Deepavali in America: ಆರೋಗ್ಯ ವೃದ್ಧಿಸುವ ತೈಲಾಭ್ಯಂಜನ, ಪುತ್ತಿಗೆ ಶ್ರೀಪಾದರು
ಅಮೆರಿಕ(ನ.05): ಮಹಾಲಕ್ಷ್ಮಿಯ(Mahalakshmi) ದಿವ್ಯ ಸನ್ನಿಧಾನವಿರುವ ತೈಲಾಭ್ಯಂಜನವು ಆರೋಗ್ಯದ(Health) ಅಭಿವೃದ್ಧಿಗೆ ಕಾರಣವಾಗಿದೆ. ನರಕಾಸುರನನ್ನು ಸಂಹರಿಸಿ ಸಜ್ಜನರನ್ನು ಸಂರಕ್ಷಿಸಿದ ಶ್ರೀಕೃಷ್ಣನ ಸಂಪ್ರೀತಿಗಾಗಿ ದೀಪಾವಳಿಯ ಚತುರ್ದಶಿಯಂದು ಎಲ್ಲರೂ ತಪ್ಪದೇ ತೈಲಾಭ್ಯಂಜನವನ್ನು ಮಾಡಬೇಕು ಎಂದು ಹಿರಿಯರಿಂದ ಆಶೀರ್ವಾದದ ರೂಪದಲ್ಲಿ ತೈಲವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು(Shri Surugendra Tiirthapaadaru) ತಿಳಿಸಿದ್ದಾರೆ.

ಅಮೆರಿಕದ(America) ಸ್ಯಾನ್ ಝೋನ್ ಮಹಾನಗರದಲ್ಲಿರುವ ಶ್ರೀಕೃಷ್ಣ ವೃಂದಾವನದಲ್ಲಿ(Sri Krishna Vrindavan) ದೀಪಾವಳಿಯ(Deepavali) ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು
ಎಲ್ಲರಿಗೂ ತೈಲವನ್ನು ಹಚ್ಚಿ ವಿಶೇಷವಾಗಿ ಮಕ್ಕಳಿಗೂ ತೈಲವನ್ನು ಹಚ್ಚಿ ಅನುಗ್ರಹಿಸಿದ್ದ ಶ್ರೀಗಳು. ಈ ಸಂದರ್ಭದಲ್ಲಿ ಅನೇಕ ಭಕ್ತರು ಭಾಗವಹಿಸಿ ಶ್ರೀಪಾದರ ಅನುಗ್ರಹವನ್ನು ಪಡೆದಿದ್ದಾರೆ.
ನರಕಾಸುರನನ್ನು ಸಂಹರಿಸಿ ಸಜ್ಜನರನ್ನು ಸಂರಕ್ಷಿಸಿದ ಶ್ರೀಕೃಷ್ಣನ ಸಂಪ್ರೀತಿಗಾಗಿ ದೀಪಾವಳಿಯ ಚತುರ್ದಶಿಯಂದು ಎಲ್ಲರೂ ತಪ್ಪದೇ ತೈಲಾಭ್ಯಂಜನವನ್ನು ಮಾಡಬೇಕು ಎಂದ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು
ಅಮೆರಿಕದ ಸ್ಯಾನ್ ಝೋನ್ ಮಹಾನಗರದಲ್ಲಿರುವ ಶ್ರೀಕೃಷ್ಣ ವೃಂದಾವನದಲ್ಲಿ ಸಂಭ್ರಮದ ದೀಪಾವಳಿ. ಈ ಕಾರ್ಯಕ್ರಮದಲ್ಲಿ ಶ್ರೀಗಳು ಪಾಲ್ಗೊಂಡಿದ್ದರಿಂದ ಅಮೆರಿಕದಲ್ಲಿರುವ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ