ಅಮೆರಿಕ ಇತಿಹಾಸದಲ್ಲೇ ಅತ್ಯಂತ ಸವಾಲಿನ ಸೇನಾ ರಕ್ಷಣಾ ಕಾರ್ಯಾಚರಣೆ, ಇರಾನ್ ನುಗ್ಗಿದ ಫೈಟರ್ ಜೆಟ್, ಇರಾನ್ ಹಾಗೂ ಅಮೆರಿಕ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಮೆರಿಕ ಫೈಟೆರ್ ಜೆಟ್ ಪತನದ ಬಳಿಕ ಮಹತ್ವದ ಘಟನೆ ನಡೆದಿದೆ. 

ವಾಶಿಂಗ್ಟನ್ (ಏ.05) ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಪ್ರತಿ ದಿನ ಯುದ್ಧ ತೀವ್ರಗೊಳ್ಳುತ್ತಿದೆ. ಫೈಟರ್ ಜೆಟ್ ಮೂಲಕ ದಾಳಿ ಮಾಡುತ್ತಿದ್ದ ಅಮೆರಿಕಗೆ ಇರಾನ್ ತಿರುಗೇಟು ನೀಡಿದೆ. ಅಮೆರಿಕದ ಫೈಟರ್ ಜೆಟ್ ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿದೆ. ಪತನಗೊಂಡ ವಿಮಾನದ ಪೈಲೆಟ್ ರಕ್ಷಣಾ ಕಾರ್ಯಾಚರಣೆಗೆ ತೆರಳಿದ ಅಮೆರಿಕ ವಿಮಾನದ ಮೇಲೆ ದಾಳಿ ನಡೆದಿದೆ. ಈ ದಾಳಿಯಲ್ಲಿ ವಿಮಾನದ ಪೈಲೆಟ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಈ ಹೋರಾಟದ ನಡುವೆ ಅಮೆರಿಕ ಫೈಟರ್ ಜೆಟ್ ವಿಮಾನದಿಂದ ಜೀವಂತವಾಗಿ ಇರಾನ್‌ನಲ್ಲಿ ಇಳಿದ ಪೈಲೆಟ್‌ನ್ನು ಅಮೆರಿಕ ರಕ್ಷಣೆ ಮಾಡಿದೆ ಎಂದು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಡು ದಿನದಿಂದ ನಾಪತ್ತೆಯಾಗಿದ್ದ ಪೈಲೆಟ್ ರಕ್ಷಣೆ

ಅಮೆರಿಕ ಫೈಟರ್ ಜೆಟ್ ಪತನಗೊಂಡ ಬಳಿಕ ಪೈಲೆಟ್ ನಾಪತ್ತೆಯಾಗಿದ್ದರು. ಕಳೆದ ಎರಡು ದಿನದಿಂದ ಪೈಲೆಟ್‌ಗಾಗಿ ಅಮೆರಿಕ ತಲೆಕೆಡಿಸಿಕೊಂಡಿತ್ತು. ಇತ್ತ ಇರಾನ್ ಪೈಲೆಟ್ ಕುರಿತು ಕೆಲ ಸ್ಫೋಟಕ ಮಾಹಿತಿ ನೀಡಿದೆ. ಪೈಲೆಟ್ ಜೀವಂತವಾಗಿ ಇರಾನ್ ವಶದಲ್ಲಿದ್ದಾರೆ ಎಂದಿತ್ತು. ಎರಡು ದಿನದಿಂದ ನಾಪತ್ತೆಯಾಗಿದ್ದ ಪೈಲೆಟ್‌ನ್ನು ಅಮೆರಿಕ ಯಶಶ್ವಿ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕ ಇತಿಹಾಸದಲ್ಲಿ ಅತ್ಯಂತ ರೋಚಕ ಕಾರ್ಯಾಚರಣೆ

ಪೈಲೆಟ್ ರಕ್ಷಣೆಗಾಗಿ ಅಮೆರಿಕ ತನ್ನ ಇತಿಹಾಸದಲ್ಲಿ ಅತ್ಯಂತ ರೋಚಕ ಕಾರ್ಯಾಚರಣೆ ನಡೆಸಿದೆ ಎಂದು ಟ್ರಂಪ್ ಹೇಳಿದ್ದಾರೆ. ನಮಗೆ ಆತ ಸಿಕ್ಕಿದ್ದಾನೆ. ಅಮೆರಿಕ ಜನರೆ, ಕಳೆದ ಕೆಲ ಗಂಟೆಗಳಿಂದ ನಾವು ನಾಪತ್ತೆಯಾಗಿದ್ದ ಪೈಲೆಟ್‌ಗಾಗಿ ಆಪರೇಶನ್ ಆರಂಭಿಸಿದ್ದೆವು. ಅಮೆರಿಕ ಇತಿಹಾಸದಲ್ಲಿ ಇದು ಅತ್ಯಂತ ಸಾಹಸಮಯ ರಕ್ಷಣಾ ಕಾರ್ಯಾಚರಣೆಯಾಗಿತ್ತು. ನಮ್ಮ ಓರ್ವ ಸಾಹಸಿ ಪೈಲೆಟ್‌ಗಾಗಿ ನಾವು ಈ ಕಾರ್ಯಾಚರಣೆ ನಡೆಸಿದ್ದೆವು. ಅತ್ಯಂತ ಗೌರವಯುತ ಈ ಪೈಲೆಟ್ ಇದೀಗ ಸುರಕ್ಷಿತವಾಗಿದ್ದಾರೆ ಎಂದು ತಮ್ಮ ಟ್ರುತ್ ಸೋಶಿಯಲ್ ಮೂಲಕ ಹೇಳಿಕೊಂಡಿದ್ದಾರೆ.

ನಾಪತ್ತೆಯಾಗಿದ್ದ ಅಮೆರಿಕನ್ ಪೈಲೆಟ್ ಪತ್ತೆ ಹಚ್ಚಿ ರಕ್ಷಿಸಲು ಅಮೆರಿಕ ಹಲವು ಫೈಟರ್ ಜೆಟ್ ಸೇರಿದಂತೆ ಶಸ್ತ್ರಸಜ್ಜಿತ ವಿಮಾನಗಳನ್ನು ಕಳುಹಿಸಿತ್ತು. ಇರಾನ್ ಗಡಿಯಲ್ಲಿ ಶುತ್ರಗಳ ಎದುರೇ ನಮ್ಮ ಯೋಧ ಸಿಲುಕಿಕೊಂಡಿದ್ದರು. ಕ್ಷಣ ಕ್ಷಣಕ್ಕೂ ನಮ್ಮ ಪೈಲೆಟ್ ಜೀವ ಆತಂಕದಿಂದ ಕೂಡಿತ್ತು. ಇಧರ ನಡುವೆ ನಮ್ಮ ಸೇನೆ ಅತ್ಯಂತ ಸಹಾಸಮಯ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ ಎಂದು ಅಮೆರಿಕ ಸೇನೆ ಹೇಳಿಕೊಂಡಿದೆ.