Asianet Suvarna News Asianet Suvarna News

ಕುದುರೆ ಸವಾರಿ ಮಾಡುತ್ತಿರುವ ಶ್ವಾನ: ವೈರಲ್ ವಿಡಿಯೋ

ಅನಿಮೇಷನ್‌ ಸಿನಿಮಾವನ್ನು ಹೋಲುವಂತಹ ವಿಡಿಯೋವೊಂದು ಈಗ ವೈರಲ್ ಆಗಿದ್ದು, ವಿಡಿಯೋದಲ್ಲಿ ನಾಯಿಯೊಂದು ತನಗಿಂತ ಎತ್ತರದ ಪ್ರಾಣಿ ಎನಿಸಿರುವ ಕುದುರೆಯ ಮೇಲೇರಿ ಸವಾರಿ ಮಾಡುತ್ತಿದೆ.

dog rides horse video goes viral akb
Author
Bangalore, First Published Jul 20, 2022, 4:14 PM IST

ಸಾಮಾನ್ಯವಾಗಿ ಅನಿಮೇಷನ್‌ ಸಿನಿಮಾಗಳಲ್ಲಿ ಪ್ರಾಣಿಗಳು ಮತ್ತೊಂದು ಪ್ರಾಣಿಯನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಹೋಗುವುದು. ಸಹಾಯ ಮಾಡುವುದು ಕುದುರೆ ಸವಾರಿ ಮಾಡುವುದು ಮುಂತಾದ ವಿಡಿಯೋಗಳನ್ನು ನೋಡಿರಬಹುದು. ಅದರೆ ಹೀಗೆ ಅನಿಮೇಷನ್‌ ಸಿನಿಮಾವನ್ನು ಹೋಲುವಂತಹ ವಿಡಿಯೋವೊಂದು ಈಗ ವೈರಲ್ ಆಗಿದ್ದು, ವಿಡಿಯೋದಲ್ಲಿ ನಾಯಿಯೊಂದು ತನಗಿಂತ ಎತ್ತರದ ಪ್ರಾಣಿ ಎನಿಸಿರುವ ಕುದುರೆಯ ಮೇಲೇರಿ ಸವಾರಿ ಮಾಡುತ್ತಿದೆ. ರಸ್ತೆಯಲ್ಲಿ ಶ್ವಾನದ ನಿರ್ದೇಶನದಂತೆ ಕುದುರೆಯೂ ಸಾಗುತ್ತಿರುವುದನ್ನು ಕಾಣಬಹುದು. 

ಯೋಧ ಫಾರೆವರ್‌ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಅಪ್‌ಲೋಡ್ ಆಗಿದ್ದು, ಇದನ್ನು ಸುಮಾರು 400,000 ಜನ ವೀಕ್ಷಿಸಿದ್ದಾರೆ. ಜೊತೆಗೆ  20,000 ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಈ ದೃಶ್ಯ ಬಾಲಿವುಡ್‌ ಚಲನಚಿತ್ರ ವೆಲ್ಕಮ್‌ನ ಮಜ್ನು ಭಾಯ್ ಅವರ ಪೇಂಟಿಂಗ್ ಅನ್ನು ಹೋಲುತ್ತಿದೆ ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ. 

ಸಿಂಕ್‌ನ್ನೇ ಬಾತ್‌ಟಬ್‌ ಆಗಿಸಿಕೊಂಡ ಸ್ಮಾರ್ಟ್‌ ಬೆಕ್ಕು: ನಲ್ಲಿ ತಿರುಗಿಸಿ ಸ್ನಾನ... ವಿಡಿಯೋ

ಇತ್ತ ನಾಯಿಯನ್ನು ತನ್ನ ಬೆನ್ನಮೇಲೆ ನಿಲ್ಲಿಸಿಕೊಂಡಿರುವ ಕುದುರೆ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಟ್ರಾಫಿಕ್ ಸಿಗ್ನಲ್ ಬಿದ್ದಾಗ ನಿಂತುಕೊಳ್ಳುವುದನ್ನು ಕಾಣಬಹುದು. ಇದು ಸಾಮಾಜಿಕ ಜಾಲತಾಣದ ಯುಗವಾಗಿದ್ದು, ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್‌ಫೋನ್‌ಗಳಿದ್ದು, ಪ್ರತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗುವುದರ ಜೊತೆಗೆ ವೈರಲ್ ಆಗುತ್ತಿದೆ. ಅದರಲ್ಲಿ ಪ್ರಾಣಿಗಳ ವಿಡಿಯೋವಂತೂ ಸಾಕಷ್ಟು ಜನಪ್ರಿಯವಾಗುತ್ತಿವೆ. 

 

ಹಾಗೆಯೇ ಶ್ವಾನವೊಂದು ತಾನೇ ಸ್ನಾನ ಮಾಡುತ್ತಿರುವ ವಿಡಿಯೋವೊಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ನಾಯಿಗಳು ಸಾಮಾನ್ಯವಾಗಿ ಸ್ನಾನ ಮಾಡುವುದು ಎಂದರೆ ಮಾರು ದೂರ ಓಡುತ್ತವೆ. ಶ್ವಾನದ ಮಾಲೀಕರು ತಮ್ಮ ಮುದ್ದಾದ ನಾಯಿಗೆ ಸ್ನಾನ ಮಾಡಿಸಲು ಹರ ಸಾಹಸವನ್ನೇ ಮಾಡುತ್ತಾರೆ. ಆದರೆ ಇಲ್ಲೊಂದು ಶ್ವಾನದ ಮರಿ ಮಾತ್ರ ವಿಭಿನ್ನ. ಇದಕ್ಕೆ ಶ್ವಾನ ಮಾಡುವುದೆಂದರೆ ತುಂಬಾ ಇಷ್ಟ. ಬಹುಶ ಈ  ಶ್ವಾನ ತನ್ನ ಮಾಲಕರು ಶವರ್‌ನಲ್ಲಿ ಸ್ನಾನ ಮಾಡುವುದನ್ನು ನೋಡಿರಬೇಕು ಎಂದೆನಿಸುತ್ತದೆ. ಏಕೆಂದರೆ ಇದು ಕೈ ತೊಳೆಯುವಂತಹ ಸಿಂಕ್‌ಗೆ ಇಳಿದು ಟ್ಯಾಪ್‌ಗ ತಲೆಯೊಡ್ಡಿ ಸ್ನಾನ ಮಾಡುತ್ತಿದೆ. ಮೇಲಿಂದ ಬೀಳುವ ನೀರನ್ನು ಆನಂದಿಸುವ ಈ ನಾಯಿ ಮರಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಾಕಷ್ಟು ಜನ ವೀಕ್ಷಿಸಿದ್ದಾರೆ. ಮುದ್ದಾದ ಶ್ವಾನಗಳ ಮೋಜಿನಾಟದ ಸಾಕಷ್ಟು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಂತಹದ್ದೇ ವಿಡಿಯೋ ಇದಾಗಿದ್ದು, ಸಿಂಕ್‌ನೊಳಗೆ ಕೂರುವ ಶ್ವಾನ ಅಲ್ಲೇ ಸ್ನಾನವೂ ಮಾಡಬೇಕೆಂದು ಬಯಸುತ್ತದೆ. ನೀರನ್ನು ಬಹಳ ಇಷ್ಟಪಡುವ ಈ ಶ್ವಾನ ನೀರು ಬೀಳುವ ನಲ್ಲಿಗೆ ಸರಿಯಾಗಿ ತಲೆಯನ್ನು ಹಿಡಿದು ಮೇಲಿನಿಂದ ಬೀಳುವ ನೀರನ್ನು ಆಸ್ವಾದಿಸುತ್ತದೆ. ಶ್ವಾನ ಸ್ನಾನ ಮಾಡಲು ನಿರ್ಧರಿಸಿದೆ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.

ಸಿಂಕ್‌ನ್ನೇ ಬಾತ್‌ಟಬ್‌ ಆಗಿಸಿಕೊಂಡ ಸ್ಮಾರ್ಟ್‌ ಬೆಕ್ಕು: ನಲ್ಲಿ ತಿರುಗಿಸಿ ಸ್ನಾನ... ವಿಡಿಯೋ

ಈ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ಈ ವೀಡಿಯೊ ವೈರಲ್ ಆಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ.ಅಲ್ಲದೇ ಶ್ವಾನಪ್ರಿಯರು ಇದಕ್ಕೆ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ. ನೀವು ಈ ಶ್ವಾನಕ್ಕೆ ಯಾವ ರೀತಿ ಬುದ್ಧಿ ಕಲಿಸಿದ್ದೀರಾ ಎಂಬುದನ್ನು ನಾನು ತಿಳಿಯಬೇಕು. ನಾನು ನನ್ನ ಶ್ವಾನಕ್ಕೆ ಕಳೆದ ಒಂದು ಗಂಟೆಯಿಂದ ಸ್ನಾನ ಮಾಡಲು ಯತ್ನಿಸಿ ಕೊನೆಗೂ ಆ ಪ್ರಯತ್ನವನ್ನು ಕೈಬಿಟ್ಟೆ. ನಿಜವಾಗಿಯೂ ತಾನೇ ಇಷ್ಟಪಟ್ಟು ಸ್ನಾನ ಮಾಡುವ ಶ್ವಾನವನ್ನು ನಾನು ಎಲ್ಲೂ ನೋಡಿಲ್ಲ ಎಂದು ಒಬ್ಬರು ಈ ವಿಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ. 
 

Follow Us:
Download App:
  • android
  • ios