Asianet Suvarna News Asianet Suvarna News

ಟ್ರಾಫಿಕ್‌ನಲ್ಲಿ ಮಕ್ಕಳ ರಸ್ತೆ ದಾಟಿಸುತ್ತೆ ಈ ಶ್ವಾನ... ನೋಡಿ ವೈರಲ್ ವಿಡಿಯೋ

ಇಲ್ಲೊಂದು ಶ್ವಾನ ಮಕ್ಕಳು ರಸ್ತೆ ದಾಟುವ ಸಮಯದಲ್ಲಿ ವಾಹನಗಳು ಮುಂದೆ ಬರದಂತೆ ಜೋರಾಗಿ ಬೊಗಳುತ್ತಾ ಮಕ್ಕಳು ರಸ್ತೆ ದಾಟುವವರೆಗೆ ರಸ್ತೆಯಲ್ಲೇ ಅತ್ತಿತ್ತ ಓಡಾಡುತ್ತದೆ. ಈ ಶ್ವಾನದ ಸುಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

dog helps kids to cross the road watch viral video akb
Author
Bangalore, First Published Jul 31, 2022, 1:56 PM IST

ಶ್ವಾನಗಳು ಮನುಷ್ಯರ ಬಹಳ ಅಚ್ಚುಮೆಚ್ಚಿನ ಪ್ರಾಣಿಗಳು, ಇದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಹಲವು ನಿದರ್ಶನಗಳಿವೆ. ಶ್ವಾನಗಳ ಬುದ್ಧಿವಂತಿಕೆಯ ಮುದ್ದಾದ ಸಾಕಷ್ಟು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಶ್ವಾನ ಮಕ್ಕಳು ರಸ್ತೆ ದಾಟುವ ಸಮಯದಲ್ಲಿ ವಾಹನಗಳು ಮುಂದೆ ಬರದಂತೆ ಜೋರಾಗಿ ಬೊಗಳುತ್ತಾ ಮಕ್ಕಳು ರಸ್ತೆ ದಾಟುವವರೆಗೆ ರಸ್ತೆಯಲ್ಲೇ ಅತ್ತಿತ್ತ ಓಡಾಡುತ್ತದೆ. ಈ ಶ್ವಾನದ ಸುಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಅವನೀಶ್‌ ಶರಣ್ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರಿಪಬ್ಲಿಕ್‌ ಆಫ್ ಜಾರ್ಜಿಯಾದ ನಗರ ಬಟುಮಿಯಲ್ಲಿ ಕಂಡು ಬಂದ ದೃಶ್ಯ ಇದಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಈ ಸುಂದರ ವಿಡಿಯೋ ನೋಡುಗರನ್ನು ಭಾವುಕರನ್ನಾಗಿಸುತ್ತಿದೆ. ಹಲವರು ಶ್ವಾನದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳು ರಸ್ತೆ ದಾಟುತ್ತಿರುವಾಗಲೇ ವೇಗವಾಗಿ ಬರುತ್ತಿರುವ ಕಾರುಗಳನ್ನು ನೋಡಿ ಜೋರಾಗಿ ಬೊಗಳುವ ಶ್ವಾನ ಅವುಗಳನ್ನು ನಿಲ್ಲಿಸುವ ಯತ್ನ ಮಾಡುತ್ತದೆ. ಹಾಗಂತ ಇದು ಸಾಕಿದ ನಾಯಿ ಅಲ್ಲವಂತೆ ಇದೊಂದು ಬೀದಿ ನಾಯಿ ಎಂದು ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ನಾಯಿಗೆ ಎಷ್ಟೊಂದು ಬುದ್ಧಿವಂತಿಕೆ ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮನುಷ್ಯರಿಂತ ಈ ಶ್ವಾನ ಎಷ್ಟೋ ಮೇಲು ಎಂದು ಜನ ಕಾಮೆಂಟ್ ಮಾಡಿದ್ದಾರೆ.  ಈ ಶ್ವಾನದ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಭಾರಿ ಶ್ಲಾಘನೆ ವ್ಯಕ್ತಪಡಿಸಿದ ನಂತರ ಅಡ್ಜರಾದ ಪ್ರವಾಸೋದ್ಯಮ ಇಲಾಖೆ ಈ ಶ್ವಾನಕ್ಕೆ ಪೀಪಲ್ಸ್ ಚಾಯಿಸ್ ಅವಾರ್ಡ್ ನೀಡಿ ಗೌರವಿಸಿದೆ ಎಂದು ತಿಳಿದು ಬಂದಿದೆ.

ಶ್ವಾನದ ಪೊಸೆಸಿವ್‌ನೆಸ್‌
ಶ್ವಾನಗಳು ಬಹಳ ಬುದ್ಧಿವಂತ ಪ್ರಾಣಿಗಳು ಮಕ್ಕಳೊಂದಿಗೆ ಅವುಗಳ ಒಡನಾಟ ಅಮೋಘವಾದುದು, ಪುಟ್ಟ ಮಕ್ಕಳೊಂದಿಗೆ ಶ್ವಾನಗಳು ಆಟವಾಡುವ ಹಲವು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ತಮ್ಮ ಮರಿಗಳಿಗೆ ಹೇಗೆ ಶ್ವಾನಗಳು ಕಾಳಜಿ ವಹಿಸುತ್ತವೋ ಅದೇ ರೀತಿ ಶ್ವಾನಗಳು ತನ್ನ ಮನುಷ್ಯ ಮಾಲೀಕರ ಪುಟ್ಟ ಮಕ್ಕಳ ಬಗ್ಗೆ ಅಮ್ಮನಂತೆ ಕಾಳಜಿ ವಹಿಸುತ್ತವೆ. ಇದರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಗುವೊಂದನ್ನು ಸೋಫಾದಲ್ಲಿ ಮಲಗಿಸಲಾಗಿದ್ದು ಪಕ್ಕದಲ್ಲಿ ಕಪ್ಪು ಬಣ್ಣದ ಶ್ವಾನವೊಂದು ಕುಳಿತಿದೆ. ಮಹಿಳೆ ಬಹುಶಃ ಮಗುವಿನ ತಾಯಿಯೋ ತಿಳಿಯದು ಮಗವನ್ನು ಮುಟ್ಟಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಶ್ವಾನ ಅವರ ಕೈಯನ್ನು ಬಾಯಲ್ಲಿ ನೋವಾಗದಂತೆ ಕಚ್ಚಿ ಹಿಡಿದು ಪಕ್ಕಕ್ಕೆ ಇಟ್ಟು ಬಿಡುತ್ತದೆ. ಮಹಿಳೆ ಮತ್ತೆ ಅದನ್ನೇ ಮಾಡಿದಾಗ ಶ್ವಾನ ಮತ್ತೊಂದು ಕೈಯಲ್ಲಿ ಮಹಿಳೆಯ ಕೈಯನ್ನು ಮಗುವಿನಿಂದ ದೂರು ಸರಿಸುತ್ತದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಸಾಮಾನ್ಯವಾಗಿ ಪುಟ್ಟ ಮಕ್ಕಳನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳಲಾಗುತ್ತದೆ. ಆಗ ತಾನೇ ಹುಟ್ಟಿದ ಮಕ್ಕಳಿಗೆ ಅಲರ್ಜಿ ರೋಗಗಳು ಕಾಡುವುದು ಸಾಮಾನ್ಯ ಇದೇ ಕಾರಣಕ್ಕೆ ಪೋಷಕರು ಮನೆಯಲ್ಲಿ ನವಜಾತ ಶಿಶುಗಳನ್ನು ಬಹಳ ಜಾಗರೂಕವಾಗಿ ನೋಡಿಕೊಳ್ಳುತ್ತಾರೆ. ಮಕ್ಕಳನ್ನು ಮುಟ್ಟಲು ಮುತ್ತಿಕ್ಕಲು ಅನೇಕ ತಾಯಂದಿರು ಬಿಡುವುದೇ ಇಲ್ಲ, ತುಂಬಾ ಸೂಕ್ಷ್ಮವಾದ ಮಗುವಿನ ಚರ್ಮ ಬೇಗ ಅಲರ್ಜಿಗೆ ಒಳಗಾಗುತ್ತದೆ ಎಂಬುದು ಇದಕ್ಕೆ ಕಾರಣ. ಈ ಕಾರಣದಿಂದಲೇ ಮಗುವಿನ ಸಮೀಪ ಸುಳಿಯಲು ಹೆಚ್ಚಿನವರು ಬಿಡುವುದಿಲ್ಲ. 

ಕುದುರೆ ಸವಾರಿ ಮಾಡುತ್ತಿರುವ ಶ್ವಾನ: ವೈರಲ್ ವಿಡಿಯೋ

ಆದರೆ ಇಲ್ಲಿ ಶ್ವಾನದ ವರ್ತನೆ ಹೇಗಿದೆ ಎಂದರೆ ಈ ಮಗು ನನ್ನದು ನಾನೇ ಹೆತ್ತಿದ್ದು, ಯಾರು ಇದನ್ನು ಮುಟ್ಟಬಾರದು ಮುಟ್ಟಿದ್ರೆ ಅಲರ್ಜಿ ಆಗುತ್ತೆ ಅಂತ ಶ್ವಾನ ಹೇಳುವಂತಿದೆ. ಲಾಪ್ಸ್‌ ಫಾರ್ ಆಲ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೊ ಅಪ್‌ಲೋಡ್ ಆಗಿದೆ. ಜುಲೈ 20 ರಂದು ವಿಡಿಯೋ ಅಪ್‌ಲೋಡ್ ಆಗಿದ್ದು, 1.4 ಮಿಲಿಯನ್ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ಕುದುರೆ ಸವಾರಿ ಮಾಡುತ್ತಿರುವ ಶ್ವಾನ: ವೈರಲ್ ವಿಡಿಯೋ

Follow Us:
Download App:
  • android
  • ios