೂಕಂಪನ

ಮಾರ್ಚ್ ತಿಂಗಳಲ್ಲೂ ಕೆಲವೆಡೆ ಭೂಕಂಪನ ದಾಖಲಾಗಿತ್ತು. ಅದರಲ್ಲೂ ಜಪಾನ್‌ನಲ್ಲಿ 7.3ರಷ್ಟು ಭೂಕಂಪನ ದಾಖಲಾಗಿತ್ತು. ಜಪಾನಿನ ಫುಕುಶಿಮಾ ತೀರದಲ್ಲಿ ಬುಧವಾರ 7.3 ತೀವ್ರತೆಯ ಭೂಕಂಪನವಾಗಿದ್ದು, ಸುನಾಮಿ ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಲರ್ಟ್‌ ಘೋಷಣೆ ಮಾಡಲಾಗಿದೆ. ಭೂಕಂಪದಿಂದಾಗಿ ಸದ್ಯದ ಮಟ್ಟಿಗೆ ಯಾವುದೇ ಸಾವು ನೋವು, ಆಸ್ತಿ ಹಾನಿ ವರದಿಯಾಗಿಲ್ಲ. ಆದರೆ ಇದರಿಂದ ಸುಮಾರು 20 ಲಕ್ಷ ಜನರು ವಿದ್ಯುತ್‌ ಸಂಪರ್ಕ ಕಳೆದುಕೊಂಡಿದ್ದಾರೆ. ಸಮುದ್ರ ತಳದ ಸುಮಾರು 60 ಕಿಮೀ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಜಪಾನಿನ ಹವಾಮಾನ ಇಲಾಖೆ ತಿಳಿಸಿದೆ. 2011ರಲ್ಲಿ ಉತ್ತರ ಜಪಾನಿನ ಇದೇ ಭಾಗದಲ್ಲಿ 9.0 ತೀವ್ರತೆಯ ಭೂಕಂಪದಿಂದಾಗಿ ಸುನಾಮಿ ಬಂದಿತ್ತು. ಇದು ಪರಮಾಣು ದುರಂತಕ್ಕೂ ಕಾರಣವಾಗಿತ್ತು.

ಮಿಜೋರಾಂನಲ್ಲಿ 5.6 ತೀವ್ರತೆಯ ಭೂಕಂಪ ಯಾವುದೇ ಆನಾಹುತ ಇಲ್ಲ
ಮಿಜೋರಾಂ ರಾಜಧಾನಿ ಐಜ್ವಾಲ್‌ ಸೇರಿದಂತೆ ಹಲವೆಡೆ ಜನವರಿ ತಿಂಗಳಲ್ಲಿ ರಿಕ್ಟರ್‌ ಮಾಪಕದಲ್ಲಿ 5.6 ತೀವ್ರತೆ ಇದ್ದ ಭೂಕಂಪ ಸಂಭವಿಸಿದೆ. ಜೊತೆಗೆ ನೆರೆಯ ಅಸ್ಸಾಂ, ಮಣಿಪುರ ಉತ್ತರ ಬಂಗಾಳದಲ್ಲಿ ಸಹ ಭೂಮಿ ನಡುಗಿದ ಅನುಭವವಾಗಿದೆ. ಮಧ್ಯಾಹ್ನ 3:42 ರ ಸುಮಾರಿಗೆ, ಸುಮಾರು 60 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ. ಇಂಡೋ-ಮ್ಯಾನ್ಮಾರ್‌ ಗಡಿ ಪ್ರದೇಶದ ಚಂಫೈನಿಂದ 58. ಕಿ.ಮೀ ಆಗ್ನೇಯ ಭಾಗದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ. ಸದ್ಯಕ್ಕೆ ಯಾವುದೇ ಸಾವು-ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ.

ವಿಜಯಪುರದಲ್ಲಿ ಭೂಕಂಪನ, 2.9 ರಷ್ಟು ತೀವ್ರತೆ ದಾಖಲು, ಬೆಚ್ಚಿಬಿದ್ದ ಜನತೆ..!

ವಿಜ​ಯ​ಪು​ರ​ದಲ್ಲಿ ಮತ್ತೆ ಭೂಕಂಪ​ನ
ಜಿಲ್ಲೆಯಲ್ಲಿ ಮತ್ತೆ ಭೂಕಂಪನವಾಗಿದೆ. ಜಿಲ್ಲೆಯ ಕೆಲ ಭಾಗದಲ್ಲಿ ಭಾನುವಾರ ಬೆಳಗ್ಗೆ 9.15ಕ್ಕೆ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪನದಲ್ಲಿ 3 ತೀವ್ರತೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಅಲಿಯಾಬಾದ್‌, ನಿಂಗನಾಳ, ಭರಟಗಿ, ಗೂಗದಡ್ಡಿ ಭಾಗದಲ್ಲಿ ಭೂಮಿ ನಡುಗಿದ್ದು, ಜನತೆ ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಭೂಮಿಯ 5 ಕಿ.ಮೀ. ಆಳದಲ್ಲಿ ಭೂಕಂಪನ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದಿಂದ ಮಾಹಿತಿ ಲಭ್ಯವಾಗಿದೆ.

ಕಳೆದ ಹಲವಾರು ದಿನಗಳಿಂದ ಶಾಂತವಾಗಿದ್ದ ಭೂಕಂಪನ ಪುನಃ ಸದ್ದು ಮಾಡಲು ಆರಂಭಿಸಿದೆ. ಭಾನು​ವಾ​ರ ಬೆಳಗ್ಗೆ 9.15 ಗಂಟೆಗೆ ಭೂಮಿ ಕಂಪಿಸಿದ ಅನುಭವವಾಗಿದೆ. 2.9 ತೀವ್ರತೆ ಭೂಕಂಪನ ಜಿಲ್ಲೆಯಲ್ಲಿ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಜಯಪುರ ನಗರವು ಸೇರಿದಂತೆ ಅಲಿಯಾಬಾದ್‌, ನಿಂಗನಾಳ, ಭರಟಗಿ, ಗೂಗದಡ್ಡಿ ಸೇರಿ ಹಲವು ಗ್ರಾಮಗಳಲ್ಲಿ ಭೂಕಂಪನ ಅನುಭವವಾಗಿರುವ ಬಗ್ಗೆ ಜನತೆ ಮಾಹಿತಿ ಹಂಚಿಕೊಂಡಿದ್ದಾರೆ. ಭೂಮಿಯ 5 ಕಿ.ಮೀ ಆಳದಲ್ಲಿ ಸಂಭವಿಸಿದ ಭೂಕಂಪನ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದಿಂದ ಮಾಹಿತಿ ಲಭ್ಯವಾಗಿದೆ.
 

Follow Us:
Download App:
  • android
  • ios