ನ್ಯೂಯಾರ್ಕ್ ಶಾಲೆಗಳಿಗೆ ದೀಪಾವಳಿಗೆ 2023 ರಿಂದ ಒಂದು ದಿನ ಅಧಿಕೃತ ರಜೆ ನೀಡಲಾಗುತ್ತದೆ. ಈ ಬಗ್ಗೆ ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಘೋಷಣೆ ಮಾಡಿದ್ದಾರೆ.
(ವರದಿ - ಬೆಂಕಿ ಬಸಣ್ಣ, ನ್ಯೂಯಾರ್ಕ್, ಅಮೆರಿಕ)
ನ್ಯೂಯಾರ್ಕ್: ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಅಮೆರಿಕ ದೇಶದ ನ್ಯೂಯಾರ್ಕ್ ಸಿಟಿಯ ಶಾಲೆಗಳಲ್ಲಿ ಮುಂದಿನ ವರ್ಷದಿಂದ (2023 ರಿಂದ) ಒಂದು ದಿನದ ರಜೆಯನ್ನು ಘೋಷಿಸಲಾಗಿದೆ. ಈ ಬಗ್ಗೆ ನ್ಯೂಯಾರ್ಕ್ ಸಿಟಿಯ ಮೇಯರ್ ಎರಿಕ್ ಆಡಮ್ಸ್ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯದ ಅಸೆಂಬ್ಲಿ ವುಮನ್ ಜೆನ್ನಿಫರ್ ರಾಜಕುಮಾರ್ ಮತ್ತು ಶಿಕ್ಷಣ ಇಲಾಖೆಯ ಚಾನ್ಸಲರ್ ಡೇವಿಡ್ ಬ್ಯಾಂಕ್ ಉಪಸ್ಥಿತರಿದ್ದರು. ಇದು ನ್ಯೂಯಾರ್ಕ್ ಸಿಟಿಯಲ್ಲಿ ವಾಸಿಸುತ್ತಿರುವ 2 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಅತಿ ಸಂತೋಷದ ಸುದ್ದಿಯಾಗಿದೆ. ಬರುವ ವರ್ಷದಿಂದ ಆ್ಯನಿವರ್ಸರಿ ಡೇ (ವಾರ್ಷಿಕ ದಿನಾಚರಣೆ) ಬದಲಾಗಿ ದೀಪಾವಳಿಯ ದಿವಸ ರಜೆಯನ್ನು ಕೊಡಲಾಗುವುದು. ದೀಪಾವಳಿಯನ್ನು ಹಿಂದೂಗಳು ಮಾತ್ರವಲ್ಲದೆ ಬೌದ್ಧ, ಸಿಖ್ ಮತ್ತು ಜೈನ ಧರ್ಮದವರು ಆಚರಿಸುತ್ತಾರೆ.
ಇದನ್ನು ಓದಿ: Deepavali in America: ಆರೋಗ್ಯ ವೃದ್ಧಿಸುವ ತೈಲಾಭ್ಯಂಜನ, ಪುತ್ತಿಗೆ ಶ್ರೀಪಾದರು
