ಮ್ಯಾರಥಾನ್‌ನಲ್ಲಿ ಓಡಿ ಪದಕ ಗಳಿಸಿದ ಬಾತುಕೋಳಿ: ವಿಡಿಯೋ ವೈರಲ್
- ಜನರ ಜೊತೆ ಮ್ಯಾರಥಾನ್‌ನಲ್ಲಿ ತಾನು ಓಡಿದ ಬಾತುಕೋಳಿ
- ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
- ಬಾತುಕೋಳಿಗೆ ಮೆಡಲ್ ಹಾಕಿ ಅಭಿನಂದನೆ
ಮನುಷ್ಯರ ಜೊತೆ ಬಾತುಕೋಳಿಯೊಂದು ಮ್ಯಾರಥಾನ್ ಓಡಿದ್ದು, ಪದಕವನ್ನು ಕೂಡ ಗಳಿಸಿದೆ. ಹಾಗಂತ ಇದು ಸುಳ್ಳು ಸುದ್ದಿಯಲ್ಲ ಇದು ನಿಜವಾಗಿಯೂ ನಡೆದ ಘಟನೆಯಾಗಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಚ್ಚರಿ ಎನಿಸಿದರು ನಿಜವಾದ ವಿಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು @Thund3rB0lt ಅಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಕಾಣಿಸುವಂತೆ ಬಾತುಕೋಳಿಯೊಂದು ಮ್ಯಾರಥಾನ್ ಮಾಡುತ್ತಿರುವ ಇತರರೊಂದಿಗೆ ಸ್ಪರ್ಧೆಗೆ ಇಳಿದಂತೆ ತಾನು ರಭಸವಾಗಿ ಓಡುತ್ತಿದೆ.
ಮ್ಯಾರಥಾನ್ ಅಂತಿಮ ಗೆರೆ ದಾಟುತ್ತಿದ್ದಂತೆ ಬಾತುಕೋಳಿಗೆ ಮಹಿಳೆಯೊಬ್ಬರು ಕುಡಿಯಲು ನೀರು ಕೊಡುತ್ತಾರೆ. ಈ ವೇಳೆ ಮ್ಯಾರಥಾನ್ ಮುಗಿಸಿದ ಬಾತುಕೋಳಿಯ ಕೊರಳಿಗೆ ಒಬ್ಬರು ಪದಕವನ್ನು ತಂದು ಹಾಕುತ್ತಾರೆ. ಈ ವಿಡಿಯೋವನ್ನು ಎರಡು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಬಾಲಕನಿಗೆ ಚಪ್ಪಲಿ ಎತ್ತಿಕೊಟ್ಟ 'ಸ್ಮಾರ್ಟ್' ಬಾತುಕೋಳಿ
2019ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ (San Francisco) ಮೈಲಾ ಅಗುಯಿಲಾ ಎಂಬಾಕೆ ತಮ್ಮ ಫೇಸ್ ಬುಕ್ ನಲ್ಲಿ ಬಾತುಕೋಳಿಯ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಸದ್ಯ ಇದು ಎಲ್ಲೆಡೆ ವೈರಲ್ ಆಗುತ್ತಿದೆ. 'ಸ್ಮಾರ್ಟ್' ಬಾತುಕೋಳಿಯ ವಿಡಿಯೋ ನೋಡಿದವರೆಲ್ಲಾ, ಅಚ್ಚರಿ ವ್ಯಕ್ತಪಡಿಸಿದ್ದು, ವಿಡಿಯೋವನ್ನು ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ನಡೆಯುತ್ತಾ ಓಡುತ್ತಾ ನಾಡು ಸುತ್ತುವ ಮ್ಯಾರಥಾನ್ ರನ್ನರ್!
ಹೌದು ಅಗುಯಿಲಾ ಎಂಬುವವರು ಹಳ್ಳಿಯೊಂದಕ್ಕೆ ಪ್ರಯಾಣಿಸುತ್ತಿದ್ದಾಗ ಕಂಡು ಬಂದ ಈ ದೃಶ್ಯವನ್ನು ಮೊಬೈಲ್ ನಲ್ಲೆ ಸೆರೆ ಹಿಡಿದಿದ್ದಾರೆ. ಅಲ್ಲದೇ ಫೇಸ್ ಬುಕ್ ನಲ್ಲಿ ಇತರರೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಬಾಲಕನೊಬ್ಬ ಪುಟ್ಟದಾದ ಗುಡ್ಡವೊಂದರ ಮೇಲೆ ಕುಳಿತ್ತಿದ್ದು, ಕೆಳಗಿರುವ ಪುಟ್ಟ ಬಾತುಕೋಳಿ ಕೆಳಗೆ ಬಿದ್ದಿದ್ದ ಬಾಲಕನ ಚಪ್ಪಲಿಯನ್ನು ತನ್ನ ಕೊಕ್ಕಿನಲ್ಲಿ ಎತ್ತಿ ಕೊಡುವ ಪ್ರಯತ್ನ ನಡೆಸುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ದಿಕ್ಕು ತಪ್ಪಿ ರಸ್ತೆಯಲ್ಲಿ ತಿರುಗಾಡುತ್ತಿದ್ದ ಬಾತುಕೋಳಿಗೆ ನೆರವಾದ ಮಹಿಳೆ
ಬಾತುಕೋಳಿ (Duck) ಮೂರು ಬಾರಿ ಚಪ್ಪಲಿಯನ್ನು ತನ್ನ ಕೊಕ್ಕಿನಲ್ಲಿ ಎತ್ತಿ ಬಾಲಕನಿಗೆ ತಂದು ಕೊಡಲು ಯತ್ನಿಸುತ್ತದೆ. ಆಧರೆ ಇನ್ನೇನು ಚಪ್ಪಲಿ ಬಾಲಕನ ಕೈ ಸೇರಲಿದೆ ಎನ್ನುವಷ್ಟರಲ್ಲಿ ಬಿದ್ದು ಬಿಡುತ್ತದೆ. ಆದರೆ ಹಠ ಬಿಡದ ಬಾತುಕೋಳಿ ಮತ್ತೆ ಮತ್ತೆ ಒಪ್ರಯತ್ನಿಸಿದ್ದು, ನಾಲ್ಕನೇ ಬಾರಿ ಚಪ್ಪಲಿಯನ್ನು ಸೇಫಾಗಿ ಬಾಲಕನ ಕೈ ತಲುಪಿಸುವಲ್ಲಿ ಯಶಸ್ವಿಯಾಗುತ್ತದೆ. ದಸದ್ಯ ಈ ವಿಡಿಯೋ ನೆಟ್ಟಿಗರ ಮನ ಕದ್ದಿದೆ. ಬಾತುಕೋಳಿಯ ಸ್ಮಾರ್ಟ್ ನೆಸ್ ಗೆ ಫಿದಾ ಆಗಿರುವ ಸೋಶಿಯಲ್ ಮೀಡಿಯಾ (social Media) ಬಳಕೆದಾರರು, ಅದ್ಭುತ ಎಂದು ಕಮೆಂಟ್ ಮಾಡಿದ್ದಾರೆ.
ಬಾತುಕೋಳಿ ಹಿಂಡು ರಸ್ತೆ ದಾಟಲು ಸಂಚಾರ ಸ್ಥಗಿತ
ಪ್ರಾಣಿಗಳು ವಾಹನ ಸವಾರರಿಗೆ ಅಡ್ಡಿಪಡಿಸುವುದು ಎಲ್ಲಡೆ ಸಾಮಾನ್ಯ. ಆದರೆ, 2019ರಲ್ಲಿ ಕೇರಳದ ಅಲಪುಳದಲ್ಲಿ ಅಪರೂಪದ ಸನ್ನಿವೇಶವೊಂದು ಎಲ್ಲರ ಗಮನ ಸೆಳೆದಿತ್ತು. ನೂರಾರು ಬಾತುಕೋಳಿಗಳ ಹಿಂಡು ರಸ್ತೆಯಲ್ಲಿ ನಿಧಾನವಾಗಿ ನಡೆದು ಹೋಗಿದ್ದರಿಂದ ಅವು ರಸ್ತೆ ದಾಟುವವರೆಗೂ ವಾಹನ ಸವಾರರು ತಾಳ್ಮೆಯಿಂದ ಕಾಯಬೇಕಾಗಿ ಬಂತು. ಬಾತುಕೋಳಿಗಳ ಹಿಂಡು ರಸ್ತೆ ದಾಟುವ ವಿಡಿಯೋ ಇದೀಗ ವೈರಲ್ ಆಗಿದೆ.