ಸ್ಕಿಪ್ಪಿಂಗ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ ಶ್ವಾನ: ವೈರಲ್ ವಿಡಿಯೋ
ಶ್ವಾನ ಸ್ಕಿಪ್ಪಿಂಗ್ ಮಾಡುತ್ತಿರುವ ವಿಡಿಯೋವನ್ನು ಸ್ವತಃ ಗಿನ್ನೆಸ್ ವಿಶ್ವದಾಖಲೆ ಸಂಸ್ಥೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮನುಷ್ಯರು ವಿಶ್ವ ದಾಖಲೆ ಮಾಡುವುದನ್ನು ನೀವು ನೋಡಿರಬಹುದು. ದಾಖಲೆ ಮಾಡುವುದಕ್ಕಾಗಿ, ಗಿನ್ನೆಸ್ ಪುಟದಲ್ಲಿ ಹೆಸರು ದಾಖಲಿಸಿಕೊಳ್ಳುವುದಕ್ಕಾಗಿ ಏನೇನೋ ಸಾಹಸಗಳನ್ನು ಮನುಷ್ಯರು ಮಾಡುವುದನ್ನು ನೀವು ಕೇಳಿರಬಹುದು. ಆದರೆ ಇಲ್ಲೊಂದು ಕಡೆ ಶ್ವಾನವೊಂದು ಗಿನ್ನೆಸ್ ದಾಖಲೆ ಮಾಡಿದೆ. ಹಿಂಗಾಲಿನಲ್ಲಿ ಅತ್ಯಧಿಕ ಸ್ಕಿಪ್ಪಿಂಗ್ ಮಾಡುವ ಮೂಲಕ ಶ್ವಾನವೊಂದು ವಿಶ್ವದಾಖಲೆ ನಿರ್ಮಿಸಿದ್ದು, ಅಚ್ಚರಿಗೆ ಕಾರಣವಾಗಿದೆ. ಶ್ವಾನ ಸ್ಕಿಪ್ಪಿಂಗ್ ಮಾಡುತ್ತಿರುವ ವಿಡಿಯೋವನ್ನು ಸ್ವತಃ ಗಿನ್ನೆಸ್ ವಿಶ್ವದಾಖಲೆ ಸಂಸ್ಥೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಕಾಣಿಸುವಂತೆ ನಾಯಿಯೊಂದು ಮನುಷ್ಯನ ಜೊತೆಯಲ್ಲಿ ಹಗ್ಗವನ್ನು ಜಿಗ್ಗಿಯುತ್ತ ಸ್ಕಿಪ್ಪಿಂಗ್ ಮಾಡುತ್ತಿದೆ. ಅಂದಹಾಗೆ ಈ ನಾಯಿಯ ಹೆಸರು ಬಾಲು (Balu) ಆಗಿದ್ದು, ಇದು ತನ್ನ ಮಾಲೀಕ ವೋಲ್ಫ್ಗ್ಯಾಂಗ್ ಲಾಯೆನ್ಬರ್ಗರ್ (Wolfgang Lauenburger) ಅವರ ಜೊತೆ ನಿರಂತರ 30 ಸೆಕೆಂಡ್‌ಗಳ ಕಾಲ ಸ್ಕಿಪ್ಪಿಂಗ್ ಮಾಡಿ ವಿಶ್ವದಾಖಲೆ ನಿರ್ಮಿಸಿದೆ. ಗಿನ್ನೆಸ್ ವಿಶ್ವದಾಖಲೆಯ ವೆಬ್‌ಸೈಟ್‌ನಲ್ಲಿ ಬರೆದಿರುವಂತೆ ಶ್ವಾನ ಬಾಲು 30 ಸೆಕೆಂಡ್‌ಗಳಲ್ಲಿ 32 ಬಾರಿ ಸ್ಕಿಪ್ಪಿಂಗ್ ಮಾಡಿದೆ. 2022ರ ಜುಲೈನಲ್ಲಿ ಬಾಲು ಮತ್ತು ಅದರ ಮಾಲೀಕ ವೋಲ್ಫ್ಗ್ಯಾಂಗ್ ಲಾಯೆನ್‌ಬರ್ಗರ್ ಅವರು ಈ ಸಾಧನೆ ಮಾಡಿದ್ದಾರೆ.
ಇವರಿಬ್ಬರು ಜರ್ಮನಿಯವರಾಗಿದ್ದು(Germany), ಇಬ್ಬರು ಕಠಿಣ ಪರಿಶ್ರಮದಿಂದ ತರಬೇತಿ ಪಡೆದು ಈ ಸಾಧನೆ ಮಾಡಿದ್ದಾರೆ. 30 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, 20 ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಶ್ವಾನದ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ನಾಯಿಗಾಗಿ ನಾಯಿ ಮಾಲೀಕನನ್ನೇ ಕಿಡ್ನ್ಯಾಪ್ ಮಾಡಿದ ಖದೀಮರು
ಅತೀ ದುಬಾರಿ ಶ್ವಾನ ಖರೀದಿಸಿದ ಬೆಂಗಳೂರಿನ ವ್ಯಕ್ತಿ
ಇನ್ಮೇಲೆ ಮನುಷ್ಯರನ್ನು ನಾಯಿ ಎಂದು ಬೈಯುವುದಕ್ಕೆ ಬಳಸುವಂತಿಲ್ಲ. ಯಾಕೆಂದರೆ ಇತ್ತೀಚೆಗೆ ನಾಯಿಗಿರುವ ಬೆಲೆ ಮನುಷ್ಯನಿಗಿಲ್ಲ. ಹೀಗೆ ಹೇಳುವುದಕ್ಕೆ ಕಾರಣ ಈ 20 ಕೋಟಿ ಬಾಳುವ ದುಬಾರಿ ಶ್ವಾನ. ಇತ್ತೀಚೆಗೆ ಮನುಷ್ಯರಿಗಿಂತ ನಾಯಿಗೆ ಬೆಲೆ ಜಾಸ್ತಿ, ಅದರಲ್ಲೂ ಮಹಾನಗರಗಳಲ್ಲಿ ಒಳ್ಳೆಯ ತಳಿಯ ನಾಯಿಗಳನ್ನು ಸಾಕವುದು ಟ್ರೆಂಡ್ ಆಗಿದೆ. ಅದರಲ್ಲೂ ನಮ್ಮ ಉದ್ಯಾನನಗರಿಯ ಜನರಲ್ಲಿ ಉತ್ತಮ ತಳಿಯ ಶ್ವಾನಗಳ ವ್ಯಾಮೋಹ ಹೆಚ್ಚಾಗುತ್ತಿದೆ. ಶ್ವಾನವನ್ನು ಕರೆದುಕೊಂಡು ಬೀದಿಯಲ್ಲಿ ವಾಕಿಂಗ್ ಹೋಗುವುದು ಫ್ಯಾಷನ್ ಆಗಿದೆ. ಉದ್ಯಾನಗರಿಯಲ್ಲಿ ವಾಸವಿರುವ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಗಣ್ಯರು ಸೇರಿದಂತೆ ಜನ ಸಾಮಾನ್ಯರು ಕೂಡ ನಾಯಿ ಸಾಕುವುದನ್ನು ಟ್ರೆಂಡ್ ಆಗಿಸಿಕೊಂಡಿದ್ದಾರೆ. ಇದರ ಮಧ್ಯೆ ಈ 20 ಕೋಟಿ ಮೌಲ್ಯದ ಶ್ವಾನ ಟಾಕ್ ಆಫ್ ದಿ ಟೌನ್ ಆಗ್ತಿದೆ.
ತೋಳದಂತೆ ಕಾಣಿಸಲು 18 ಲಕ್ಷ ವೆಚ್ಚ ಮಾಡಿದ ವ್ಯಕ್ತಿ
ನಟ, ಕಡಬಮ್ ಕೆನಲ್ ಎಂಬ ವೆಬ್‌ಸೈಟ್ ಹಾಗೂ ಭಾರತೀಯ ಶ್ವಾನ ತಳಿ ಸಾಕಾಣೆಕಾರರ ಸಂಘದ ಅಧ್ಯಕ್ಷರೂ ಆಗಿರುವ ಸತೀಶ್ ಎಂಬುವವರು ಇಷ್ಟೊಂದು ದುಬಾರಿ ಬೆಲೆಯ ಶ್ವಾನವನ್ನು ಖರೀದಿಸಿದ್ದಾರೆ. ಕಕೇಶಿಯನ್ ಶೆಫರ್ಡ್ (Caucasian Shepherd) ಎಂಬ ಬಹಳ ಅಪರೂಪದ ಹಾಗೂ ಅಷ್ಟೇ ದುಬಾರಿ ಶ್ವಾನವನ್ನು ಖರೀದಿಸಿದ್ದಾರೆ. ಇದೊಂದು ಗಾರ್ಡಿಯನ್ ಶ್ವಾನವಾಗಿದ್ದು, ಸಾಮಾನ್ಯವಾಗಿ ರಷ್ಯಾ (Russia), ಟರ್ಕಿ(Turkey), ಅರ್ಮೇನಿಯಾ( Armenia), ಸರ್ಕಾಸಿಯಾ (Circassia), ಹಾಗೂ ಜಾರ್ಜಿಯಾ( Georgia)ದಲ್ಲಿ ಕಾಣಲು ಸಿಗುವುದು. ಆದರೆ ಭಾರತದಲ್ಲಿ ಈ ತಳಿಯ ಶ್ವಾನ ಕಾಣಲು ಸಿಗುವುದು ತೀರಾ ಅಪರೂಪ.
ಈ ತಳಿಯ ಶ್ವಾನಗಳು ಅತೀ ಬುದ್ಧಿವಂತ ಪ್ರಾಣಿಗಳಾಗಿದ್ದು, ಭಯವಿಲ್ಲದ ತುಂಬಾ ಆತ್ಮವಿಶ್ವಾಸದ ಹಾಗೂ ಬೋಲ್ಡ್, ಆಗಿರುವ ಶ್ವಾನಗಳಾಗಿವೆ. ನೋಡಲು ತುಂಬಾ ಬೃಹತ್ ಆಕಾರವಾಗಿದ್ದು, ತುಂಬಾ ರೋಮದಿಂದ ಕೂಡಿರುತ್ತವೆ. ಸುಮಾರು 10 ರಿಂದ 12 ವರ್ಷಗಳ ಕಾಲ ಜೀವಿತಾವಧಿಯನ್ನು ಹೊಂದಿವೆ. ಅಮೆರಿಕನ್ ಕೆನ್ನೆಲ್ ಕ್ಲಬ್ ಪ್ರಕಾರ, ಈ ಕಕೇಶಿಯನ್ ಶೆಫರ್ಡ್ ತಳಿಯ ಶ್ವಾನಗಳನ್ನು ಶತಮಾನಗಳಿಂದಲೂ ಆಸ್ತಿಯನ್ನು ಕಾಯುವುದಕ್ಕೆ, ದೊಡ್ಡ ದೊಡ್ಡ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲು ಸೇರಿದಂತೆ ಹಲವು ರಕ್ಷಣಾತ್ಮಕ ಕಾರ್ಯಗಳಿಗೆ ಬಳಸಲಾಗುತ್ತಿತ್ತು.