ಪ್ರಧಾನಿ ಮೋದಿಗೆ ವಿಶ್ವ ನಾಯಕರಿಂದ ಜನ್ಮದಿನ ಶುಭಾಶಯ/ ಮೋದಿ ಮಹಿಮೆ ಕೊಂಡಾಡಿದ ಜಗತ್ತು/ ಅಮೆರಿಕದ ಅಧ್ಯಕ್ಷರ ಮಾತಿಗೆ ಮೋದಿ ಹೇಳಿದ ಧನ್ಯವಾದ

ನವದೆಹಲಿ(ಸೆ. 18) ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಗೆ ಧನ್ಯವಾದ ಹೇಳಿದ್ದಾರೆ. ಭಾರತ ಮತ್ತು ಅಮೆರಿಕದ ನಡುವಣ ಸ್ನೇಹ ಸಂಬಂಧ ಇನ್ನಷ್ಟು ಗಟ್ಟಿಯಾಗಿ ಇರಲಿದೆ ಎಂದು ಹೇಳಿದ್ದಾರೆ.

ಮಾನವೀಯ ನೆಲೆಗಟ್ಟಿನಲ್ಲಿ ಎರಡು ರಾಷ್ಟ್ರಗಳ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಪ್ರಧಾನಿ ಮೋದಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದ ಡೋನಾಲ್ಡ್ ಟ್ರಂಪ್ ಆತ್ಮೀಯ ಸ್ನೇಹಿತ ಮತ್ತು ಅದ್ಭುತ ನಾಯಕ ಎಂದು ಮೋದಿಯನ್ನು ಶ್ಲಾಘಿಸಿದ್ದರು. 

ಕಾಲೆಳೆದ ಮಿಲಿಂದ್‌ಗೆ ಮೋದಿ ಕಟ್ಟ ಭರ್ಜರಿ ರಿಯಾಕ್ಷನ್

ಕಳೆದ ಫೆಬ್ರವರಿಯಲ್ಲಿ ಭಾರತಕ್ಕೆ ಆಗಮಿಸಿದ್ದ ಪೋಟೋ ಒಂದನ್ನು ಟ್ರಂಪ್ ಅಪ್ ಲೋಡ್ ಮಾಡಿ ಶುಭಾಶಯ ಹೇಳಿದ್ದರು. ಅಹಮದಾಬಾದಿನಲ್ಲಿ ನಡೆದ ಕಾರ್ಯಕ್ರಮದ ಪೋಟೋ ಅದಾಗಿದ್ದು ಮೋದಿ ಅವರ ಕೈ ಹಿಡಿದ ಪೋಟೋ ಜನಮೆಚ್ಚುಗೆ ಗಳಿಸಿಕೊಂಡಿತ್ತು.

ಟ್ರಂಪ್ ಮಾತ್ರವಲ್ಲದೆ ವಿಶ್ವ ನಾಯಕರಾದ ರಷ್ಯಾ ಅಧ್ಯಕ್ಷ ವಾಲ್ಡಿಮೀರ್ ಪುಟಿನ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಜರ್ಮನಿಯ ಛಾನ್ಸಲರ್ ಅಂಜೆಲಾ ಮಾರ್ಕೆಲ್ ಪ್ರಧಾನಿ ಮೋದಿಗೆ ಜನ್ಮದಿನದ ಶುಭಾಶಯ ಕೋರಿದ್ದರು. 

Scroll to load tweet…